ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಅಮಿತ್ ಶಾಗೂ ಕೊರೊನಾ ವೈರಸ್ ಬಂತಂತೆ!

|
Google Oneindia Kannada News

ನವದೆಹಲಿ, ಏಪ್ರಿಲ್ 6: ಸೋಮವಾರ ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತ ಫೋಟೊವೊಂದು ವೈರಲ್ ಆಗಿದೆ. ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಹಲವರು ಆ ಫೋಟೊವನ್ನು ಶೇರ್‌ ಮಾಡಿದ್ದರು.

ಫೋಟೊದಲ್ಲಿ ವಿದೇಶದಿಂದ ಬಂದು, ಕೊರೊನಾಕ್ಕೆ ತುತ್ತಾಗಿರುವ ವ್ಯಕ್ತಿಯೊಬ್ಬ ಅಮಿತ್ ಶಾ ಅವರ ಜೊತೆ ನಿಂತಿರುವ ಫೊಟೊ ಅದಾಗಿತ್ತು. ಆದರೆ, ಈ ಫೋಟೊದ ಅಸಲಿಯತ್ತನ್ನು ಬಯಲಿಗೆಳದಿರುವ ಪ್ರೆಸ್ ಇನ್ಪಾರ್ಮೆಶನ್ ಬ್ಯೂರೋ (ಪಿಸಿಬಿ) ಇದೊಂದು ಫೇಕ್ ನ್ಯೂಸ್ ಎಂದು ತಿಳಿಸಿದೆ. ಫೋಟೊದಲ್ಲಿ ಇರುವ ಕೊರೊನಾ ಪೀಡಿತ ವ್ಯಕ್ತಿಯನ್ನು ಅಮಿತ್ ಶಾ ಅವರೊಂದಿಗೆ ಸೇರಿಸಲಾಗಿದ್ದು ಎಂದು ತಿಳಿಸಿದೆ.

ಕೊರೊನಾ ಬಾಂಬ್: ಚೀನಾದ ಮೇಲೆ ಟ್ರಂಪ್‌ಗೆ ಮತ್ತಷ್ಟು ಅನುಮಾನಕೊರೊನಾ ಬಾಂಬ್: ಚೀನಾದ ಮೇಲೆ ಟ್ರಂಪ್‌ಗೆ ಮತ್ತಷ್ಟು ಅನುಮಾನ

ಈ ಫೋಟೊವನ್ನು ಯಾರೂ ಶೇರ್ ಮಾಡುವುದನ್ನು ಮಾಡಬಾರದು. ಅಮಿತ್ ಷಾ ಅವರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಪಿಸಿಬಿ ತಿಳಿಸಿದೆ.

Fact Check: Coronavirus Postive For Home Minister Amit Shah Photo Viral

ಕೊರೊನಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು, ತೇಜೋವಧೆ ಮಾಡುವಂತಹ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ಈ ಸುಳ್ಳು ಸುದ್ದಿಗಳನ್ನು ಪರಿಶೀಲಿಸಲು ಹಲವು ಮಾಧ್ಯಮ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸುಳ್ಳು ಸುದ್ದಿಗಳ ಬಗ್ಗೆ Fact Check ನಡೆಸುತ್ತಿವೆ.

English summary
Fact Check: Coronavirus Postive For Home Minister Amit Shah Photo Viral. PCB Confirms it, this is a fake news. photo is edited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X