ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂವಿಧಾನದ ಆರ್ಟಿಕಲ್ 30(ಎ) ಬಗ್ಗೆ ಹರಿದಾಡುತ್ತಿವೆ ಸುಳ್ಳು ಸುದ್ದಿಗಳು

|
Google Oneindia Kannada News

ನವದೆಹಲಿ, ಆಗಸ್ಟ್ 05: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಸಂವಿಧಾನದ 370ನೇ ವಿಧಿ, ವಿಧಿ 35(ಎ) ಅನ್ನು ರದ್ದು ಮಾಡಲಾಗಿದ್ದು, ಇಂದಿನಿಂದ ಜಮ್ಮು ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಿ ಪುನರ್‌ ನಿರ್ಮಾಣಗೊಂಡಿವೆ.

ಮಾಮೂಲಿನಂತೆ ಸಾಮಾಜಿಕ ಜಾಲತಾಣದಲ್ಲಿ ಜಮ್ಮು ಕಾಶ್ಮೀರದ ವಿಷಯ ಬಹುವಾಗಿ ಚರ್ಚಿತವಾಗುತ್ತಿದೆ. ಅದರಲ್ಲಿ ಹಲವು ಸುಳ್ಳು ಸುದ್ದಿಗಳೂ ಹರಿದಾಡುತ್ತಿವೆ.

LIVE: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ರಾಜ್ಯಸಭೆಯಲ್ಲಿ ಅಂಗೀಕಾರLIVE: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ರಾಜ್ಯಸಭೆಯಲ್ಲಿ ಅಂಗೀಕಾರ

ಆರ್ಟಿಕಲ್ 30ಎ ಕುರಿತಾಗಿ ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆಫ್‌ಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಸಂವಿಧಾನದ ಆರ್ಟಿಕಲ್ 30 ಪ್ರಕಾರ ಮದರಸಾಗಳಲ್ಲಿ ಕುರಾನ್ ಕಲಿಸಬಹುದು, ಆದರೆ ಆರ್ಟಿಕಲ್ 30(ಎ) ಪ್ರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವಂತಿಲ್ಲ, ಇದಕ್ಕೆ ಜವಾಹಾರ್‌ಲಾಲ್ ನೆಹರು ಕಾರಣ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Fake news about Article 30 (a) circulating in social media

ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳಾಗಿದೆ. ಸಂವಿಧಾನದ 30 ನೇ ವಿಧಿಯಲ್ಲಿ ಆರ್ಟಿಕಲ್ 30(ಎ) ಎಂಬುದೇ ಇಲ್ಲ. ಬದಲಿಗೆ 30 (1ಎ) ಎಂದಿದೆ. ಈ ವರ್ಗದ ಪ್ರಕಾರ ಭಾಷೆ, ಜಾತಿ, ಧರ್ಮ ಆಧಾರದ ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಹಕ್ಕು ಹೊಂದಿದ್ದಾರೆ. ಹಾಗೂ ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಆರ್ಟಿಕಲ್ 30 (1) ನಲ್ಲಿ ಅಡಕವಾಗಿವೆ.

English summary
Fake news spreading in social media about Article 30 (a) of Indian constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X