ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಎನ್‌ಕೌಂಟರ್ ಬಗ್ಗೆ ಸಿಬಿಐ ಎಸ್ಪಿ ಪ್ರಧಾನಿಗೆ ಪತ್ರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ನಕಲಿ ಎನ್‌ಕೌಂಟರ್ ನಡೆದಿದೆ ಎಂದು ಆರೋಪಿಸಿ ಸಿಬಿಐ ಎಸ್ಪಿ ಪ್ರಧಾನಿಗ ಪತ್ರ ಬರೆದಿದ್ದು, ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಸಿಬಿಐ ತಿಳಿಸಿದೆ.

ಸಿಬಿಐಯ ಉಪ ಪೊಲೀಸ್ ವರಿಷ್ಠಾಧಿಕಾರಿ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲಾಗಿದ್ದು, ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಸಿಬಿಐ ಹೇಳಿದೆ.

ಛತ್ತೀಸ್‌ಗಢದಲ್ಲಿ ಸೇನೆ, ನಕ್ಸಲರ ಮಧ್ಯೆ ಗುಂಡಿನ ಚಕಮಕಿ: 7 ನಕ್ಸಲರ ಹತ್ಯೆಛತ್ತೀಸ್‌ಗಢದಲ್ಲಿ ಸೇನೆ, ನಕ್ಸಲರ ಮಧ್ಯೆ ಗುಂಡಿನ ಚಕಮಕಿ: 7 ನಕ್ಸಲರ ಹತ್ಯೆ

ಪತ್ರದಲ್ಲಿ ಡಿಎಸ್ಪಿ ಸಿಬಿಐ ನಿರ್ದೇಶಕ ಆರ್ ಕೆ ಶುಕ್ಲಾ, ಕೇಂದ್ರ ಜಾಗೃತ ಆಯೋಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಎನ್ ಪಿ ಮಿಶ್ರಾ ಅವರನ್ನು ಸಹ ಗುರುತಿಸಲಾಗಿದ್ದು, ಅದರಲ್ಲಿ ಸಿಬಿಐಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಎ ಕೆ ಭಟ್ನಾಗರ್ ಜಾರ್ಖಂಡ್ ನಲ್ಲಿ 14 ಮಂದಿ ಮುಗ್ಧ ನಾಗರಿಕರ ನಕಲಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.

Fake Encounter Related Letter To PM Modi

ಸಿಬಿಐಯ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿ ನಕಲಿ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದರು.

ಕಣಿವೆ ರಾಜ್ಯದಲ್ಲಿ ಸೇನೆಯ ಬಲೆಗೆ ಬಿದ್ದ ಉಗ್ರ ಕಮಾಂಡರ್‌ಗಳುಕಣಿವೆ ರಾಜ್ಯದಲ್ಲಿ ಸೇನೆಯ ಬಲೆಗೆ ಬಿದ್ದ ಉಗ್ರ ಕಮಾಂಡರ್‌ಗಳು

ಈ ಬಗ್ಗೆ ಹೇಳಿಕೆಯಲ್ಲಿ ತನಿಖಾ ಸಂಸ್ಥೆಯ ವಕ್ತಾರ, ಸಿಬಿಐ ಎನ್ ಕೌಂಟರ್ ಕೇಸನ್ನು ಕಳೆದ ವರ್ಷ ಅಕ್ಟೋಬರ್ 22ರಂದು ರಾಂಚಿಯ ಜಾರ್ಖಂಡ್ ಹೈಕೋರ್ಟ್ ನಲ್ಲಿ ದಾಖಲಿಸಿದ್ದು ಅದು ಪೊಲೀಸ್ ಸಿಬ್ಬಂದಿ ಮೇಲೆ ಸಿಪಿಐ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಇದುವರೆಗೆ ತನಿಖೆ ವೇಳೆ ಎ ಕೆ ಭಟ್ನಾಗರ್ ಮೇಲೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ, ಎನ್ ಕೌಂಟರ್ ನಡೆದಿದ್ದ ಸಮಯದಲ್ಲಿ ಅವರು ಜಾರ್ಖಂಡ್ ನ ಇನ್ಸ್ ಪೆಕ್ಟರ್ ಜನರಲ್ ಆಗಿದ್ದರು ಎಂದಿದ್ದಾರೆ.

ಪುಲ್ವಾಮಾದಲ್ಲಿ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮಪುಲ್ವಾಮಾದಲ್ಲಿ ಎನ್‌ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ

ಸಂಸ್ಥೆಯಲ್ಲಿ ಉನ್ನತ ಸ್ಥಾನ ಹೊಂದಿರುವ ಕಾರಣ ಎ ಕೆ ಭಟ್ನಾಗರ್ ತನಿಖೆ ಮೇಲೆ ಪ್ರಭಾವ ಬೀರಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

English summary
In a letter to Prime Minister Narendra Modi, a Deputy Superintendent of Police of the CBI has accused a Joint Director-ranked officer of being involved in a fake encounter, a charge refuted by the agency on Friday saying no such evidence has surfaced in the probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X