ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ

|
Google Oneindia Kannada News

ನವದೆಹಲಿ, ಜನವರಿ 16: ಮೂರು ಹೊಸ ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ನಡೆದ ಒಂಭತ್ತನೆಯ ಸುತ್ತಿನ ಮಾತುಕತೆಯು ಸಹ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇದರ ಜೊತೆಗೆ ಮುಂದಿನ ಸಭೆಯ ದಿನಾಂಕವನ್ನು ಮತ್ತೊಮ್ಮೆ ನಿಗದಿಪಡಿಸಲಾಗಿದೆ. ಈಗ ಜನವರಿ 19 ರಂದು ರೈತ ಮುಖಂಡರು ಮತ್ತು ಸರ್ಕಾರದ ನಡುವೆ ಸಭೆ ನಡೆಯಲಿದೆ.

ಜನವರಿ 15ರಂದು ಸರ್ಕಾರದೊಂದಿಗೆ 9 ನೇ ಸುತ್ತಿನ ಸಭೆಯ ನಂತರ "ನಾವು ಸರ್ಕಾರದೊಂದಿಗೆ ಮಾತ್ರ ಮಾತನಾಡುತ್ತೇವೆ" ಎಂದು ಹೇಳಿದರು. ಪಾಯಿಂಟ್ 2 - 3 ಕೃಷಿಯ ಕಾನೂನುಗಳು ಹಿಂತಿರುಗಿ ಎಂಎಸ್‌ಪಿ ಕುರಿತು ಮಾತನಾಡಬೇಕು. ನಮ್ಮ ಆದ್ಯತೆ ಎಂಎಸ್‌ಪಿ ಆಗಿರುತ್ತದೆ. ಸರ್ಕಾರ ಎಂಎಸ್‌ಪಿಯಿಂದ ತಪ್ಪಿಕೊಳ್ಳಲು ಪ್ರಯತ್ನಿಸುತ್ತಿದೆ. ನಾವು ನ್ಯಾಯಾಲಯ ನೇಮಿಸಿರುವ ಸಮಿತಿಯ ಬಳಿ ಹೋಗುವುದಿಲ್ಲ, ನಾವು ಸರ್ಕಾರದೊಂದಿಗೆ ಮಾತನಾಡುತ್ತೇವೆ'' ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕೈಟ್ ಅವರು ಹೇಳಿದ್ದಾರೆ.

Farmet protest

ಮೂರು ಕಾನೂನುಗಳ ಕುರಿತಾಗಿ ರೈತ ಸಂಘದೊಂದಿಗೆ ಚರ್ಚಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರೊಂದಿಗೆ ಭೇಟಿಯಾದ ನಂತರ ಹೇಳಿದರು. ಅಗತ್ಯ ಸರಕುಗಳ ಕಾಯ್ದೆಯನ್ನು ವಿವರವಾಗಿ ಚರ್ಚಿಸಲಾಯಿತು. ಅವರ ಅನುಮಾನಗಳನ್ನು ನಿವಾರಿಸಲು ಪ್ರಯತ್ನಿಸಲಾಯಿತು. ಸುಪ್ರೀಂ ಕೋರ್ಟ್‌ನ ಸಮಿತಿಯಲ್ಲಿ, ನಾವೆಲ್ಲರೂ ನ್ಯಾಯಾಲಯದ ಬಗ್ಗೆ ಬದ್ಧತೆಯನ್ನು ಹೊಂದಿದ್ದೇವೆ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ ಎಂದಿದ್ದಾರೆ.

ಈ ಮೊದಲು ಜನವರಿ 8 ರಂದು ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸಭೆ ನಡೆದಿತ್ತು. ಆ ಸಭೆಯಲ್ಲೂ ಯಾವುದೇ ಪರಿಹಾರ ಸಿಗಲಿಲ್ಲ. ಅದರ ನಂತರ ಜನವರಿ 15 ರ ದಿನಾಂಕವನ್ನು ನಿಗದಿಪಡಿಸಲಾಗಿದೆ ಆದರೆ ಒಂಬತ್ತು ಸಭೆಗಳಲ್ಲಿ ಯಾವುದೇ ಪರಿಹಾರವನ್ನು ತಲುಪಲಾಗಲಿಲ್ಲ.

English summary
Protesting farmer unions stuck to their demand for a complete repeal of three contentious farm laws at their ninth round of talks with three central ministers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X