ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಮಗುವಿಗೂ ತಾಯಿಯ ಹೆಸರನ್ನು ಉಪನಾಮವಾಗಿ ಬಳಸುವ ಹಕ್ಕಿದೆ: ದೆಹಲಿ ಹೈಕೋರ್ಟ್

|
Google Oneindia Kannada News

ನವದೆಹಲಿ, ಆಗಸ್ಟ್‌ 06: ಪ್ರತಿ ಮಗುವಿಗೆ ತನ್ನ ತಾಯಿಯ ಹೆಸರನ್ನು ಉಪನಾಮವಾಗಿ ಆಯ್ಕೆ ಮಾಡುವ ಹಕ್ಕಿದೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.

ಅಪ್ರಾಪ್ತ ಬಾಲಕಿಯ ತಂದೆ ಸಲ್ಲಿಸಿದ ಮನವಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯ ಈ ನಿರ್ದೇಶನ ನೀಡಿದ್ದು, ಯಾವುದೇ ಕಾರಣಕ್ಕೂ ಮಗಳು ನನ್ನ ಹೆಸರನ್ನೇ ಉಪನಾಮವಾಗಿ ಹಾಕಿಕೊಳ್ಳಬೇಕು, ತಾಯಿಯದ್ದಲ್ಲ ಎಂದು ತಂದೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ರೇಖಾ ಪಲ್ಲಿ, ಮನವಿಗೆ ಅನುಮತಿ ನೀಡಲು ನಿರಾಕರಿಸಿದರು. ಮಗಳು ತನ್ನ ಉಪನಾಮವನ್ನು ಮಾತ್ರ ಬಳಸಬೇಕೆಂದು ಅಪ್ಪನಿಗೆ ಹಕ್ಕಿಲ್ಲ. ಮಗಳು ತಾಯಿಯ ಉಪನಾಮದಿಂದ ಸಂತೋಷವಾಗಿದ್ದರೆ ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸಿದರು.

Father Does Not Own Daughter; Every Child Has Right To Use Mothers Surname

ಅರ್ಜಿದಾರರ ಪರವಾಗಿ ಹಾಜರಾದ ನ್ಯಾಯವಾದಿ ಅನುಜ್ ಕುಮಾರ್ ರಂಜನ್ ಅವರು ಅಪ್ರಾಪ್ತ ಮಕ್ಕಳು ಈ ವಿಷಯವನ್ನು ಎಂದಿಗೂ ಸ್ವತಃ ನಿರ್ಧರಿಸುವುದಿಲ್ಲ ಎಂದರು. ದೂರವಾದ ಪತ್ನಿ ಮಗುವಿನ ಹೆಸರಿನ ಮುಂದಿನ ಉಪನಾಮವನ್ನು ಶ್ರೀವತ್ಸದಿಂದ ಸಕ್ಸೇನಾಕ್ಕೆ ಬದಲಿಸಿದ್ದಾರೆ.

ಅರ್ಜಿದಾರರು/ತಂದೆ ಹೆಸರು ಬದಲಾವಣೆಯು ಎಲ್‌ಐಸಿಯಿಂದ ವಿಮಾ ಮೊತ್ತವನ್ನು ಪಡೆಯಲು ಕಷ್ಟವಾಗುತ್ತದೆ ಏಕೆಂದರೆ ಮಗುವಿನ ಹೆಸರಿನಲ್ಲಿ ತನ್ನ ತಂದೆಯ ಉಪನಾಮದೊಂದಿಗೆ ಪಾಲಿಸಿಯನ್ನು ತೆಗೆದುಕೊಳ್ಳಲಾಗಿದೆ.

ಅರ್ಜಿದಾರರ ವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ, ನ್ಯಾಯಮೂರ್ತಿ ರೇಖಾ ಪಲ್ಲಿ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದರು. ಆದರೆ ಮಗಳ ಶಾಲೆಯಲ್ಲಿ ತಂದೆಯ ಉಪನಾಮವನ್ನು ಬಳಕೆ ಮಾಡಬಹುದು ಎಂದು ಒಪ್ಪಿಗೆ ಸೂಚಿಸಲಾಯಿತು.

ನಮ್ಮದು ಪ್ರಾಚೀನ ಕಾಲದಿಂದಲೂ ಪುರುಷ ಪ್ರಧಾನ ಸಮಾಜ. ಇದಕ್ಕೆ ಸಮಾಜ ಮಾತ್ರವೇ ಕಾರಣವಲ್ಲ. ಪ್ರಕೃತಿಯೇ ಅವಳನ್ನು ಪುರುಷನಿಗಿಂತ ಶಾರೀರಿಕವಾಗಿ ದುರ್ಬಲಳನ್ನಾಗಿ ಸೃಷ್ಟಿಸಿದೆ. ಹೀಗಾಗಿ ಮಹಿಳೆಯ ರಕ್ಷಣೆಗೆ ಪುರುಷನ ಆಸರೆಯ ಅವಶ್ಯಕತೆ ಇರುತ್ತದೆ.

ಆದ್ದರಿಂದ ಒಂದು ಹೆಣ್ಣು, ಹುಟ್ಟಿದ ನಂತರ ತಂದೆಯ ಆಸರೆ, ಆಮೇಲೆ ಸೋದರನ ಆಸರೆ, ನಂತರ ಪತಿಯ ಆಸರೆ, ವೃದ್ಧಾಪ್ಯದಲ್ಲಿ ಮಗನ ಆಸರೆಯಲ್ಲಿದ್ದುಕೊಂಡು ರಕ್ಷಣೆ ಪಡೆಯುತ್ತಾಳೆ. ರಕ್ಷಕನು ಉತ್ತಮನಾಗಿದ್ದಾಗ ಮಾತ್ರ ಸರಿಯಾಗಿ ರಕ್ಷಣೆ ನೀಡಲು ಸಾಧ್ಯ. ಆದ್ದರಿಂದ ಪುರುಷನು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಗಿಂತ ಉತ್ತಮನಾಗಿರಬೇಕಾಗುತ್ತದೆ.

ಕೇವಲ ಶಾರೀರಿಕ ರಕ್ಷಣೆಗಾಗಿ ಮಹಿಳೆಯು ಪುರುಷನನ್ನು ಅವಲಂಬಿಸುತ್ತಾಳೆಯೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲ, ಅವಳಿಗೆ ಆರ್ಥಿಕ ಮತ್ತು ಸಾಮಾಜಿಕ ರಕ್ಷಣೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ ಪದ್ಧತಿ ಇತ್ತು. ಇದರಿಂದ ಹುಡುಗಿಯರು ಅತ್ತೆ ಮನೆಯ ಹೊಸ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲವರಾಗಿದ್ದರು.

ಅವರಿಗೆ ವಿದ್ಯೆ ಕಲಿಯುವ ಅವಕಾಶವಿರಲಿಲ್ಲ. ಹೀಗಾಗಿ ಅವರು ಆರ್ಥಿಕ ದೃಷ್ಟಿಯಿಂದ ಸಂಪೂರ್ಣವಾಗಿ ಪುರುಷರ ಮೇಲೆ ಅವಲಂಬಿತರಾಗುತ್ತಿದ್ದರು. ಸಮಾಜದಲ್ಲಿ ಮಹಿಳೆಯನ್ನು ಮದುವೆಗೆ ಮೊದಲು ತಂದೆಯ ಹೆಸರಿನಿಂದ ಮತ್ತು ಮದುವೆಯ ನಂತರ ಪತಿಯ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಅವಳಿಗೆ ತನ್ನದೇ ಆದ ವ್ಯಕ್ತಿತ್ವವಿರುತ್ತಿರಲಿಲ್ಲ.

ಒಂದು ಹೆಣ್ಣು ಮಗುವಿಗೆ ತಂದೆ ಅಥವಾ ಅಣ್ಣನಿಲ್ಲದಿದ್ದರೆ ಆಕೆಗೆ ಅಸುರಕ್ಷತಾ ಭಾವನೆ ಕಾಣುತ್ತಿತ್ತು. ಅವಳಿಗೆ ಆರ್ಥಿಕ ಕೊರತೆಯೂ ಉಂಟಾಗಿ ವಿವಾಹಕ್ಕೂ ತೊಂದರೆಯಾಗುತ್ತಿತ್ತು. ವಿವಾಹದ ನಂತರ ಕಾರಣಾಂತರದಿಂದ ಅವಳ ಪತಿ ಮೃತ್ಯುವಶನಾದ ಅಥವಾ ಅವಳನ್ನು ದೂರೀಕರಿಸಿದರೆ ಅವಳನ್ನು ಸಮಾಜ ಅಪರಾಧಿ ಭಾವದಿಂದ ನೋಡುತ್ತಿತ್ತು. ಅವಳಿಗೆ ಪುನರ್ವಿವಾಹಕ್ಕೂ ಅನುಮತಿ ಇರುತ್ತಿರಲಿಲ್ಲ, ಯಾವುದೇ ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಅವಳ ದಿನಚರಿಗೊಂದು ಸೀಮಾರೇಖೆಯನ್ನು ರಚಿಸಿ, ಸ್ವಾತಂತ್ರ್ಯಹರಣ ಮಾಡಲ್ಪಡುತ್ತಿತ್ತು.

ಅವಳು ಪುರುಷರ ಕಾಮುಕ ದೃಷ್ಟಿಗೆ ಬಲಿಯಾಗಿ ಅವಳ ಜೀವನ ದುರ್ಭರವಾಗುತ್ತಿತ್ತು. ಹೀಗೆ ಪತಿಯಿಲ್ಲದ ಮಹಿಳೆಯ ಜೀವನ ಚುಕ್ಕಾಣಿ ಇಲ್ಲದ ನಾವೆಯಂತೆ ಹೊಯ್ಡಾಡುತ್ತಿತ್ತು. ಆರ್ಥಿಕ ಬೆಂಬಲ ಇಲ್ಲದ ಕಾರಣ ಅವಳು ಕುಟುಂಬದರ ದಯೆಗೆ ಪಾತ್ರಳಾಗಿ ಜೀವನ ನಡೆಸಬೇಕಿತ್ತು. ಪುರುಷನೇ ಮಹಿಳೆಗೆ ಶಾರೀರಿಕ, ಸಾಮಾಜಿಕ, ಆರ್ಥಿಕ ಮತ್ತು ಕೆಲವೊಮ್ಮೆ ಮಾನಸಿಕ ರಕ್ಷಣೆಗೂ ವಿಮಾ ಪಾಲಿಸಿಯಾಗಿದ್ದನು.

ಈಗ ಕಾಲ ಬದಲಾಗಿದೆ. ಮಹಿಳೆಯರು ಓದು, ಬರಹ ಕಲಿತು ನಿರಾವಲಂಬಿಗಳೂ ಮತ್ತು ತಮ್ಮ ಹಕ್ಕು ಅಧಿಕಾರಗಳ ಬಗ್ಗೆ ಜಾಗರೂಕರೂ ಆಗಿದ್ದಾರೆ. ಈಗ ಅವರಿಗೆ ತಮ್ಮನ್ನು ಗುರುತಿಸಿಕೊಳ್ಳಲು ಯಾರ ಅಗತ್ಯ ಇಲ್ಲ. ಅವರು ಇಂದು ಎಲ್ಲ ಕಾರ್ಯಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾರೆ ಮತ್ತು ಸಮಾಜದಲ್ಲಿ ಗೌರವವನ್ನು ಗಳಿಸುತ್ತಿದ್ದಾರೆ. ಅವರು ಆರ್ಥಿಕವಾಗಿ ಸ್ವತಂತ್ರರಾಗಿರುವುದೇ ಇದಕ್ಕೆ ಮುಖ್ಯ ಕಾರಣ.

ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹುಟ್ಟಿದೆ ಮತ್ತು ಯಾವುದೇ ವಿಷಯದ ಬಗ್ಗೆ ಸ್ವತಃ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ. ಅವರೀಗ ತಮ್ಮ ವಿವಾಹಪೂರ್ವ ಸರ್‌ನೇಮ್ ನೊಂದಿಗೇ ಪತಿಯ ಸರ್‌ನೇಮ್ ನ್ನು ಜೋಡಿಸಿಕೊಳ್ಳತೊಡಗಿದ್ದಾರೆ.

ಪಿತ್ರಾರ್ಜಿತ ಸಂಪತ್ತಿನಲ್ಲಿ ಮಗಳಿಗೂ ಮಗನ ಸರಿಸಮನಾದ ಹಕ್ಕು ದೊರೆಯುತ್ತಿದೆ. ವಿಧವೆಯರ ಮತ್ತು ವಿಚ್ಛೇದಿತೆಯ ಸ್ಥಿತಿಯೂ ಈಗ ಆರ್ಥಿಕ ಮತ್ತು ಸಾಮಾಜಿಕವಾಗಿ ಉತ್ತಮಗೊಂಡಿದೆ.

ಅವರಿಗೆ ಆಸ್ತಿಯಲ್ಲಿ ಭಾಗ ಸಿಗುತ್ತಿರುವುದರಿಂದ ಅವರು ಯಾರದೇ ದಯಾಭಿಕ್ಷೆಯಲ್ಲಿ ಬಾಳದೆ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಅವರಿಗೀಗ ಮರು ಮದುವೆಗೂ ಅವಕಾಶವಿದ್ದು, ಸಮಾಜದ ಕುಹಕ ರೀತಿ ನೀತಿಗಳನ್ನು ಎದುರಿಸಿ ನಿಲ್ಲಬಲ್ಲವರಾಗಿದ್ದಾರೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

English summary
Every child has a right to choose his/ her mother's name as the surname, the Delhi High Court observed on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X