ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ನೌಕರನಿಗೆ ಪಾಸಿಟಿವ್‌ ಬಂದ್ರೆ, ಮಾಲೀಕನಿಗೆ ಜೈಲು?

|
Google Oneindia Kannada News

ನವ ದೆಹಲಿ, ಏಪ್ರಿಲ್ 23: ಲಾಕ್‌ಡೌನ್‌ನಿಂದ ಕೇಂದ್ರ ಸರ್ಕಾರ ಕೈಗಾರಿಕೆ ಉದ್ಯಮಗಳಿಗೆ ಕೊಂಚ ಸಲಿಡಿಕೆ ನೀಡಿದೆ. ಆದರೆ, ಇದರ ನಡುವೆಯೇ ಈ ಬಗ್ಗೆ ಒಂದು ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೈಗಾರಿಕಾ ಘಟಕದಲ್ಲಿ ಯಾವುದಾದರು ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಕಂಡು ಬಂದರೆ, ಆ ಕೈಗಾರಿಕಾ ಘಟಕದ ಮಾಲೀಕರನ್ನು ಗೃಹ ವ್ಯವಹಾರಗಳ ಸಚಿವಾಲಯ ಬಂಧನ ಮಾಡುತ್ತದೆ ಎನ್ನುವ ಸುಳ್ಳು ಸಂದೇಶ ಇದಾಗಿದೆ.

Fake: ಹೋಟೆಲ್, ರೆಸ್ಟೋರೆಂಟ್‌ಗಳು ಅಕ್ಟೋಬರ್‌ವರೆಗೆ ಬಂದ್ ಆಗಲ್ಲFake: ಹೋಟೆಲ್, ರೆಸ್ಟೋರೆಂಟ್‌ಗಳು ಅಕ್ಟೋಬರ್‌ವರೆಗೆ ಬಂದ್ ಆಗಲ್ಲ

SOP ಒಬ್ಬರು ''ಸರ್ ದಯವಿಟ್ಟು ಕೆಲಸದ ಸಮಯದಲ್ಲಿ ಯಾವುದೇ ವ್ಯಕ್ತಿಗಳು ಸೋಂಕಿಗೆ ಒಳಗಾಗಿದ್ದರೆ, ಯಾರು ಜವಾಬ್ದಾರರು ಎಂದು ಸಲಹೆ ನೀಡಿ'' ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಕಾರ್ಖಾನೆ ಮಾಲೀಕರು ಎಫ್‌ಐಆರ್ ದಾಖಲಿಸಲಾಗುವುದು ಎಂಬ ಉತ್ತರ ಬಂದಿತ್ತು.

Fake: MHA Has Not Ordered Arrest Of Firm Owner if Employee Tests Positive For Coronavirus

ಆದರೆ, ಈ ಬಗ್ಗೆ ಇದೀಗ ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದೆ. ಕೈಗಾರಿಕಾ ಘಟಕದಲ್ಲಿ ಯಾವುದಾದರು ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಕಂಡು ಬಂದರೆ, ಆ ಕೈಗಾರಿಕಾ ಘಟಕದ ಮಾಲೀಕರನ್ನು ಬಂಧನ ಮಾಡುವುದಿಲ್ಲ ಎಂದು ತಿಳಿಸಿದೆ.

ಏಪ್ರಿಲ್ 20ರ ನಂತರ ಪ್ರಾರಂಭವಾಗುತ್ತಿರುವ ಕೈಗಾರಿಕಾ ಘಟಕಗಳಿಗೆ ಗೃಹ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಯನ್ನು ನೀಡಿತ್ತು. ಅದರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು.

ಕೆಲಸದ ಸ್ಥಳಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಕಠಿಣ ಮಾರ್ಗ ಸೂಚಿಗಳನ್ನು ಅನುಸರಿಸಬೇಕು ಎಂದು ಎಂಎಚ್‌ಎ ತಿಳಿಸಿತ್ತು. ನೌಕರರ ಸಾಮಾಜಿಕ ಅಂತರ ಮತ್ತು ನೈರ್ಮಲ್ಯೀಕರಣ ಅತ್ಯಗತ್ಯ ಎಂದು ಈ ಆದೇಶ ಹೇಳುತ್ತದೆ.

English summary
Fake: The Ministry of home affairs has not ordered the arrest of the firm owner if an employee tests positive for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X