ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಲ್ಲಿ ಇದ್ದಾರಾ ಬಾಬಾ ರಾಮ್ ದೇವ್, ಏನಿದು ಸುದ್ದಿ?

|
Google Oneindia Kannada News

ನವ ದೆಹಲಿ, ಮಾರ್ಚ್ 23: ಬಾಬಾ ರಾಮ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಹರಿಬಿಡುತ್ತಿದ್ದಾರೆ. ಆದರೆ, ಇದೊಂದು ಸುಳ್ಳು ಸುದ್ದಿಯಾಗಿದೆ.

Recommended Video

ಜನರ ನಿರ್ಲಕ್ಷ್ಯಕ್ಕೆ ವೈದ್ಯರು ಏನ್ ಹೇಳಿದ್ದಾರೆ ನೋಡಿ

ಕೊರೊನಾ ವೈರಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಕ್ ನ್ಯೂಸ್ ಗಳು ಬರುತ್ತಿವೆ. ವಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಎಷ್ಟು ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಅದೇ ರೀತಿ ಬಾಬಾ ರಾಮ್ ದೇವ್ ಬಗ್ಗೆ ಹೀಗೊಂದು ಸುದ್ದಿ ಬಂದಿದೆ.

ಕೋವಿಡ್19ಗೂ ಮಲೇರಿಯಾ ಮದ್ದು ಬಳಸಿ: ಆರೋಗ್ಯ ಇಲಾಖೆ ಕೋವಿಡ್19ಗೂ ಮಲೇರಿಯಾ ಮದ್ದು ಬಳಸಿ: ಆರೋಗ್ಯ ಇಲಾಖೆ

ಬಾಬಾ ರಾಮ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಫೋಟೋವನ್ನು ಕೂಡ ಸಾಕ್ಷಿಯಾಗಿ ನೀಡಿದ್ದಾರೆ. ಆದರೆ, ಈ ಫೋಟೋ 2011ರದ್ದಾಗಿದೆ. ಆಗ ಬಾಬಾ ರಾಮ್ ದೇವ್ ಬ್ಲಾಕ್ ಮನಿ ವಿರುದ್ಧ ಪ್ರತಿಭಟನೆ ಮಾಡಿದ್ದರು. 9 ದಿನಗಳ ಕಾಲ ಉಪವಾಸ ನಡೆಸಿದ್ದರು.

Fake News Spreading About Baba Ramdev In Twitter

ಆಗ ಆಸ್ಪತ್ರೆಯಲ್ಲಿ ತೆಗೆದ ಚಿತ್ರವನ್ನು ಈಗ ಶೇರ್ ಮಾಡಿ ಬಾಬಾ ರಾಮ್ ದೇವ್ ಗೋ ಮೂತ್ರವನ್ನು ಹೆಚ್ಚು ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು AR ಎಂಬ ಟ್ವಿಟ್ಟರ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಈ ರೀತಿ ಮಾಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ.

English summary
Coronavirus: Fake news spreading about Baba Ramdev in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X