• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ, ಇಲ್ಲ ದುಪ್ಪಟ್ಟು ಟೋಲ್ ಕಟ್ಟಿ

|

ನವದೆಹಲಿ, ಜುಲೈ 20: ಇನ್ನುಮುಂದೆ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ. ಒಂದೊಮ್ಮೆ ನಿಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಟಿ ಮುಂದೆ ಹೋಗಬೇಕಾಗುತ್ತದೆ.

ಹೌದು ಇದು ಸತ್ಯ, ಡಿಸೆಂಬರ್‌ನಲ್ಲಿ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ.ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೋಲ್ನ ಎಲ್ಲ ಲೇನ್‌ಗಳನ್ನೂ ಫಾಸ್ಟ್‌ಟ್ಯಾಗ್‌ ಲೇನ್‌ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಜುಲೈ 1 ರಿಂದ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

ಡಿಸೆಂಬರ್‌ 1 ರಿಂದ ಇದು ಜಾರಿಗೆ ಬರಲಿದೆ. ಫಾಸ್ಟ್‌ ಟ್ಯಾಗ್‌ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.ಇದೇ ವೇಳೆ ಒಂದು ಹೈಬ್ರಿಡ್‌ ಲೇನ್‌ ಕೂಡ ಇರಲಿದ್ದು, ಇದರಲ್ಲಿ ಫಾಸ್ಟ್‌ಟ್ಯಾಗ್‌ ಜೊತೆಗೆ ನಗದು ರೂಪದಲ್ಲೂ ಹಣ ಪಡೆಯಲಾಗುತ್ತದೆ.

ಮುಂದಿನ ದಿನಗಳಲ್ಲಿ ಈ ಲೇನ್‌ಗಳಲ್ಲಿ ಕೇವಲ ಫಾಸ್ಟ್‌ಟ್ಯಾಗ್‌ಗಳನ್ನು ಮಾತ್ರ ಸಮ್ಮತಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳು ಈ ಲೇನ್‌ಗಳ ಮೂಲಕ ಹಾದುಹೋಗುವುದಾದರೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಟೋಲ್ ಬಳಿ ವಾಹನವನ್ನು ನಿಲ್ಲಿಸಿ ಹಣ ನೀಡಿ ರಸೀದಿ ತೆಗೆದುಕೊಳ್ಳುವ ಕಿರಿಕಿರಿಯನ್ನು ಇದು ನಿವಾರಿಸುತ್ತದೆ.

ಸದ್ಯ ಎಲ್ಲ ಟೋಲ್‌ಗಳಲ್ಲೂ ಕೆಲವು ಲೇನ್‌ಗಳನ್ನು ಫಾಸ್ಟ್‌ಟ್ಯಾಗ್‌ ಸಿದ್ಧವಾಗಿಸಿದ್ದು, ಇಂತಹ ಲೇನ್‌ಗಳಲ್ಲಿ ನಗದು ಪಾವತಿ ಮಾಡುವವರೂ ಆಗಮಿಸುವುದರಿಂದಾಗಿ ಫಾಸ್ಟ್‌ಟ್ಯಾಗ್‌ನ ಮೂಲ ಉದ್ದೇಶವೇ ವಿಫ‌ಲವಾಗಿದೆ.

ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸಲೂ ಸಚಿವಾಲಯ ಮುಂದಾಗಿದೆ. ಹಾಗೆಯೇ ಟೋಲ್‌ ಪ್ಲಾಜಾದ ಕೊನೆಯ ಒಂದು ಲೈನನ್ನು ಫಾಸ್ಟ್‌ಟ್ಯಾಗ್ ರಹಿತ ವಾಹನಗಳಿಗಾಗಿ ಮೀಸಲಿಡಲಾಗಿದೆ.

ದೇಶಾದ್ಯಂತ ಡಿಸೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಹೊಂದಿರಬೇಕು. ಇಲ್ಲವಾದಲ್ಲಿ ದುಪ್ಪಟ್ಟು ನಗದು ನೀಡಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಮೊದಲು ಫ್ಯಾಸ್ಟ್‌ಟ್ಯಾಗ್ ಎಂದು ನಿಗದಿಯಾಗಿರುವ ಕಡೆಗೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಕೂಡ ಬಂದು ತೊಂದರೆ ಕೊಡುತ್ತಿದ್ದವು. ಅಷ್ಟೇ ಅಲ್ಲದೆ ಕೆಲವೊಮ್ಮೆ ಫಾಸ್ಟ್‌ಟ್ಯಾಗ್ ಎಂದು ಇರುತ್ತಿತ್ತು ಆದರೆ ಅದರ ರೀಡರ್ ಕೊರತೆ ಇರುತ್ತಿತ್ತು. ಒಟ್ಟಿನಲ್ಲಿ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನ ಸವಾರರಿಗೆ ನರಕವಾಗುತ್ತಿತ್ತು.

ಬೆಂಗಳೂರು-ನೆಲಮಂಗಲ ಎಕ್ಸ್‌ಪ್ರೆಸ್‌ ವೇ ಟೋಲ್ ದರ ಹೆಚ್ಚಳವಾಗಿದೆ. ನೆಲಮಂಗಲದ ಮೂಲಕ ತುಮಕೂರಿಗೆ ಹೋಗುವವರಿಗೆ ಬಿಸಿ ತಟ್ಟಿದೆ. ಕಾರು, ಜೀಪು, ಲಘು ವಾಹನಗಳು, ಮಿನಿ ಬಸ್ ಏಕಮುಖ ಪ್ರಯಾಣ ದರ ಅಷ್ಟೇ ಇರಲಿದೆ.

ಆದರೆ ನಿತ್ಯದ ಬಸ್‌ ಪಾಸಿನ ದರ ಮಾತ್ರ ಐದು ರೂ ಹೆಚ್ಚಳವಾಗಿದೆ.

ಕಾರು, ಜೀಪುಗಳ ತಿಂಗಳ ಪಾಸಿನ ದರ 50 , ಲಘು ವಾಹನಗಳು, ಮಿನಿಬಸ್ ಪಾಸಿನ ದರ 75 ರೂ, ಬಸ್, ಟ್ರಕ್‌ಗಳ ದರವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಇಲ್ಲ.

ಬೆಂಗಳೂರಿನ ನವಯುಗ ಟೋಲ್ ಪ್ರೈವೇಟ್ ಲಿಮಿಟೆಡ್ ಭಾನುವಾರ ಟೋಲ್ ದರ ಪ್ರಕಟಿಸಿದೆ. 19.5 ಕಿ.ಮೀಗೆ ದರ ಪರಿಷ್ಕರಣೆ ಮಾಡಿದೆ. ನಿತ್ಯ 45,000 ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಮಾರ್ಗದ ಟೋಲ್ ದರ ಹೆಚ್ಚಳ ಮಾಡಲಾಗಿತ್ತು.

ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ.ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್‌, ಬಸ್‌ಗಗಳಿಗೆ 120 ರೂ ನೀಡಬೇಕಿದೆ.

ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್‌ ಗಳು 3,930 ರೂ ಪಾವತಿಸುತ್ತಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಸಿಟಿ, ಅತ್ತಿಬೆಲೆ ಮಾರ್ಗದಲ್ಲಿ ನಿತ್ಯ ಸಂಚರಿಸುವವರು ಜುಲೈ 1 ರಿಂದ ಟೋಲ್ ದರ ಹೆಚ್ಚಳವಾಗಿದೆ. ಎಲೆಕ್ಟ್ರಾನಿಕ್ಸ್‌ ಸಿಟಿಯಿಂದ ನಗರಕ್ಕೆ ಬರುವವರು ಹೋಗುವ ಮಾರ್ಗದಲ್ಲಿ 5 ರೂ, ಹಿಂದಿರುಗುವಾಗ 5 ರೂ ಒಟ್ಟು 10 ರೂ ಹೆಚ್ಚಿಗೆ ಹಣ ಪಾವತಿಸಬೇಕಿದೆ.

ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ.

ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್‌, ಬಸ್‌ಗಗಳಿಗೆ 120 ರೂ ನೀಡಬೇಕಿದೆ.

ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್‌ ಗಳು 3,930 ರೂ ಪಾವತಿಸುತ್ತಿದ್ದಾರೆ.

ಐಟಿ ಸಿಬ್ಬಂದಿಗಳು ಬೆಂಗಳೂರು ನಗರದಿಂದ ನಿತ್ಯ ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಹೋಗುತ್ತಾರೆ. 18 ಕಿ.ಮೀ ರಸ್ತೆಯಲ್ಲಿ 55,000 -60 ಸಾವಿರ ವಾಹನಗಳು ಸಂಚರಿಸುತ್ತವೆ.

ಹೋಲ್‌ಸೇಲ್ ಇಂಡೆಕ್ಸ್ ಪ್ರೈಸ್ ಪ್ರಕಾರ ಟೋಲ್ ಮೊತ್ತವನ್ನು ಏರಿಕೆ ಮಾಡಲಾಗುತ್ತಿದೆ. ಟೋಲ್ ದರ ಹೆಚ್ಚಾದರೆ ಆ ಮಾರ್ಗದಲ್ಲಿ ಸಂಚರಿಸುವ ಬಸ್‌ ಟಿಕೆಟ್ ದರ ಕೂಡ ಹೆಚ್ಚಾಗಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fasttag compulsory for All vehicles from December 1, To Cross a toll plaza on any National Highway if your vehicle doesn't have fasttag will have to pay double.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more