ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರದ ವೇಳೆ ಗಂಭೀರ್ ತದ್ರೂಪಿ ಬಳಸಿದರೆ? ಇಲ್ಲಿದೆ ನಿಜಾಂಶ

|
Google Oneindia Kannada News

ನವದೆಹಲಿ, ಮೇ 12: ಮಾಜಿ ಕ್ರಿಕೆಟರ್, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರು ತಮ್ಮಂತೇ ಕಾಣುವ ಮತ್ತೊಬ್ಬ ವ್ಯಕ್ತಿಯನ್ನು ಬಳಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದ್ದು ನೆನಪಿರಬಹುದು.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈ ರೀತಿ ಗಂಭೀರ ಆರೋಪ ಮಾಡಿದ್ದರು. ಜೊತೆಗೆ ಚುನಾವಣಾ ಪ್ರಚಾರದ ಚಿತ್ರವೊಂದನ್ನು ಹಂಚಿಕೊಂಡಿದ್ದರು.

1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ? 1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?

ಚಿತ್ರದಲ್ಲಿ ಕಾರಿನಲ್ಲಿ ಗೌತಮ್ ಗಂಭೀರ್ ಕುಳಿತಿದ್ದಾರೆ, ಅದೇ ಕಾರಿನ ಹಿಂಬದಿಯಲ್ಲಿ ಗೌತಮ್ ಗಂಭೀರ್ ಅನ್ನೇ ಹೋಲುವ ವ್ಯಕ್ತಿಯೊಬ್ಬರು ಜನರತ್ತ ಕೈಬೀಸುತ್ತಾ ಮತಯಾಚನೆ ಮಾಡುತ್ತಿದ್ದಾರೆ.

Fact check: Did the BJP use a duplicate Gautam Gambhir

ಚಿತ್ರದಲ್ಲಿರುವ ವ್ಯಕ್ತಿಯು ಗೌತಮ್ ಗಂಭೀರ್ ಅನ್ನು ಹೋಲುತ್ತಿದ್ದು, ಹಾರ ಹಾಕಿಕೊಂಡು, ಬಿಜೆಪಿ ಬಾವುಟವನ್ನು ಹೆಗಲಿಗೆ ಹಾಕಿಕೊಂಡು ಜನರತ್ತ ಕೈಬೀಸುತ್ತಿದ್ದಾರೆ, ಆತ ಟೋಪಿ ಧರಿಸಿದ್ದು, ಬಹುತೇಕ ಗೌತಮ್ ಗಂಭೀರ್ ಅವರನ್ನೇ ಹೋಲುತ್ತಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ, ಅಭ್ಯರ್ಥಿಗಳ ಸವಿವರ

ಸತ್ಯಾಂಶ ಏನು?: ಗೌತಮ್ ಗಂಭೀರ್ ಅವರಿಗೆ ಹುಷಾರಿಲ್ಲದ ಕಾರಣ ಕಾರಿನಲ್ಲಿ ಕುಳಿತುಕೊಂಡಿದ್ದರು. ಮೇಲಗಡೆ ಇದ್ದ ವ್ಯಕ್ತಿ ಗೌರವ್ ಅರೋರಾ ಎಂದು ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಗೌರವ್ ಅವರು ಗಂಭೀರ್ ಅವರ ಆಪ್ತ ಗೆಳೆಯರಾಗಿದ್ದು, ಶಾಲಾ ದಿನಗಳಿಂದ ಇಬ್ಬರು ಜೊತೆಗಾರರಾಗಿದ್ದಾರೆ. ಗೌರವ್ ಅವರ ಅಣ್ಣ ಮನೋಹರ್ ಅರೋರಾ ಅವರು ಕರೋಲ್ ಬಾಗ್ ನಲ್ಲಿ ಪಕ್ಷದ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ: ಕೇಜ್ರಿವಾಲ್‌ಗೆ ಗಂಭೀರ್ ಸವಾಲುಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ: ಕೇಜ್ರಿವಾಲ್‌ಗೆ ಗಂಭೀರ್ ಸವಾಲು

ಪೂರ್ವ ದೆಹಲಿಯ ಜನರು ಮನೆಯಿಂದ ಹೊರ ಬಂದು ನಕಲಿ ಗಂಭೀರ್ ರನ್ನು ಸ್ವಾಗತಿಸುತ್ತಿದ್ದಾರೆ. ಅಸಲಿ ಗಂಭೀರ್ ಎಸಿ ಕಾರಿನಲ್ಲಿ ಕುಳಿತ್ತಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಇದಾಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದರು.

English summary
Deputy Chief Minister of Delhi, Manish Sisodia accused the BJP of using a doppleganger of Gautam Gambhir for the election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X