ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದ ಮೂಲಕ ಕೊರೊನಾಕ್ಕೆ ಔಷಧಿ: ಸುಳ್ಳು ಸುದ್ದಿಗೆ ಸೇನೆ ಕಿಡಿ

|
Google Oneindia Kannada News

ನವದೆಹಲಿ, ಮಾರ್ಚ್ 21: ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾ ವೈರಸ್ ಬಗ್ಗೆ ನಕಲಿ ಸುದ್ದಿಗಳಿಗೆ ಯಾವುದೇ ಕೊರತೆಯಿಲ್ಲ. ಅಷ್ಟೊಂದು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತೀಚಿಗೆ ಆಡಿಯೊ ಕ್ಲಿಪ್ ಒಂದು ಕೊರೊನಾ ಬಗ್ಗೆ ಜನರಲ್ಲಿ ಭಯ ಹುಟ್ಟಿಹಾಕಿತ್ತು. ಸೋಂಕು ತಡೆಯಲು ಕೊರೊನಾ ವೈರಸ್ ಕೊಲ್ಲಲು ಆಕಾಶದಿಂದ ರಸಾಯಿನಿಕ ಸಿಂಪಡಣೆ ಕೈಗೊಳ್ಳಲಾಗುವುದು ಎಂಬ ಸುದ್ದಿ ವೈರಲ್ ಆಗಿತ್ತು. ಮಾರ್ಚ್ 21 ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯ ನಡುವೆ ಭಾರತೀಯ ಸೇನಾ ಸೈನಿಕರು ಕರೊನಾ ವೈರಸ್ ಅನ್ನು ಕೊಲ್ಲಲು ರಸಾಯಿನಿಕ ಸಿಂಪಡಣೆ ಕೈಗೊಳ್ಳುತ್ತಾರೆ ಎಂದು ಕನ್ನಡದ ಆಡಿಯೊ ಕ್ಲಿಪ್ ಹೇಳಿತ್ತು.

ಕೊರೊನಾ; ಗಾಳಿಯಲ್ಲಿ ಔಷಧ ಸಿಂಪಡಣೆ, ಸುಳ್ಳು ಸುದ್ದಿಕೊರೊನಾ; ಗಾಳಿಯಲ್ಲಿ ಔಷಧ ಸಿಂಪಡಣೆ, ಸುಳ್ಳು ಸುದ್ದಿ

ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಭಾರತೀಯ ಸೇನೆಯ ಅಧಿಕೃತ ಪ್ರಕಟಣೆ ತಿಳಿಸಿದೆ. ಮುಂದೆ ಓದಿ...

ವಿಮಾನದಿಂದ ರಸಾಯಿನಿಕ!

ವಿಮಾನದಿಂದ ರಸಾಯಿನಿಕ!

ಸಿಂಪಡಣೆ ಕಾರ್ಯಕ್ಕೆ ವಿಮಾನವನ್ನು ನಿಯೋಜಿಸಲಾಗುವುದು, ನಿಮ್ಮ ಬಟ್ಟೆಗಳು ಹೊರಗೆ ತೂಗಾಡುತ್ತಿದ್ದರೆ, ದಯವಿಟ್ಟು ಅದನ್ನು ಒಳಗೆ ತೆಗೆದುಕೊಳ್ಳಿ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಈ ಸಂದೇಶವನ್ನು ರವಾನಿಸಿ. ರಾತ್ರಿ ವಿಮಾನದ ಶಬ್ದವನ್ನು ನೀವು ಕೇಳಿದಾಗ, ದಯವಿಟ್ಟು ನಿಮ್ಮ ಮನೆಯೊಳಗೆ ಹೋಗಿ ಎಂದು ಆಡಿಯೊ ಕ್ಲಿಪ್ ನಲ್ಲಿ ಹೇಳಲಾಗಿತ್ತು.

ಆಡಿಯೋ ಹರಿಬಿಟ್ಟವರ ವಿರುದ್ದ ಸೂಕ್ತ ಕ್ರಮ

ಆಡಿಯೋ ಹರಿಬಿಟ್ಟವರ ವಿರುದ್ದ ಸೂಕ್ತ ಕ್ರಮ

ಇದು ಸಂಪೂರ್ಣವಾಗಿ ನಕಲಿ ಎಂದು ಸೇನಾ ಕಚೇರಿಗಳು ತಿಳಿಸಿವೆ. ಕರೋನವೈರಸ್ ಏಕಾಏಕಿ ಮಧ್ಯೆ, ವಿಮಾನದಿಂದ ಸಿಂಪಡಿಸಲಾಗುವ ಲಸಿಕೆ ಅನಿಲದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಸೇನಾ ಕಚೇರಿ ಹೇಳಿದೆ. ಅಂತಹ ಯಾವುದೇ ಕ್ರಮವನ್ನು ಭಾರತ ಸರ್ಕಾರವು ಯೋಜಿಸಿಲ್ಲ. ವಿಶ್ವಾಸಾರ್ಹ ಮೂಲಗಳಿಂದ ನಿಮ್ಮ ಸಂಗತಿಗಳನ್ನು ಪಡೆಯಿರಿ. ಈ ಆಡಿಯೋ ಹರಿಬಿಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ.

Covid-19: ಸತ್ಯ ಮತ್ತು ಸುಳ್ಳಿನ ಹುಡುಕಾಟ; ಕೊರೊನಾ ವೈರಸ್ ಸುತ್ತCovid-19: ಸತ್ಯ ಮತ್ತು ಸುಳ್ಳಿನ ಹುಡುಕಾಟ; ಕೊರೊನಾ ವೈರಸ್ ಸುತ್ತ

ಅನೇಕ ಭಾಷೆಗಳಲ್ಲಿಯೂ ಇದೇ ತರ

ಅನೇಕ ಭಾಷೆಗಳಲ್ಲಿಯೂ ಇದೇ ತರ

ಕನ್ನಡದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶ ಕಾಣಿಸಿಕೊಂಡ ನಂತರ, ಹಿಂದಿ, ಇಂಗ್ಲೀಷ್ ಹಾಗೂ ದೇಶದ ಇತರೆ ಭಾಷೆಗಳಲ್ಲೂ ಈ ಆಡಿಯೋ ವೈರಲ್ ಆಗಿದೆ. ಇದರಿಂದ ಜನ ಭಯಭೀತರಾಗಿದ್ದರು ಎಂದು ಸೇನಾ ಕಚೇರಿ ಮಾಧ್ಯಮಗಳಿಗೆ ತಿಳಿಸಿದೆ.

ಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

300 ರ ಗಡಿ ದಾಟಿದ ಸೋಂಕಿತರ ಸಂಖ್ಯೆ

300 ರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಇನ್ನು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 300 ರ ಗಡಿ ದಾಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಯಂ ಕರ್ಪ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೊರೊನಾ ಹತ್ತಿಕ್ಕಲು ಮೋದಿ ಅವರು ಹೇಳಿದ್ದು ಸರಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಕೊರೊನಾ ವೈರಸ್: ಸುಳ್ಳು ಸುದ್ದಿ ನಂಬುವ ಮುನ್ನ ಎಚ್ಚರ ಎಚ್ಚರಕೊರೊನಾ ವೈರಸ್: ಸುಳ್ಳು ಸುದ್ದಿ ನಂಬುವ ಮುನ್ನ ಎಚ್ಚರ ಎಚ್ಚರ

English summary
Fake News About Coronavirus; Army Officials Clarification About Spraying Chemical To kill Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X