ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?

|
Google Oneindia Kannada News

ದೆಹಲಿ, ಮೇ 27: ಈ ವಾರಾಂತ್ಯಕ್ಕೆ ದೇಶದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್‌ ಮುಗಿಯಲಿದೆ. ಮೇ 31ರವರೆಗೂ ಲಾಕ್‌ಡೌನ್‌ ಜಾರಿಯಲ್ಲಿರಲಿದ್ದು, ಅದಾದ ಬಳಿಕ ಏನು ಎಂಬ ಪ್ರಶ್ನೆ ಕಾಡುತ್ತಿದೆ. ದಿನದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

Recommended Video

3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

ಈ ಕುರಿತು ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದ್ದು, ಜೂನ್ 1 ರಿಂದ ಐದನೇ ಲಾಕ್‌ಡೌನ್‌ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾಗುತ್ತಿದೆ.

ಕೊರೊನಾ: ಪ್ರಧಾನಿ ಮೋದಿ ವಿರುದ್ದ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಕೊರೊನಾ: ಪ್ರಧಾನಿ ಮೋದಿ ವಿರುದ್ದ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

ಹಾಗಿದ್ರೆ, ಲಾಕ್‌ಡೌನ್‌ ಮುಂದುವರಿಯುವುದು ನಿಜಾನ? ಒಂದು ವೇಳೆ ದೇಶದಲ್ಲಿ ಐದನೇ ಹಂತದ ಲಾಕ್‌ಡೌನ್‌ ಜಾರಿಯಾದರೆ ಪರಿಸ್ಥಿತಿ ಹೇಗಿರಲಿದೆ? ಮುಂದೆ ಓದಿ....

ಲಾಕ್‌ಡೌನ್‌ 5 ಸುಳ್ಳು ಎಂದ ಗೃಹ ಸಚಿವಾಲಯ

ಲಾಕ್‌ಡೌನ್‌ 5 ಸುಳ್ಳು ಎಂದ ಗೃಹ ಸಚಿವಾಲಯ

ಮೇ 31 ರಂದು ಲಾಕ್‌ಡೌನ್‌ 4.0 ಮುಕ್ತಾಯವಾಗಲಿದೆ. ಅದೇ ದಿನ ಪ್ರಧಾನಿ ಮೋದಿ ಅವರ ಜನಪ್ರಿಯ ರೇಡಿಯೋ ಕಾರ್ಮಕ್ರಮ ಮನ್ ಕೀ ಬಾತ್ ಪ್ರಸಾರವಾಗಲಿದೆ. ಈ ವೇಳೆ ಲಾಕ್‌ಡೌನ್‌ 5.O ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಎಂಬ ಸುದ್ದಿ ಸದ್ದು ಮಾಡಿದೆ. ಆದರೆ, ಇದು ಕೇವಲ ವದಂತಿ. ಲಾಕ್‌ಡೌನ್‌ 5.0 ಕುರಿತು ಸರ್ಕಾರ ನಿರ್ಧರಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಸಿಎಂಗಳ ಸಭೆ ಅಗತ್ಯ!

ಸಿಎಂಗಳ ಸಭೆ ಅಗತ್ಯ!

ಲಾಕ್‌ಡೌನ್‌ ವಿಸ್ತರಣೆ ಮಾಡುವುದಕ್ಕೂ ಮುಂಚೆ ರಾಜ್ಯಗಳ ಸಿಎಂ ಜೊತೆ ಪಿಎಂ ಸಭೆ ನಡೆಸುತ್ತಾರೆ. ರಾಜ್ಯದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ನಂತರ ಲಾಕ್‌ಡೌನ್‌ ಕುರಿತು ನಿರ್ಧಾರ ಮಾಡ್ತಾರೆ. ಈ ಹಿಂದಿನ ನಾಲ್ಕು ಲಾಕ್‌ಡೌನ್‌ ಸಮಯದಲ್ಲಿ ಮೋದಿ ಈ ಕ್ರಮ ಅನುಸರಿಸಿದ್ದರು.

ದೇಶದ ಹಾಟ್‌ಸ್ಪಾಟ್‌ ನಗರಗಳು

ದೇಶದ ಹಾಟ್‌ಸ್ಪಾಟ್‌ ನಗರಗಳು

ದೇಶದ ಕೊರೊನಾ ವೈರಸ್‌ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪ್ರತಿದಿನವೂ 6 ಸಾವಿರಕ್ಕಿಂತ ಹೆಚ್ಚು ಕೇಸ್‌ಗಳು ವರದಿಯಾಗುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಥಾಣೆ, ಇಂದೋರ್, ಚೆನ್ನೈ, ಅಹಮದಾಬಾದ್, ಜೈಪುರ, ಸೂರತ್ ಮತ್ತು ಕೋಲ್ಕತ್ತಾ ನಗರಗಳಲ್ಲಿ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ದೇಶದ ಒಟ್ಟು ಕೊರೊನಾ ವೈರಸ್ ಕೇಸ್‌ಗಳ ಪೈಕಿ ಶೇಕಡಾ 71 ರಷ್ಟು ಪ್ರಕರಣಗಳು ಈ ನಗರಗಳಲ್ಲಿ ದಾಖಲಾಗಿದೆ.

INTERVIEW: ಕಾನೂನು ತಿದ್ದುಪಡಿಗಳ ಮೂಲಕ ಮೋದಿ ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ!INTERVIEW: ಕಾನೂನು ತಿದ್ದುಪಡಿಗಳ ಮೂಲಕ ಮೋದಿ ಸ್ವದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ!

ದೇವಸ್ಥಾನ ತೆರೆಯಲು ಅನುಮತಿ ಕೊಡಿ

ದೇವಸ್ಥಾನ ತೆರೆಯಲು ಅನುಮತಿ ಕೊಡಿ

ದೇವಸ್ಥಾನಗಳು ತೆರೆಯಲು ಅನುಮತಿ ನೀಡಿ ಎಂದು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜೂನ್‌ 1ರ ನಂತರ ಅವಕಾಶ ಕೊಡಿ ಎಂದು ವಿನಂತಿಸಿದ್ದಾರೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ಜರುಗಿಸಲಾಗುವುದು, ಹಾಗಾಗಿ ಅವಕಾಶ ನೀಡಬಹುದು ಎಂದು ಸಿಎಂ ಮನವಿ ಮಾಡಿದ್ದಾರೆ. ಬಹುಶಃ ಕರ್ನಾಟಕದಲ್ಲಿ ಜೂನ್ 1ರ ಬಳಿಕ ಮತ್ತಷ್ಟು ಸಡಿಲಿಕೆ ಸಿಗಬಹುದು.

English summary
Prime minister Narendra Modi may announce Lockdown Extension in India on Mann Ki Baat at may 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X