ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ತಡೆಯಲು ಈ ಔಷಧಿ ಬಳಸಬೇಕಂತೆ': ಇದು ನಕಲಿ ಚೀಟಿ ಎಚ್ಚರಿಕೆ

|
Google Oneindia Kannada News

ದೆಹಲಿ, ಜೂನ್ 13: ಕೊರೊನಾ ವೈರಸ್ ತಡೆಯಲು ಐಸಿಎಂಆರ್ ಮಾರ್ಗಸೂಚಿಯ ಅನ್ವಯ ದೆಹಲಿ ವೈದ್ಯರು ನೀಡಿರುವ ಔಷಧಿ ಎನ್ನಲಾದ ಚೀಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended Video

60 ಮೇಲ್ಪಟ್ಟವರನ್ನು ಮಾತ್ರವಲ್ಲ ಯುವಕರ ಸಾವಿಗೂ ಕಾರಣವಾಗ್ತಿದೆ ಕೊರೋನಾ | Oneindia Kannada

ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಅರಿವಳಿಕೆ ವಿಭಾಗದಲ್ಲಿ (Department of Anaesthesiology) ಕೆಲಸ ಮಾಡುವ ಹಿರಿಯ ಸಲಹೆಗಾರ ಡಾ.ರಾಜ್ ಕಮಲ್ ಅಗರ್ವಾಲ್ ನೀಡಿದ್ದಾರೆ ಎನ್ನಲಾದ ಔಷಧಿ ಚೀಟಿಯಲ್ಲಿ ಕೊವಿಡ್‌ಗೆ ಈ ಔಷಧ ಬಳಸಿ ಎಂದು ಕೆಲವು ಔಷಧಿಗಳ ಹೆಸರು ಬರೆಯಲಾಗಿದೆ.

Fact Check: ಸರ್ಕಾರದಿಂದ ಲಾಕ್ಡೌನ್ ಫಂಡ್ 7. 5 ಸಾವಿರ ರು? Fact Check: ಸರ್ಕಾರದಿಂದ ಲಾಕ್ಡೌನ್ ಫಂಡ್ 7. 5 ಸಾವಿರ ರು?

''ಐಸಿಎಂಆರ್ ಮಾರ್ಗಸೂಚಿ ಪ್ರಕಾರ, ಕೊರೊನಾ ರೋಗಿಯ ಸಂಪರ್ಕ ಹೊಂದಿದವರಲ್ಲಿ ಕಡಿಮೆ ರೋಗಲಕ್ಷಣ ಕಾಣಿಸಿಕೊಂಡರೂ ಅವರನ್ನು ಹೋಮ್‌ ಐಸೋಲೇಶನ್ ಮಾಡಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದರ ಜೊತೆಗೆ ರೋಗ ತಡೆಗಟ್ಟುವ ಈ ಔಷಧಿಯನ್ನು ಪಡೆದುಕೊಳ್ಳಿ'' ಎಂದು ಔಷಧಿ ಚೀಟಿ ಬರೆಯಲಾಗಿದೆ.

Fake Medical Prescription On Covid-19 Treatment Went Viral


ಈ ಕುರಿತು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆ ಹಾಗೂ ವೈದ್ಯ ಡಾ.ರಾಜ್ ಕಮಲ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದು, ''ಇಂತಹ ಯಾವುದೇ ಔಷಧಿ ಚೀಟಿ ನಾವು ಕೊಟ್ಟಿರುವುದಿಲ್ಲ. ಇದು ನಕಲಿ. ಇಂತಹ ಸಂದೇಶಗಳು ಬಂದರೆ ನಮ್ಮ ಗಮನಕ್ಕೆ ತನ್ನಿ'' ಎಂದಿದ್ದಾರೆ.

''ಒಬ್ಬರು ವಾರಕ್ಕೊಮ್ಮೆ 400mg HCQ ಔಷಧಿ ತೆಗೆದುಕೊಳ್ಳಬೇಕು ಎಂದು ನಕಲಿ ಔಷಧಿ ಚೀಟಿಯಲ್ಲಿ ಬರೆಯಲಾಗಿದೆ. ವಿಟಮಿನ್ ಸಿ ಮಾತ್ರೆಗಳನ್ನು ವಾರಕ್ಕೊಮ್ಮೆ ತೆಗೆದುಕೊಳ್ಳಬೇಕು ಎಂದೂ ಸಹ ಉಲ್ಲೇಖಿಸಲಾಗಿದೆ. ಆದರೆ, HCQ ಔಷಧಿ ಬಳಸುವುದರ ಬಗ್ಗೆ ಐಸಿಎಂಆರ್ ಯಾವುದೇ ಸಲಹೆ ಸೂಚನೆಗಳನ್ನು ನೀಡಿಲ್ಲ.

English summary
Beware of this: Fake medical prescription for coronavirus virus is circulating on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X