ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಾಂಗ ಸಚಿವರ ಅಮೆರಿಕಾ ಪ್ರವಾಸ ಆರಂಭ: ಕೋವಿಡ್ ಲಸಿಕೆ ಬಗ್ಗೆ ಮಹತ್ವದ ಚರ್ಚೆ

|
Google Oneindia Kannada News

ನವದೆಹಲಿ, ಮೇ 24: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಮೆರಿಕ ಪ್ರವಾಸ ಇಂದಿನಿಂದ(ಮೇ 24) ಆರಂಭವಾಗಿದೆ. ಮೇ 26ರವರೆಗೆ ನ್ಯೂಯಾರ್ಕ್‌ನಲ್ಲಿ ಸಚಿವರು ಉಳಿದುಕೊಳ್ಳಲಿದ್ದು ನಂತರ ವಾಶಿಂಗ್ಟನ್ ಡಿಸಿಗೆ ದ್ವಿಪಕ್ಷೀಯ ಮಾತುಕತೆಗಾಗಿ ತೆರಳಲಿದ್ದಾರೆ. ಮೇ 24 ರಿಂದ 28ರ ವರೆಗೆ ಯುನೈಟೆಡ್ ಸೇಟ್ಸ್ ಪ್ರವಾಸವನ್ನು ಎಸ್ ಜೈಶಂಕರ್ ಕೈಗೊಳ್ಳಲಿದ್ದಾರೆ.

ಭಾರತದಲ್ಲಿ ಉಂಟಾಗಿರುವ ಲಸಿಕೆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿಯೂ ಈ ಪ್ರವಾಸ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ. ಲಸಿಕೆಗಳ ಖರೀದಿ ಹಾಗೂ ಉತ್ಪಾದನೆ ವಿಚಾರವಾಗಿ ಭಾರತ ಅಮೆರಿಕ ಕಂಪನಿಗಳು ಹಾಗೂ ಸರ್ಕಾರದೊಂದಿಗೆ ಈಗಾಗಲೇ ಮಾತುಕತೆಯನ್ನು ನಡೆಸುತ್ತಿದೆ. ಈ ಭೇಟಿ ಸಂದರ್ಭದಲ್ಲಿ ಜೈಶಂಕರ್ ಅವರ ಅಜೆಂಡಾದಲ್ಲಿಯೂ ಈ ವಿಚಾರ ಅತ್ಯಂತ ಮಹತ್ವದ ಅಂಶವಾಗಿದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ. ಭಾರತ ಎರಡನೇ ಅಲೆಯ ಕೊರೊನಾ ವೈರಸ್‌ನಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಈ ಭೇಟಿ ಬಹಳಷ್ಟು ಮಹತ್ವದ್ದಾಗಿದೆ.

ಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆ

ಇನ್ನು ಭಾರತದಲ್ಲಿ ಲಸಿಕೆಯ ಕೊರತೆಯ ಬಗ್ಗೆ ಚರ್ಚೆ ನಡೆಸುವ ಸಮಯದಲ್ಲಿ ಭಾರತೀಯ ಉಪಖಂಡದ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಲಸಿಕೆ ಸಮಸ್ಯೆಯ ಬಗ್ಗೆಯೂ ವಿವರಿಸಲಿದ್ದಾರೆ. ಈ ಎರಡು ದೇಶಗಳಿಗೂ ಭಾರತ ಮೊದಲ ಬ್ಯಾಚ್‌ನ ಲಸಿಕೆಗಳನ್ನು ಕಳುಹಿಸಿತ್ತು. ಆದರೆ ಈಗ ಭಾರತ ಲಸಿಕೆ ಕೊರತೆಯನ್ನು ಅನುಭವಿಸುತ್ತಿರುವುದರಿಂದ ಇದು ಅಸಾಧ್ಯವಾಗಿದೆ.

External Affairs Minister Jaishankar on 5day visit to the USA

ನ್ಯೂಯಾರ್ಕ್‌ನಲ್ಲಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಜೆಂಡಾ ಬಗ್ಗೆ ಭಾರತದ ನಿಲುವು ಹಾಗೂ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಲು ಇದೊಂದು ಉತ್ತಮ ಅವಕಾಶವಾಗಿದೆ.

ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!

ಇನ್ನು ವಾಶಿಂಗ್ಟನ್ ಡಿಸಿಯಲ್ಲಿ ಜೈಶಂಕರ್ ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸದಸ್ಯರು ಮತ್ತು ಆಡಳಿತದ ಹಿರಿಯ ಅಧಿಕಾರಿಗಳನ್ನು ಕೂಡ ಎಸ್ ಜೈಶಂಕರ್ ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

English summary
External Affairs Minister Jaishankar on 5day visit to the United States: Covid vaccines for India on agenda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X