ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವದಂತಿ ಹಿಂದಿನ ಅಸಲಿ ಸತ್ಯ: ಪ್ರತಿಯೊಬ್ಬ ಭಾರತೀಯರಿಗೆ 1,000 ರೂಪಾಯಿ!

|
Google Oneindia Kannada News

ನವದೆಹಲಿ, ಏಪ್ರಿಲ್.26: ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಲಾಕ್ ಡೌನ್ ಮತ್ತು ಕೊರೊನಾ ಕುರಿತು ಕಿಡಿಗೇಡಿಗಳು ಸುಳ್ಳುಸುದ್ದಿಗಳನ್ನು ಹರಡಿಸುತ್ತಿದ್ದಾರೆ.

ದೇಶದ ಪ್ರತಿಯೊಬ್ಬ ಪ್ರಜೆಗೆ ಕೇಂದ್ರ ಸರ್ಕಾರವು ಕೊರೊನಾ ಸಹಾಯತಾ ಯೋಜನೆ ಅಡಿ 1,000 ರೂಪಾಯಿ ಆರ್ಥಿಕ ನೆರವು ನೀಡುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯು ಶುದ್ಧಸುಳ್ಳು ಎಂದು ಕೇಂದ್ರ ಸರ್ಕಾರದ ಅಧೀನದ ಪ್ರಸಾರ ಭಾರತಿ ಸ್ಪಷ್ಟಪಡಿಸಿದೆ.

ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?

ಇತ್ತೀಚಿನ ದಿನಗಳಲ್ಲಿ ಭಾರತ ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಹಡುವಿಕೆ ಬಗ್ಗೆ ವಾಟ್ಸಾಪ್ ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳುಸುದ್ದಿ ಹರಿದಾಡುತ್ತಿತ್ತು. ಶನಿವಾರ ಪ್ರಸಾರ ಭಾರತಿ ಈ ಕುರಿತು ಸ್ಪಷ್ಟನೆ ನೀಡಿದೆ.

Fact Check: Central Government Providing Rs.1,000 Under Corona Sahayata Yojana

ಕೇಂದ್ರ ಸರ್ಕಾರವು ಯಾರಿಗೂ ಹಣ ನೀಡುತ್ತಿಲ್ಲ:

ಭಾರತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೊರೊನಾ ಸಹಾಯತಾ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ 1,000 ರೂಪಾಯಿ ನೆರವು ನೀಡುತ್ತಿದೆ. ಹಣವನ್ನು ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕುರಿತು ಮಾಹಿತಿ ಹಂಚಿಕೊಳ್ಳಿ ಹಾಗೂ ಹಣವನ್ನು ಪಡೆಯಿರಿ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಸಂದೇಶವನ್ನೇ ಪಿಐಬಿ ಟ್ವೀಟ್ ಮಾಡಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಕೇಂದ್ರ ಸರ್ಕಾರವು ಯಾವುದೇ ರೀತಿ ಹಣವನ್ನು ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇನ್ನು, ಕೆಲವು ದಿನಗಳ ಹಿಂದೆಯಷ್ಟೇ ಮೇ.03ರ ಭಾರತ ಲಾಕ್ ಡೌನ್ ಅಂತ್ಯದವರೆಗೂ ವರ್ಕ್ ಫ್ರಾಮ್ ಹೋಮ್ ಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಉಚಿತ ಇಂಟರ್ ನೆಟ್ ಸೇವೆಯನ್ನು ನೀಡುತ್ತದೆ ಎಂಬ ವದಂತಿಯನ್ನು ಹರಡಿಸಲಾಗುತ್ತಿತ್ತು. ಈ ವದಂತಿ ಕೂಡ ಸತ್ಯಕ್ಕೆ ದೂರವಾಗಿದ್ದು ಎಂದು ಪ್ರಸಾರ ಭಾರತಿ ಸ್ಪಷ್ಟಪಡಿಸಿತ್ತು.

English summary
Fact Check: Central Government Providing Rs.1,000 To People Under Corona Sahayata Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X