ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊರೊನಾ ವೈರಸ್ ಕುರಿತು ಟ್ರೋಲ್ ಮಾಡಿದ್ರೆ ಕೇಸ್!

|
Google Oneindia Kannada News

ನವದೆಹಲಿ, ಏಪ್ರಿಲ್.07: ಬೆಳಗಾದ್ರೆ ಕೊರೊನಾ ವೈರಸ್. ಮಧ್ಯಾಹ್ನವೂ ಕೊರೊನಾ ವೈರಸ್. ರಾತ್ರಿಯಾದರೂ ಕೊರೊನಾ ವೈರಸ್. ಪ್ರತಿನಿತ್ಯ ಕೊರೊನಾ ವೈರಸ್ ಬಗ್ಗೆಯೇ ಜನರು ಚರ್ಚೆ ನಡೆಸುವಂತಾ ವಾತಾವರಣ ಪ್ರಪಂಚದಾದ್ಯಂತ ನಿರ್ಮಾಣವಾಗಿದೆ.

ಸಾಮಾಜಿಕ ಜಾಲತಾಣಗಳು ಟ್ರೋಲ್ ಪೇಜ್ ಗಳಿಗೂ ಕೊರೊನಾ ವೈರಸ್ ಆಹಾರವಾಗಿ ಬಿಟ್ಟಿದೆ. ಇದರ ನಡುವೆ ಕೊರೊನಾ ವೈರಸ್ ಬಗ್ಗೆ ಜೋಕ್ ಹಾಗೂ ಟ್ರೋಲ್ ಮಾಡಿದರೆ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.

Fact Check: ಕೊರೊನಾ ಸೋಂಕಿತರ ಕಣ್ಗಾವಲಿಗೆ ಆರೋಗ್ಯ ಸೇತು App ಬಳಕೆ ?Fact Check: ಕೊರೊನಾ ಸೋಂಕಿತರ ಕಣ್ಗಾವಲಿಗೆ ಆರೋಗ್ಯ ಸೇತು App ಬಳಕೆ ?

ವಾಟ್ಸಾಪ್ ಗಳಲ್ಲಿ ಕೊರೊನಾ ವೈರಸ್ ಬಗ್ಗೆ ಪೋಸ್ಟ್ ಗಳನ್ನು ಫಾರ್ವರ್ಡ್ ಮಾಡಿದರೆ ಕೇಸ್ ಹಾಕಲಾಗುತ್ತದೆ ಎಂಬ ಬಗ್ಗೆ ಸಂದೇಶಗಳು ಹರಿದಾಡುತ್ತಿದ್ದವು. ಆದರೆ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ಆದೇಶಗಳನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Fake News: Punish For Coronavirus Jokes, No Order Passed By Government

ವಾಟ್ಸಾಪ್ ನಲ್ಲಿ ಹರಿದಾಡಿದ ಸಂದೇಶವೇನು?:

ಕೊರೊನಾ ವೈರಸ್ ಕುರಿತು ವಾಟ್ಸಾಪ್ ಗಳಲ್ಲಿ ಜೋಕ್ ಮತ್ತು ಟ್ರೋಲ್ ಪೋಸ್ಟ್ ಗಳನ್ನು ಶೇರ್ ಮಾಡಿದ್ದಲ್ಲಿ ಅಥವಾ ಫಾರ್ವರ್ಡ್ ಮೆಸೇಜ್ ಗಳನ್ನು ಕಳುಹಿಸಿದ್ದಲ್ಲಿ ಗ್ರೂಪ್ ಅಡ್ಮಿನ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಎರಡು ದಿನ ಗ್ರೂಪ್ ಬ್ಲಾಕ್ ಮಾಡಲಾಗುವುದು. ಇದರ ಜೊತೆಗೆ ಗ್ರೂಪ್ ಅಡ್ಮಿನ್ ವಿರುದ್ಧ ಐಪಿಸಿ ಸೆಕ್ಷನ್ 68, 140 ಮತ್ತು 188 ಅಡಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂಬ ಸಂದೇಶವು ಹರಿದಾಡುತ್ತಿತ್ತು.

English summary
Fake News: Punish For Coronavirus Jokes, No Order Passed By Government Till Now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X