ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check; ಮುಸ್ಲಿಂ ಗೌಳಿಗರಿಗೆ ಹಾಲು ಮಾರಾಟಕ್ಕೆ ಬಿಡದ ಜನ

|
Google Oneindia Kannada News

ನವದೆಹಲಿ, ಏಪ್ರಿಲ್ 21: ಕೊರೊನಾ ಹಾವಳಿಯಿಂದ ದೇಶಾದ್ಯಂತ ಸುಳ್ಳು ಸುದ್ದಿಗಳು ಸಾಕಷ್ಟು ಅವಾಂತರ ಸೃಷ್ಟಿಸುತ್ತಿವೆ. ಅದರಲ್ಲೂ ತಬ್ಲಿಘಿ ಜಮಾತ್ ನಿಂದ ಬಹಳಷ್ಟು ಜನ ಕೊರೊನಾ ಸೋಂಕಿಗೆ ತುತ್ತಾದ ನಂತರ ಕೋಮು ಭಾವನೆ ಕೆರಳಿಸುವಂತ ಘಟನೆಗಳು ನಡೆಯುತ್ತಿವೆ.

ಇದೇ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದದ ಹೊಸೈರಪುರ್ ಜಿಲ್ಲೆಯ ಮುಸ್ಲಿಂ ಗೌಳಿಗರಿಂದ ಉನಾ ಜಿಲ್ಲೆಯ ಕೆಲವು ಗ್ರಾಮಗಳು ಮುಸ್ಲಿಂರಿಂದ ಹಾಲು ಸ್ವೀಕರಿಸಲು ಹಿಂದೇಟು ಹಾಕಿದ್ದಲ್ಲದೇ ತಮ್ಮ ಗ್ರಾಮಗಳಿಗೆ ಮುಸ್ಲಿಂರು ಬರಬಾರದು ಎಂದು ದೊಣ್ಣೆ ಬಡಿಗೆ ಹಿಡಿದು ಗ್ರಾಮಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಈ ವೇಳೆ ಹಾಲು ಮಾರಲು ಹೋದ ಮುಸ್ಲಿಂ ವ್ಯಕ್ತಿಗಳನ್ನು ಥಳಿಸಿರುವ ಘಟನೆ ನಡೆದಿತ್ತು.

Fact Check: ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿರೋಧಿಸಿ ವಿಡಿಯೋFact Check: ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿರೋಧಿಸಿ ವಿಡಿಯೋ

ಇದಕ್ಕೆ ಕಾರಣ ಪರಿಶೀಲಿಸಿದಾಗ ಗ್ರಾಮಗಳ ಜನರು, ಈ ಮುಸ್ಲಿಂ ವ್ಯಕ್ತಿಗಳಿಂದ ಕೊರೊನಾ ವೈರಸ್ ಹರಡುತ್ತೆ ಎಂದು ವದಂತಿಗಗಳನ್ನು ನಂಬಿ ಮುಸ್ಲಿಂ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಇದರಿಂದ ಸಾವಿರಾರು ಲೀಟರ್ ಹಾಲನ್ನು ಗೌಳಿಗರು ನಾಶ ಮಾಡಿದ್ದಾರೆ. ಅಲ್ಲದೆ ಗ್ರಾಮಗಳಲ್ಲಿ ಹಾಲು ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವುದರಿಂದ ಗೌಳಿಗರು ಬದುಕು ನಡೆಸುವುದು ಕಷ್ಟವಾಗಿದೆ.

Fact Check; No Entry For Muslim Milk Mans In Una District

ಈ ಕುರಿತು ಗ್ರಾಮಗಳಿಗೆ ಭೇಟಿ ನೀಡಿರುವ ಊನಾ ಜಿಲ್ಲಾ ಅಧಿಕಾರಿಗಳು ಮುಸ್ಲಿಂ ವ್ಯಕ್ತಿಗಳಿಂದ ಕೊರೊನಾ ಹರಡುತ್ತೆ ಎಂಬುದು ವದಂತಿ. ಇದನ್ನು ನಂಬಬಾರದು. ಲಾಕ್‌ಡೌನ್ ಸಮಯದಲ್ಲಿ ಹಾಲು ಮಾರಾಟ ಅಗತ್ಯ ಸೇವೆ ಎಂದು ಪರಿಗಣಿಸಲಾಗಿದೆ‌. ಹಲ್ಲೆ, ಗಲಬೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

English summary
Fact Check; No Entry For Muslim Milk Mans In Una District. Una district village people barred to muslim gujjars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X