ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡಿತರ ಕಾರ್ಡ್ ಹೊಂದಿದವರಿಗೆ 50 ಸಾವಿರ ಘೋಷಣೆ ನಿಜಾನ?

|
Google Oneindia Kannada News

ದೆಹಲಿ, ಮೇ 4: ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದೆ. ಸುಮಾರು 40 ದಿನದ ಲಾಕ್‌ಡೌನ್‌ನಿಂದ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಸಿದಿದೆ. ಕೆಲಸ, ವೇತನ, ಪಡಿತರ ಇಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ.

ಜನರ ಕಷ್ಟವನ್ನು ಬಗೆಹರಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ದೀಕ್ಷಿತ್ ಬೆರೋಜ್ಗರ್ ಹೆಸರಿನಲ್ಲಿ ನೂತನ ಯೋಜನೆ ಜಾರಿ ಮಾಡಿದೆ. ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಸರ್ಕಾರ ತಲಾ 50 ಸಾವಿರ ರೂಪಾಯಿ ನೀಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದೆ.

ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್

ಭಾರತದ ಹಿರಿಯ ನಾಗರಿಕರು, ವಿಧವೆಯರು, ರೈತರು, ದೈನಂದಿನ ಕಾರ್ಮಿಕರು, ನಿರುದ್ಯೋಗಿಗಳು ಮತ್ತು ಎಲ್ಲಾ ಪಡಿತರ ಚೀಟಿ ಹೊಂದಿರುವ ಜನರು ಈ ಯೋಜನೆ ಪಡೆಯಬಹುದು ಎಂದು ಸಂದೇಶ ರವಾನೆಯಾಗುತ್ತಿದೆ.

Govt Not Given 50,000 To Ration Card Holders

ಮೊದಲ 40,000 ಅರ್ಜಿದಾರರಿಗೆ ಮಾತ್ರ ಲಭ್ಯವಿದ್ದು, ಮೊದಲ ಬಾರಿಗೆ ಬಂದವರಿಗೆ ಮೊದಲು ಆದ್ಯತೆ ನೀಡಲಾಗುವುದು. ಆನ್‌ಲೈನ್ ಪಾವತಿಯಂತೆ 50,000 ರೂ.ಗಳ ಪರಿಹಾರ ಪ್ಯಾಕೇಜ್ ನೀಡಲಾಗುವುದು ಎಂದು ಸುದ್ದಿ ಹರಿದಾಡುತ್ತಿದೆ.

ಒಮ್ಮೆ ಬಳಸಿದ ಮಾಸ್ಕ್‌ನಿಂದಲೂ ಕೊರೊನಾ ವೈರಸ್ ಹರಡುವ ಸಾಧ್ಯತೆ ಒಮ್ಮೆ ಬಳಸಿದ ಮಾಸ್ಕ್‌ನಿಂದಲೂ ಕೊರೊನಾ ವೈರಸ್ ಹರಡುವ ಸಾಧ್ಯತೆ

ಆದರೆ, ಈ ಸುದ್ದಿ ಸುಳ್ಳು. ಪಡಿತರ ಹೊಂದಿದ ಅಥವಾ ಇನ್ನಿತರ ಯಾವುದೇ ಮಾದರಿಯಲ್ಲು ಸರ್ಕಾರದಿಂದ ಹಣ ನೀಡಲಾಗುತ್ತಿಲ್ಲ. 50 ಸಾವಿರ ನೀಡುವ ಯೋಜನೆ ಪ್ರಾರಂಭಿಸಿಲ್ಲ. ಇಂತಹ ಸುದ್ದಿಯನ್ನು ನಂಬಬೇಡಿ.

English summary
Govt has not launched scheme which gives Rs 50,000 to ration card holders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X