ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಂದಿನಿ ಚೌಕ್ ಶಾಖೆ ಬ್ಯಾಂಕ್ ನಕಲಿ ಖಾತೆಗಳಲ್ಲಿ ಸಿಕ್ಕಿದ್ದು 100 ಕೋಟಿ!

|
Google Oneindia Kannada News

ನವದೆಹಲಿ, ಡಿಸೆಂಬರ್ 9: ಈ ಸುದ್ದಿಯಂತೂ ದಿಗಿಲು ಮೂಡಿಸುವಂತಿದೆ. ಏಕೆಂದರೆ ದೆಹಲಿಯ ಚಾಂದಿನಿ ಚೌಕ್ ನ ಆಕ್ಸಿಸ್ ಬ್ಯಾಂಕ್ ಮೇಲೆ ಶುಕ್ರವಾರ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಮೊತ್ತ ಅಷ್ಟಿದೆ. 44 ನಕಲಿ ಖಾತೆಗಳನ್ನು ಪತ್ತೆ ಹಚ್ಚಿರುವ ಅಧಿಕಾರಿಗಳಿಗೆ ಸಿಕ್ಕಿರುವ ಮೊತ್ತ 100 ಕೋಟಿ ರುಪಾಯಿಗೂ ಅಧಿಕ.

ನವೆಂಬರ್ 9ರ ನಂತರ ಚಾಂದಿನಿ ಚೌಕ್ ನ ಶಾಖೆಯೊಂದರಲ್ಲೇ ಪತ್ತೆಯಾಗಿರುವ ಮೊತ್ತ 450 ಕೋಟಿ ರುಪಾಯಿಯಂತೆ. ನಕಲಿ ಖಾತೆಗಳನ್ನು ತೆರೆದು, ಮಾಡಿರುವ ಅವ್ಯವಹಾರವಿದು. ಅದು ಒಂದು ಬ್ಯಾಂಕ್ ನ ಒಂದೇ ಶಾಖೆಯಲ್ಲಿ ಪತ್ತೆ ಮಾಡಿರುವ ಹಣದ ಪ್ರಮಾಣ ಇಷ್ಟು. ಹಾಗಿದ್ದರೆ ದೇಶದಾದ್ಯಂತ ನಡೆಯುತ್ತಿರುವ ದಾಳಿಗಳಲ್ಲಿ ಇನ್ನೆಷ್ಟು ಪತ್ತೆಯಾಗಬಹುದು ಎಂಬುದು ಸದ್ಯದ ಪ್ರಶ್ನೆ.[ಚೆನ್ನೈನಲ್ಲಿ ಒಟ್ಟು ಸಿಕ್ಕಿದ್ದು 170 ಕೋಟಿ ನಗದು, 130 ಕೆಜಿ ಚಿನ್ನ]

Income tax

ಬ್ಯಾಂಕ್ ಅಧಿಕಾರಿಗಳ ಬಂಧನದ ಸುದ್ದಿ, ಹಣ ಬದಲಾಯಿಸಲು ಕಾನೂನು ಮೀರಿ ನೆರವಾಗುತ್ತಿರುವ ಪ್ರಕರಣಗಳೆಲ್ಲ ದೊಡ್ಡ ಮಟ್ಟದಲ್ಲಿ ಹೊರಬರುತ್ತಿದೆ. ಇನ್ನು ಲಕ್ಷಗಟ್ಟಲೆ ಆಗಿರುವ ಅವ್ಯವಹಾರಗಳ ಮೊತ್ತ ಎಷ್ಟಾಗುತ್ತದೋ? ಒಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಭರ್ತಿ ಕೆಲಸ ಸಿಕ್ಕಂತಾಗಿದೆ. ಇನ್ನೂ ಎಷ್ಟು ಪ್ರಮಾಣದ ಹಣ ಸಿಗುತ್ತದೋ? ಕಾದು ನೋಡಬೇಕು.

English summary
Income tax officers raid on Chandni Chowk Axis bank branch in Delhi on Friday and found 15 fake accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X