• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಫ್‌ಎಒದ 75ನೇ ವಾರ್ಷಿಕೋತ್ಸವ: 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಮೋದಿ

|

ನವದೆಹಲಿ, ಅಕ್ಟೋಬರ್ 16: ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 75ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು.

ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ ಬಿನಯ್ ರಂಜನ್ ಸೇನ್ 1956-57ರಲ್ಲಿ ಎಫ್ಎಒದ ಮಹಾ ನಿರ್ದೇಶಕರಾಗಿದ್ದರು. ಪ್ರಸಕ್ತ ವರ್ಷ ನೊಬೆಲ್ ಶಾಂತಿ ಪುರಸ್ಕಾರ ಪಡೆದ ವಿಶ್ವ ಆಹಾರ ಕಾರ್ಯಕ್ರಮವನ್ನು ಅವರ ಸಮಯದಲ್ಲಿಯೇ ಆರಂಭಿಸಲಾಯಿತು.

ಬಿಹಾರ ವಿಧಾನಸಭೆ ಚುನಾವಣೆ; ಮೋದಿಯಿಂದ 12 ಸಮಾವೇಶ

2016ರಲ್ಲಿ ಅಂತಾರಾಷ್ಟ್ರೀಯ ಧಾನ್ಯಗಳ ವರ್ಷ ಮತ್ತು 2023ರಲ್ಲಿ ಅಂತಾರಾಷ್ಟ್ರೀಯ ನವಣೆ ವರ್ಷ ಎಂದು ಆಚರಿಸಬೇಕೆಂದು ಭಾರತ ಮಾಡಿರುವ ಪ್ರಸ್ತಾವನೆ ಹಿಂದೆ ಎಫ್ಎಒದ ಪಾತ್ರ ಸಾಕಷ್ಟಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೃಷಿ ಮತ್ತು ಪೋಷಣೆಗೆ ಸರ್ಕಾರವು ನೀಡಿದ ಹೆಚ್ಚಿನ ಆದ್ಯತೆಯನ್ನು ಇದು ಸೂಚಿಸುತ್ತದೆ. ಹಸಿವು ಮತ್ತು ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಂಕಲ್ಪದ ಸಾಕ್ಷಿ ಇಂದಿನ ಈ ಕಾರ್ಯಕ್ರಮ.

ಇಂದು ವಿಶ್ವ ಆಹಾರ ದಿನ, ಈ ನಿಟ್ಟಿನಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಕಾರ್ಯಕ್ರಮ ಏರ್ಪಡಿಸಿತ್ತು. ಪ್ರಧಾನ ಮಂತ್ರಿ ಇದೇ ಸಂದರ್ಭದಲ್ಲಿ ದೇಶಕ್ಕೆ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜೈವಿಕ ವೈವಿಧ್ಯದ 8 ಪ್ರಬೇಧಗಳನ್ನು ಸಮರ್ಪಿಸಿದರು.

ಆಹಾರ ಮತ್ತು ಕೃಷಿ ಸಂಸ್ಥೆಯ ಪಯಣ ಸಮಾಜದ ಕೆಳಸ್ತರದವರು ಸಹ ಆರ್ಥಿಕವಾಗಿ ಬಲಿಷ್ಠವಾಗಬೇಕು, ಪೌಷ್ಟಿಕಯುಕ್ತ ಆಹಾರ ಸೇವಿಸಬೇಕು, ಹಸಿವಿನಿಂದ ಯಾರೂ ಬಳಲಬಾರದು ಎಂಬುದಾಗಿದೆ.

ಇಂದು ವಿಶ್ವ ಆಹಾರ ದಿನ. ಜೊತೆಗೆ ಜಗತ್ತಿನಾದ್ಯಂತ ಅಚರಿಸಲಾಗುವ ಬಹುಮುಖ್ಯ ದಿನ ಇಂದು. ಅಕ್ಟೋಬರ್ 16ರ ವಿಶ್ವ ಆಹಾರ ದಿನದ ಮಹತ್ವದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಲೇಬೇಕು. 1945ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್​​ಎಓ) ಅಕ್ಟೋಬರ್​ 16ನ್ನು ವಿಶ್ವ ಆಹಾರ ದಿನವನ್ನಾಗಿ ಘೋಷಿಸಿತು.

ಅಂದಿನಿಂದ ಈವರೆಗೆ ಪ್ರತಿವರ್ಷ ಅಕ್ಟೋಬರ್ 16ನ್ನು ಅಂತರಾಷ್ಟ್ರೀಯ ಆಹಾರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತೀ ವರ್ಷ ಇದೇ ದಿನದಂದು ಹೊಸ ಸಂಗತಿಯೊಂದಿಗೆ ಆಹಾರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯ ಕ್ಯಾಲೆಂಡರ್​​​ನಲ್ಲಿ ಅತೀ ಪ್ರಮುಖ ದಿನವೆನಿಸಿರುವುದು ಅಕ್ಟೋಬರ್ 16 ಅಂದರೆ ವಿಶ್ವ ಆಹಾರ ದಿನ. ಸರ್ಕಾರದ ಹೊಸ-ಹೊಸ ಕಾರ್ಯಕ್ರಮಗಳು, ವ್ಯವಹಾರಗಳು, ಎನ್​ಜಿಓಗಳು, ಮಾಧ್ಯಮ, ಸಾರ್ವಜನಿಕರು ಹೀಗೆ ಎಲ್ಲರೂ ಒಟ್ಟುಗೂಡಿ ವಿಶ್ವ ಆಹಾರ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

English summary
To mark the 75th anniversary of the Food and Agricultural Organization (FAO) on Friday, Prime Minister Narendra Modi released a commemorative coin of Rs 75 denomination, as a testament to India’s long-standing relationship with the global body. The Prime Minister also dedicated to the nation 17 recently developed biofortified varieties of eight crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X