ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ 'ಟುಡೇಸ್ ಚಾಣಕ್ಯ' ಶಾಕ್: ಲೋಕಸಮರಕ್ಕೂ ಮುನ್ನ ಮುಖಭಂಗ

|
Google Oneindia Kannada News

Recommended Video

5 States Elections Results 2018 : ಟುಡೇಸ್ ಚಾಣಕ್ಯ ಬಿಜೆಪಿಗೆ ಕೊಟ್ಟ ಶಾಕ್ | Oneindia Kannada

ನವದೆಹಲಿ, ಡಿಸೆಂಬರ್ 08: ಐದು ರಾಜ್ಯಗಳ ಚುನಾವಣೆ ಶುಕ್ರವಾರ ಮುಗಿಯುತ್ತಿದ್ದಂತೆಯೇ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಅದರಲ್ಲೂ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಮತ್ತೆ ಅಧಿಕಾರ ಉಳಿಸಿಕೊಳ್ಳುವುದು ಅನುಮಾನವೆನ್ನಿಸಿದೆ. ಕಳೆದ ಲೋಕಸಭಾ ಚುನಾವಣೆ(2014) ಯಲ್ಲಿ ಅತ್ಯಂತ ನಿಖರವಾದ ಭವಿಷ್ಯ ನುಡಿದಿದ್ದ 'ಟುಡೇಸ್ ಚಾಣಕ್ಯ' ಏಜನ್ಸಿಯ ಸಮೀಕ್ಷೆಯ ಮೇಲೆ ಎಲ್ಲರ ಕಣ್ಣೂ ನೆಟ್ಟಿತ್ತು. ಆದರೆ ಈ ಸಮೀಕ್ಷೆಯೂ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದಿರುವುದು ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು? ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು?

ಬಿಜೆಪಿ ಅಧಿಕಾರದಲ್ಲಿದ್ದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಟುಡೇಸ್ ಚಾಣಕ್ಯ ಅಭಿಪ್ರಾಯಪಟ್ಟಿದೆ.

ಟುಡೇಸ್ ಚಾಣಕ್ಯ ಸಮೀಕ್ಷೆಯ ಹೈಲೈಟ್ಸ್ ಇಲ್ಲಿದೆ.

Array

ರಾಜಸ್ಥಾನ

ರಾಜಸ್ಥಾನದ ಒಟ್ಟು ವಿಧಾನಸಭಾ ಕ್ಷೇತ್ರಗಳು: 200
ಕಾಂಗ್ರೆಸ್ 123 ± 12
ಬಿಜೆಪಿ 68 ± 12
ಇತರರು 8 ± 5
ಮತಹಂಚಿಕೆ: ಕಾಂಗ್ರೆಸ್ 47% ± 3%, ಬಿಜೆಪಿ 37% ± 3%, ಇತರರು 6% ± 3%

ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್

Array

ಮಧ್ಯಪ್ರದೇಶ

ಮಧ್ಯಪ್ರದೇಶದ ಒಟ್ಟು ವಿಧಾನಸಭಾ ಕ್ಷೇತ್ರಗಳು: 230
ಕಾಂಗ್ರೆಸ್ 125 ± 12
ಬಿಜೆಪಿ 103 ± 12
ಇತರರು 2 ± 5
ಮತಹಂಚಿಕೆ: ಕಾಂಗ್ರೆಸ್ 45% ± 3%, ಬಿಜೆಪಿ 41% ± 3%, ಇತರರು 14% ± 3%

ಸಮೀಕ್ಷೆಗಳ ಸಮೀಕ್ಷೆ: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಹವಾ ತಡೆಯುವವರಿಲ್ಲಸಮೀಕ್ಷೆಗಳ ಸಮೀಕ್ಷೆ: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಹವಾ ತಡೆಯುವವರಿಲ್ಲ

ಛತ್ತೀಸ್ ಗಢ

ಛತ್ತೀಸ್ ಗಢ ಒಟ್ಟು ವಿಧಾನಸಭಾ ಕ್ಷೇತ್ರಗಳು: 90
ಕಾಂಗ್ರೆಸ್ 50 ± 8
ಬಿಜೆಪಿ 36 ± 8
ಇತರರು 4 ± 3
ಮತಹಂಚಿಕೆ: ಕಾಂಗ್ರೆಸ್ 42% ± 3% , ಬಿಜೆಪಿ 38% ± 3%, ಇತರರು 20% ± 3%

ಫಲಿತಾಂಶ ಡಿ.11

ಫಲಿತಾಂಶ ಡಿ.11

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮಾತ್ರವಲ್ಲದೆ, ತೆಲಂಗಾಣ ಮತ್ತು ಮಿಜೋರಾಂನಲ್ಲೂ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆದಿದೆ. ಆದರೆ ಟುಡೇಸ್ ಚಾಣಕ್ಯ ಈ ಎರಡು ರಾಜ್ಯಗಳ ಸಮೀಕ್ಷೆ ನಡೆಸಿಲ್ಲ. ಐದೂ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದ್ದು, ಚುನಾವಣೋತ್ತರ ಸಮೀಕ್ಷೆಗಳು ಎಷ್ಟು ನಿಖರವಾಗಿರಲಿವೆ ಎಂಬುದು ತಿಳಿಯಲಿದೆ.

English summary
Exit Polls: Today's Chanakya which has predicted previous Lok Sabha elections (2014) very accurately, now predicts that BJP will lose both Rajasthan and Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X