ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನತ್ತ ಲಕ್ಷಾಂತರ ರೈತರ ನಡಿಗೆ, ತಡೆಯಲು ಸಾವಿರಾರು ಪೊಲೀಸರ ನಿಯೋಜನೆ

|
Google Oneindia Kannada News

ನವದೆಹಲಿ, ನವೆಂಬರ್ 30: ಲಕ್ಷಾಂತರ ರೈತರು ದೆಹಲಿಯಲ್ಲಿ ಒಟ್ಟುಗೂಡಿ ಸಂಸತ್ತಿಗೆ ಮುತ್ತಿಗೆ ಹಾಕಲು ಹೆಜ್ಜೆ ಹಾಕಿದ್ದಾರೆ. ಅವರನ್ನು ತಡೆಯಲು 3500 ಸಾವಿರ ಪೊಲೀಸರನ್ನು ಸಂಸತ್ತಿನ ಬಳಿ ನಿಯೋಜಿಸಲಾಗಿದೆ.

ದೇಶದ ನಾನಾ ಭಾಗಗಳಿಂದ ಬಂದಿರುವ ರೈತರು ನಿನ್ನೆಯೇ ದೆಹಲಿ ತಲುಪಿ ರಾಮಲೀಲಾ ಮೈದಾನದಲ್ಲಿ ಬಿಡಾರ ಹೂಡಿದ್ದರು. ಇಂದು ಬೆಳಿಗ್ಗೆ ಎಲ್ಲರೂ ಸಂಸತ್ತಿಗೆ ಮುತ್ತಿಗೆ ಹಾಕುತ್ತಿದ್ದಾರೆ.

ರಾಜಧಾನಿಯಲ್ಲಿ ಅನ್ನದಾತನ ಅಬ್ಬರ, ರಾಮಲೀಲಾದಲ್ಲಿ ರೈತ ಸಾಗರ! ರಾಜಧಾನಿಯಲ್ಲಿ ಅನ್ನದಾತನ ಅಬ್ಬರ, ರಾಮಲೀಲಾದಲ್ಲಿ ರೈತ ಸಾಗರ!

ರೈತರಿಗಾಗಿ ವಿಶೇಷ ಅಧಿವೇಶನ, ಸಾಯಿನಾಥ ವರದಿ ಅನುಷ್ಟಾನ, ಬೆಳೆ ವಿಮೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು, ಸಾಲ ಮನ್ನಾ, ರೈತರ ತಲಾ ಆದಾಯ ಹೆಚ್ಚಳಕ್ಕೆ ಕ್ರಮ ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಉದ್ದೇಶಿಸಿ ರೈತರು ದೆಹಲಿಯಲ್ಲಿ ಭಾರಿ ಪ್ರತಿಭಟನೆ ಮಾಡುತ್ತಿದ್ದಾರೆ.

Farmer march towards parliment, police deployed to stop them

ರೈತರು ಅರೆಬೆತ್ತಲೆಯಾಗಿ, ಹಸಿರು ಶಾಲು ಹೊದ್ದು, ಕೆಂಪು ಧ್ವಜ ಹಿಡಿದು, ಮಹಿಳೆಯರು, ನೇಣಿಗೆ ಶರಣಾದ ಗಂಡಂದಿರ ಕುಟುಂಬ ಸದಸ್ಯರ ಚಿತ್ರಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಲಕ್ಷಾಂತರ ಅನ್ನದಾತರ ಪ್ರತಿಭಟನೆ: ಸರ್ಕಾರ, ಮಾಧ್ಯಮಗಳ ನಿರ್ಲಕ್ಷ್ಯ ದೆಹಲಿಯಲ್ಲಿ ಲಕ್ಷಾಂತರ ಅನ್ನದಾತರ ಪ್ರತಿಭಟನೆ: ಸರ್ಕಾರ, ಮಾಧ್ಯಮಗಳ ನಿರ್ಲಕ್ಷ್ಯ

ಪ್ರತಿಭಟನಾ ನಿರತ ರೈತರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಯೋಧ್ಯೆ ಬೇಡ , ರಾಮ ಬೇಡ , ನಮ್ಮ ಜೀವನ ನಮಗೆ ಕೊಡಿ ಎಂಬ ಘೋಷಣೆಗಳು ಪ್ರತಿಭಟನೆಯಲ್ಲಿ ಕೇಳಿಬರುತ್ತಿವೆ.

Farmer march towards parliment, police deployed to stop them

ರೈತರ ಪ್ರತಿಭಟನಾ ಯಾತ್ರೆಯಿಂದ ದೆಹಲಿಯ ಸಂಚಾರ ವ್ಯವಸ್ಥೆ ಅಸ್ಥವ್ಯವಸ್ಥವಾಗಿದೆ. 1500 ಸಾವಿರ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ರಾಮಲೀಲಾ ಮೈದಾನ ಮತ್ತು ಪಾರ್ಲಿಮೆಂಟ್ ನಡುವೆ ನಿಯೋಜಿಸಲಾಗಿದೆ. 850 ಕ್ಕೂ ಹೆಚ್ಚು ಎಸ್‌ಐಗಳು, ಮೂರು ಮಹಿಳಾ ಪೊಲೀಸ್ ತುಕಡಿಗಳು, 12 ಕಾನ್ಸ್ಟೇಬಲ್ ತುಕಡಿಗಳು ಸಂಸತ್ತಿನ ಬಳಿ ಕಾವಲು ನಿಂತಿವೆ.

ಹಾಸನದ ಹಳ್ಳಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ! ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು ಹಾಸನದ ಹಳ್ಳಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ! ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು

ದೆಹಲಿಯ ಟ್ರಾಫಿಕ ಪೊಲೀಸ್ ಇಲಾಖೆಯು ರೈತರ ಪ್ರತಿಭಟನಾ ಮೆರವಣಿಗೆಯ ಕ್ಷಣ-ಕ್ಷಣದ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ನೀಡುತ್ತಿದೆ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.

English summary
More than one lakh farmers gathered in Delhi to protest against central government. Farmers today marching towards the parliament, over 3500 police with all equipment deployed to stop them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X