ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಈಜಿಪ್ತ್ ಧ್ವಜವನ್ನು ಹಾಕಿ ಶುಭ ಕೋರಿದರಾ ಅಜಿತ್ ದೋವಲ್

|
Google Oneindia Kannada News

ನವದೆಹಲಿ, ಆಗಸ್ಟ್.19: ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈಜಿಪ್ತ್ ಗರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯ ಕೋರಿದರು ಎನ್ನಲಾದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯವನ್ನು ಕೋರುವ ಸಂದೇಶದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈಜಿಪ್ತ್ ಧ್ವಜವನ್ನು ಪೋಸ್ಟ್ ಮಾಡಿರುವ ಸಂದೇಶವು ಹರಿದಾಡುತ್ತಿದೆ. ಭಾರತದ ಧ್ವಜದ ಬದಲಿಗೆ ಈಜಿಪ್ತ್ ಧ್ವಜವನ್ನು ಏಕೆ ಹಾಕಿದರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Fake: ಲಡಾಕ್ ಕಾರ್ಯದರ್ಶಿ ಹೊಗಳಿ ಅಜಿತ್ ದೋವಲ್ ಪತ್ರFake: ಲಡಾಕ್ ಕಾರ್ಯದರ್ಶಿ ಹೊಗಳಿ ಅಜಿತ್ ದೋವಲ್ ಪತ್ರ

ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಭಾರತದ ಮಾಜಿ ರಾ ಏಜೆಂಟ್ ಆಗಿದ್ದ ಅಜಿತ್ ದೋವಲ್, ಇಂದು ಎಲ್ಲ ಈಜಿಪ್ತಿಯನ್ನರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳನ್ನು ಕೋರಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಶುಭಾಷಯದ ಜೊತೆಗೆ ಮೂರು ಈಜಿಪ್ತ್ ಧ್ವಜವನ್ನು ಹಾಕಿರುವುದರ ಬಗ್ಗೆ ಉಲ್ಲೇಖಿಸಲಾಗಿದೆ.

Fact Check: Ajit Doval Did Not Wish Egyptians A Happy Independence Day On August 15

ಅಜಿತ್ ದೋವಲ್ ರಿಗೆ ಫೇಸ್ ಬುಕ್, ಟ್ವಿಟರ್ ಖಾತೆಗಳಿಲ್ಲ!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹೆಸರಿನಲ್ಲಿ ಈಜಿಪ್ತಿನ್ನರಿಗೆ ಸ್ವಾತಂತ್ರ್ಯ ದಿನಾಚರಣೆ ಮಾಡಿರುವ ಸಂದೇಶವು ಶುದ್ಧಸುಳ್ಳಾಗಿದೆ. ಏಕೆಂದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲ. ಅಜಿತ್ ದೋವಲ್ ಅವರು ಟ್ವಿಟರ್ ಅಥವಾ ಫೇಸ್ ಬುಕ್ ಖಾತೆಗಳನ್ನೇ ಹೊಂದಿಲ್ಲ ಎಂದು ತಿಳಿದು ಬಂದಿದೆ.

English summary
Fact Check: Ajit Doval Did Not Wish Egyptians A Happy Independence Day On August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X