ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಗ್ರಿ ಸರ್ಟಿಫಿಕೇಟ್ ನಲ್ಲಿ ತಂದೆಯ ಹೆಸರು ಕಡ್ಡಾಯವಲ್ಲ

ಡಿಗ್ರಿ ಸರ್ಟಿಫಿಕೇಟ್ ಗಳಲ್ಲಿ ತಂದೆಯ ಹೆಸರು ಕಡ್ಡಾಯವೇನಲ್ಲ, ತಂದೆ ಹೆಸರಿನ ಬದಲಿಗೆ ತಾಯಿಯ ಹೆಸರನ್ನೂ ಬಳಸಬಹುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಮೇ 30: ಯುನಿವರ್ಸಿಟಿ ಗ್ರಾಂಟ್ಸ್ ಕಮಿಶನ್ (ಯುಜಿಸಿ) ಡಿಗ್ರಿ ಸರ್ಟಿಫಿಕೇಟ್ ಗಳಲ್ಲಿ ತಂದೆಯ ಹೆಸರು ಕಡ್ಡಾಯವೇನಲ್ಲ, ತಂದೆ ಹೆಸರಿನ ಬದಲಿಗೆ ತಾಯಿಯ ಹೆಸರನ್ನೂ ಬಳಸಬಹುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

ತಂದೆಯಿಲ್ಲದ ಅಥವಾ ಪರಿತ್ಯಕ್ತರಾದ ಮಹಿಳೆಯರ ಮಕ್ಕಳು ಡಿಗ್ರಿ ಸರ್ಟಿಫಿಕೇಟ್ ಗಳಲ್ಲಿ ಕಡ್ಡಾಯವಾಗಿ ತಂದೆಯ ಹೆಸರನ್ನು ಉಲ್ಲೇಖಿಸಲೇಬೇಕಾದ ಅಗತ್ಯವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Father's name in degree certificate is not mandatory

ಪತಿಯಿಂದ ಪರಿತ್ಯಕ್ತರಾದ, ವಿಚ್ಛೇದಿತ ಪತ್ನಿಯರು ತಮ್ಮ ಮಕ್ಕಳು ಅವರ ಪದವಿ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ಉಲ್ಲೇಖಿಸದೆ ಇರುವುದಕ್ಕೆ ಅನುಮತಿ ನೀಡಬೇಕೆಂದು ಕೋರಿದ ಮನವಿಯನ್ವಯ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಇಂಥ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ.

ಈ ನಿರ್ಣಯ ಇನ್ನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

English summary
Father's name in degree certificate is not mandatory: Ministry for Human resources development will soon take a decision on this, HRD Ministry Prakash Javdekar told in an interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X