ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಟಿಆರ್‌ಪಿ ಹಗರಣ: 3 ತಿಂಗಳು ರೇಟಿಂಗ್ ಸ್ಥಗಿತಕ್ಕೆ ಬಾರ್ಕ್ ನಿರ್ಧಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಟಿವಿ ಸುದ್ದಿ ವಾಹನಿಗಳ ರೇಟಿಂಗ್‌ಗಳನ್ನು 3 ತಿಂಗಳ ಮಟ್ಟಿಗೆ ಸ್ಥಗಿತಗೊಳಿಸಲು ಬಾರ್ಕ್ ನಿರ್ಧರಿಸಿದೆ.

ಮುಂಬೈ ಪೊಲೀಸರು ತನಿಖೆ ಹಿನ್ನೆಲೆ ಹಾಗೂ ಹಲವು ಆರೋಪಗಳು ಬಂದಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಾರ್ಕ್ ಬಂದಿದೆ.

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಇಬ್ಬರು ಸಂಪಾದಕರಿಗೆ ಸಮನ್ಸ್ ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಇಬ್ಬರು ಸಂಪಾದಕರಿಗೆ ಸಮನ್ಸ್

ಬಾರ್ಕ್ ನಿರ್ಧಾರವನ್ನು ರಾಷ್ಟ್ರೀಯ ಪ್ರಸರಣ ವಾಹಿನಿಗಳ ಸಂಘ ಸ್ವಾಗತಿಸಿದೆ.ಆದರೆ ರಾಜ್ಯವಾರು ದತ್ತಾಂಶಗಳನ್ನು ನೀಡುವುದನ್ನು ಮುಂದುವರೆಸುವುದಾಗಿ ಬಾರ್ಕ್ ತಿಳಿಸಿದೆ.

Fake TRP Scam: BARC Suspends Ratings Of TV News Channels For 3 Months

ಆದರೆ ಬಾರ್ಕ್ ನ ಈ ನಿರ್ಧಾರ ಪ್ರಕಟಿಸುವ ಮುನ್ನ ಯಾವುದೇ ಸುದ್ದಿವಾಹಿನಿಗಳನ್ನು ಹೆಸರಿಸಲು ಅಥವಾ ದಾಖಲಿಸಲು ಮುಂದಾಗಿಲ್ಲ. ಮೂಲಗಳ ಪ್ರಕಾರ ತನಿಖಾ ವರದಿ ಆಧರಿಸಿ ಮುಂದಿನ ನಿರ್ಧಾರ ಪ್ರಕರಟಿಸಲು ಬಾರ್ಕ್ ನಿರ್ಧರಿಸಿದೆ ಎನ್ನಲಾಗಿದೆ.

ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಬುಧವಾರ ಸಂಜೆ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ. ಬಳಕೆದಾರರಿಗೆ ನಿರ್ದಿಷ್ಟ ರಿಪಬ್ಲಿಕ್ ಚಾನೆಲ್‌ನ್ನೇ ನೋಡಲು ಬಳಕೆದಾರರಿಗೆ ಹಣ ನೀಡುತ್ತಿರುವ ಬಗ್ಗೆ ಹನ್ಸ್ ರಿಸರ್ಚ್ ಟೀಮ್ ದೂರು ದಾಖಲಿಸಿತ್ತು.

ಇದನ್ನು ಆಧರಿಸಿ ಡಿಪಬ್ಲಿಕ್ ಟಿವಿಯ ಹಿರಿಯ ಸಂಪಾದಕರಾದ ನಿರಂಜನ್ ನಾರಾಯಣಸ್ವಾಮಿ ಹಾಗೂ ಅಭಿಷೇಕ್ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದಲ್ಲದೆ ಇತ್ತೀಚೆಗೆ ಹನ್ಸ್ ರಿಸರ್ಚ್ ಗ್ರೂಪ್‌ಗೆ ಸಂಬಂಧಿಸಿದ ವಿಡಿಯೋವೊಂದನ್ನು ಅನುಮತಿ ಇಲ್ಲದೆ ಬಳಸಿದ ಬಗ್ಗೆಯೂ ವಿವರಣೆ ಕೇಳಲು ಪೊಲೀಸರು ನಿರ್ಧರಿಸಿದ್ದಾರೆ.

English summary
Amid a controversy surrounding its viewership data for TV news channels, the Broadcast Audience Research Council (BARC) has decided to suspend its weekly ratings of TV news channels for a period of three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X