ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ ಸುದ್ದಿ: ತಾಯಿಗೆ ಕೊವಿಡ್-19 ಅಂಟಿದ ವಿಷಯ ಮುಚ್ಚಿಟ್ಟರಾ ಸಂಸದರು?

|
Google Oneindia Kannada News

ತಿರುವನಂತಪುರಂ, ಆಗಸ್ಟ್.19: ಕೊರೊನಾವೈರಸ್ ಸೋಂಕಿನಿಂದ ತಮ್ಮ ತಾಯಿ ಮೃತಪಟ್ಟಿರುವುದನ್ನು ಬಿಜೆಪಿ ಸಂಸದ ಅಲ್ಫಾನ್ಸ್ ಕನ್ನಂಥನಮ್ ಗೌಪ್ಯವಾಗಿಟ್ಟು ಅಂತ್ಯ ಸಂಸ್ಕಾರ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

Recommended Video

ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಪುಟಿನ್ ಮಗಳು ಸಾವು..!? | Oneindia Kannada

ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಕೇರಳಕ್ಕೆ ಸಂಸದರ ತಾಯಿ ಮೃತದೇಹವನ್ನು ತರಲಾಗಿದ್ದು, ಯಾವುದೇ ಶಿಷ್ಟಾಚಾರವನ್ನು ಪಾಲಿಸದೇ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಸುದ್ದಿ ಶುದ್ಧಸುಳ್ಳು ಎನ್ನುವುದು ಇದೀಗ ಸಾಬೀತಾಗಿದೆ.

Fake: ಈಜಿಪ್ತ್ ಧ್ವಜವನ್ನು ಹಾಕಿ ಶುಭ ಕೋರಿದರಾ ಅಜಿತ್ ದೋವಲ್Fake: ಈಜಿಪ್ತ್ ಧ್ವಜವನ್ನು ಹಾಕಿ ಶುಭ ಕೋರಿದರಾ ಅಜಿತ್ ದೋವಲ್

ಸಂಸದ ಅಲ್ಫಾನ್ಸ್ ಕನ್ನಂಥನಮ್ ಅವರ ತಾಯಿ ಅಂಗವೈಫಲ್ಯದಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಎರಡು ಬಾರಿ ಕೊವಿಡ್-19 ಸೋಂಕು ತಪಾಸಣೆ ನಡೆಸಿದಾಗಲೂ ನೆಗೆಟಿವ್ ವರದಿಯೇ ಬಂದಿತ್ತು ಎಂದು ತಿಳಿದು ಬಂದಿದೆ.

Fake: Kerala BJP MP’s Mother Did Not Have Coronavirus, No Protocols Were Broken

ವೈದ್ಯಕೀಯ ವರದಿ ಪೋಸ್ಟ್ ಮಾಡಿದ ಸಂಸದ:

ತಮ್ಮ ತಾಯಿಗೆ ಕೊರೊನಾವೈರಸ್ ಸೋಂಕು ತಗಲಿಲ್ಲ ಎನ್ನುವುದರ ಬಗ್ಗೆ ವೈದ್ಯರು ನೀಡಿರುವ ವರದಿಯನ್ನು ಸ್ವತಃ ಸಂಸದ ಅಲ್ಫಾನ್ಸ್ ಕನ್ನಂಥನಮ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಆಗಸ್ಟ್.05ರಂದೇ ನಮ್ಮ ತಾಯಿ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ ಅಂಗವೈಫಲ್ಯ ಮತ್ತು ಹೃದಯದಲ್ಲಿನ ರಂಧ್ರ ಮುಚ್ಚಿಕೊಂಡು ಅವರು ಮೃತಪಟ್ಟಿದ್ದಾರೆ ಎಂದು ಸಂಸದರು ಬರೆದುಕೊಂಡಿದ್ದಾರೆ. 91ನೇ ವಯಸ್ಸಿನಲ್ಲೂ ತಮ್ಮ ತಾಯಿ ಆರೋಗ್ಯದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ ಕೊವಿಡ್-19 ಸೋಂಕು ಕಾಣಿಸಿಕೊಂಡ ಬಳಿಕದಲ್ಲಿ ಅಂಗ ವೈಫಲ್ಯ ಎದುರಿಸಿದ್ದರು. ನಂತರದಲ್ಲಿ ಕೊರೊನಾವರೈಸ್ ಸೋಂಕಿನಿಂದ ಗುಣಮುಖರಾದರೂ ಕೂಡಾ, ಅಂಗವೈಫಲ್ಯವು ಅವರ ಸಾವಿಗೆ ಕಾರಣವಾಯಿತು ಎಂದು ಸಂಸದರು ತಿಳಿಸಿದ್ದಾರೆ.

ಟ್ಟಿಟರ್ ನಲ್ಲಿ ಹರಿದಾಡಿದ ಸುಳ್ಳುಸುದ್ದಿ:

ಇನ್ನು, ನವದೆಹಲಿಯಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಸಂಸದ ಅಲ್ಫಾನ್ಸ್ ಕನ್ನಂಥನಮ್ ಅವರ ತಾಯಿಯ ಮೃತದೇಹವನ್ನು ಕೇರಳಕ್ಕೆ ಕರೆ ತಂದಿದ್ದು. ಕೊವಿಡ್-19 ಶಿಷ್ಟಾಚಾರಾವನ್ನು ಉಲ್ಲಂಘಿಸಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎನ್ನುವುದರ ಬಗ್ಗೆ ಟ್ವಿಟರ್ ನಲ್ಲಿ ಹರಿದಾಡಿದ ಸುದ್ದಿ ಸುಳ್ಳು ಎಂದು ಸಾರ್ವಜನಿಕ ಮತ್ತು ಮಾಹಿತಿ ಇಲಾಖೆ ಸ್ಪಷ್ಟಪಡಿಸಿದೆ. ಸಂಸದರ ತಾಯಿ ಅಂತ್ಯಕ್ರಿಯೆ ಸಮಯದಲ್ಲಿ ಯಾವುದೇ ರೀತಿ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದೆ.

English summary
Fake: Kerala BJP MP’s Mother Did Not Have Coronavirus, No Protocols Were Broken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X