ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಘು ಗಡಿಯಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಸಿಖ್ ಸಂತ

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ಪಂಜಾಬ್ ಮತ್ತು ಹರಿಯಾಣ ರೈತರ ಆಂದೋಲನವು ಮತ್ತೊಂದು ಹಂತಕ್ಕೆ ತಲುಪಿದ್ದು, ಇದರ ನಡುವೆ ದುರಂತ ಘಟನೆಯೊಂದು ಸಂಭವಿಸಿದೆ. ರೈತ ಮತ್ತು ಸಂತ ಬಾಬಾ ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ರೈತರ ಆಂದೋಲನದ ನಡುವೆ ಈ ಆತ್ಮಹತ್ಯೆಯ ಘಟನೆಯು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಬಾಬಾ ರಾಮ್ ಸಿಂಗ್ ಸಾವಿಗೆ ಕೇಂದ್ರ ಸರ್ಕಾರವನ್ನು ರೈತ ಸಂಘಟನೆಗಳು ದೂಷಿಸಿವೆ. ಅದೇ ಸಮಯದಲ್ಲಿ, ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ರೈತರನ್ನು ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ.

ಎಂದಾದರೂ ರೈತರ ಧ್ವನಿಗೂ ಬೆಲೆ ಬರುವುದೆಂಬ ಭರವಸೆಯಲ್ಲಿ...ಎಂದಾದರೂ ರೈತರ ಧ್ವನಿಗೂ ಬೆಲೆ ಬರುವುದೆಂಬ ಭರವಸೆಯಲ್ಲಿ...

ಪ್ರಾಥಮಿಕ ಮಾಹಿತಿ ಪ್ರಕಾರ 65 ವರ್ಷದ ರೈತ ಮತ್ತು ಸಂತ ಬಾಬಾ ರಾಮ್ ಸಿಂಗ್ ಸಹ ಆಂದೋಲನದಲ್ಲಿ ಭಾಗವಹಿಸಲು ಸಿಂಗ್ ಗಡಿಯನ್ನು ತಲುಪಿದರು. ಈ ಸಮಯದಲ್ಲಿ ಅವನು ಅಲ್ಲಿಯೇ ಗುಂಡು ಹಾರಿಸಿಕೊಂಡಿದ್ದಾರೆ. ಈ ವೇಳೆ ಜನರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು, ವೈದ್ಯರು ಅವನನ್ನು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

Farmer Sucide: Sikh Priest Dies By Suicide At Delhi Border

ಆತ್ಮಹತ್ಯೆಗೆ ಶರಣಾದ ರೈತ ಕರ್ನಾಲ್ ಜಿಲ್ಲೆಯ ನೈಸಿಂಗ್ ಪ್ರದೇಶದ ಸಿಂಹರಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಒಬ್ಬ ಕೃಷಿಕನಲ್ಲದೆ, ಆತನು ಸಂತನೂ ಆಗಿದ್ದನು, ಅವನಿಗೆ ಹೆಚ್ಚಿನ ಸಂಖ್ಯೆಯ ಅನುಯಾಯಿಗಳೂ ಇದ್ದಾರೆ ಎಂದು ತಿಳಿದುಬಂದಿದೆ.

ಬಾಬಾ ರಾಮ್ ಸಿಂಗ್ ಅವರೊಂದಿಗೆ ಪಂಜಾಬಿ ಭಾಷೆಯಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದೆ. ಈ ಪತ್ರದಲ್ಲಿ ಅವರು ರೈತರ ಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ರೈತರ ದುಃಖವನ್ನು ನಾನು ನೋಡಿದ್ದೇನೆ, ಅವರು ಅನೇಕ ದಿನಗಳಿಂದ ತಮ್ಮ ಹಕ್ಕಿಗಾಗಿ ಬೀದಿಗಿಳಿದಿದ್ದಾರೆ , ಆದರೂ ಸರ್ಕಾರ ಅವರಿಗೆ ನ್ಯಾಯ ನೀಡುತ್ತಿಲ್ಲ ಎಂದು ಬರೆದಿದ್ದಾರೆ. ದೌರ್ಜನ್ಯ ಮತ್ತು ಕಿರುಕುಳ ಎರಡೂ ಪಾಪಗಳು. ರೈತರ ಹಕ್ಕುಗಳಿಗಾಗಿ ಯಾರೂ ಏನನ್ನೂ ಮಾಡಲಿಲ್ಲ, ಅನೇಕ ಜನರು ತಮ್ಮ ಪ್ರಶಸ್ತಿಗಳನ್ನು ರೈತರಿಗಾಗಿ ಹಿಂದಿರುಗಿಸಿದರು, ಇದು ದಬ್ಬಾಳಿಕೆಯ ವಿರುದ್ಧದ ಧ್ವನಿ ಎಂದು ಅವರು ಬರೆದಿದ್ದಾರೆ.

Farmer Sucide: Sikh Priest Dies By Suicide At Delhi Border

ರೈತ ಪ್ರತಿಭಟನೆ ಆರಂಭಗೊಂಡ ಬಳಿಕ 20ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಸರಾಸರಿ ಪ್ರಕಾರ ಪ್ರತಿ ದಿನ ಒರ್ವ ರೈತ ಸಾವನ್ನಪ್ಪುತ್ತಿದ್ದಾನೆ ಎಂದು ರೈತ ಮುಖಂಡ ಹೇಳಿದ್ದಾರೆ.

English summary
A Sikh preacher supporting the farmers' agitation against the Centre's agriculture laws allegedly committed suicide near the Singhu border in Delhi on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X