ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯ ಅಸತ್ಯಾಗ್ರಹದಿಂದ ರೈತರಿಗೆ ನಂಬಿಕೆ ಹೋಗಿದೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಡಿಸೆಂಬರ್ 30: ಪ್ರಧಾನಿ ನರೇಂದ್ರ ಮೋದಿಯವರ ಅಸತ್ಯಾಗ್ರಹದಿಂದಾಗಿ ರೈತರಿಗೆ ನಂಬಿಕೆ ಕಳೆದುಹೋಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಅಸತ್ಯಾಗ್ರಹದ ಇತಿಹಾಸದಿಂದಾಗಿ ಮೋದಿ ಮೇಲೆ ರೈತರಿಗೆ ನಂಬಿಕೆಯಿಲ್ಲ, 50 ದಿನ ಸಮಯ ಕೊಡಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ಮತ್ತು ಪ್ರತಿಯೊಬ್ಬರು ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಭರವಸೆ ನೀಡಿದ್ದರು.

ಸೋನಿಯಾ, ರಾಹುಲ್ ವಿರುದ್ಧ ಹೇಳಿಕೆ: ಶಿವಸೇನೆಗೆ ಕಾಂಗ್ರೆಸ್ ಎಚ್ಚರಿಕೆಸೋನಿಯಾ, ರಾಹುಲ್ ವಿರುದ್ಧ ಹೇಳಿಕೆ: ಶಿವಸೇನೆಗೆ ಕಾಂಗ್ರೆಸ್ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರಿಗೆ ಪ್ರಧಾನಿ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ. ಭಾರತ ಈಗ ಕಾಲ್ಪನಿಕ ಪ್ರಜಾಪ್ರಭುತ್ವದಲ್ಲಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದರು.

Farmers Dont Trust PM Due To His History Of Asatyagraha Rahul Gandhi

21 ದಿನಗಳಲ್ಲಿ ಕೊರೊನಾ ಗೆಲ್ಲುವುದಾಗಿ ಹೇಳಿದ್ದರು, ಹೀಗಾಗಿ ಮೋದಿ ಅವರ ಸುಳ್ಳುಗಳಿಂದಾಗಿ ರೈತರು ಅವರ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ನಿತ್ಯ ಒಂದಲ್ಲಾ ಒಂದು ಟ್ವೀಟ್ ಮಾಡುತ್ತಲೇ ಇದ್ದಾರೆ.

English summary
Taking a dig at Prime Minister Narendra Modi on Wednesday, Congress leader Rahul Gandhi said the farmers do not trust the prime minister due to his "long history of asatyagraha".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X