ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣ ದುರುಪಯೋಗ ಆರೋಪ: ಫೇಸ್‌ಬುಕ್‌ಗೆ ಸಮನ್ಸ್‌ ನೀಡಿದ ಸಂಸದೀಯ ಸ್ಥಾಯಿ ಸಮಿತಿ

|
Google Oneindia Kannada News

ನವದೆಹಲಿ, ಆಗಸ್ಟ್ 20: ಫೇಸ್‌ಬುಕ್‌ ಭಾರತದಲ್ಲಿ ಬಿಜೆಪಿಯ ನಿಯಂತ್ರಣದಲ್ಲಿದೆ ಎಂಬ ರಾಜಕೀಯ ಆರೋಪಗಳು ಕೇಳಿ ಬಂದ ನಂತರ, ಸಾಮಾಜಿಕ ತಂತ್ರಜ್ಞಾನ ವೇದಿಕೆಗಳ ದುರುಪಯೋಗದ ಬಗ್ಗೆ ಚರ್ಚಿಸಲು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಸೆಪ್ಟೆಂಬರ್ 2 ರಂದು ಫೇಸ್‌ಬುಕ್‌ಗೆ ಸಮನ್ಸ್‌ ನೀಡಿದೆ.

ಫೇಸ್‌ಬುಕ್‌ನ ಪ್ರತಿನಿಧಿಗಳಲ್ಲದೆ, "ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ವಿಶೇಷ ಒತ್ತು ಸೇರಿದಂತೆ ಸಾಮಾಜಿಕ / ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಗಟ್ಟುವುದು" ಎಂಬ ವಿಷಯದ ಬಗ್ಗೆ ಚರ್ಚಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳನ್ನು ಸೆಪ್ಟೆಂಬರ್ 2 ರಂದು ಹಾಜರಾಗುವಂತೆ ಸಮಿತಿ ಕೇಳಿದೆ.

ಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆ

ಸಮಿತಿಯ ಹಿರಿಯ ಸದಸ್ಯ ಮತ್ತು ಬಿಜೆಪಿ ಮುಖಂಡ ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಮಂಡಳಿಯ ಅಧ್ಯಕ್ಷರಾಗಿ ಶಶಿ ತರೂರ್ ಅವರನ್ನು ತೆಗೆದುಹಾಕುವಂತೆ ಕೋರಿ ಪತ್ರ ಬರೆದಿದ್ದು, ಕಾಂಗ್ರೆಸ್ ಮುಖಂಡರು ರಾಜಕೀಯ ಕಾರ್ಯಸೂಚಿಗೆ ವೇದಿಕೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

Facebook Controversy: Parliamentary Panel Summons Facebook Representatives On Sep 2

ಆಗಸ್ಟ್ 14 ರಂದು ಯುಎಸ್ ಮೂಲದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯೊಂದು ಫೇಸ್‌ಬುಕ್ ಭಾರತದಲ್ಲಿ ತನ್ನ ಕಾರ್ಯವನ್ನು ಸುಧಾರಿಸಲು ಯತ್ನಿಸುತ್ತಿದ್ದು, ಯಾವುದೇ ತೊಂದರೆಗಳಿಲ್ಲದೆ ಕೆಲಸ ಮಾಡಲು ಬಿಜೆಪಿ ನಾಯಕರ ಪರ ಕಾರ್ಯನಿರ್ವಹಿಸುತ್ತಿದೆ ಎಂದಿದೆ.

ಕಂಪನಿಯು ದ್ವೇಷ-ಭಾಷಣ ನಿಯಮಗಳನ್ನು ಬಿಜೆಪಿ ನಾಯರಿಗೆ ಅನ್ವಯಿಸುವುದನ್ನು ದಾಸ್ ವಿರೋಧಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ನಂತರ ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕ್ ಭಾರತದಲ್ಲಿ ಸಾರ್ವಜನಿಕ-ಸಂಬಂಧ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಸೆಪ್ಟೆಂಬರ್ 2ರಂದು ನಡೆಯುವ ಸಭೆಗಾಗಿ ಸಂವಹನ ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳ ಪ್ರತಿನಿಧಿಗಳನ್ನು ಬಿಹಾರ, ಜಮ್ಮು ಮತ್ತು ಕಾಶ್ಮೀರ ಮತ್ತು ದೆಹಲಿ ಸರ್ಕಾರಗಳ ಪ್ರತಿನಿಧಿಗಳನ್ನು ಕರೆಯಲಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಪ್ರಸಾರ್ ಭಾರತಿ ಪ್ರತಿನಿಧಿಗಳನ್ನು 'ಮಾಧ್ಯಮ ವ್ಯಾಪ್ತಿಯಲ್ಲಿ ನೈತಿಕ ಮಾನದಂಡಗಳ ಕುರಿತು ಚರ್ಚೆಗೆ ಆಹ್ವಾನಿಸಲಾಗಿದೆ.

English summary
The parliamentary standing committee on Information Technology has summoned Facebook on September 2 to discuss the issue of alleged misuse of social media platforms
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X