ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆದ್ದರೂ ಮತಗಳನ್ನು ಕಳೆದುಕೊಂಡ ಕೇಜ್ರಿವಾಲ್, ಸಿಸೋಡಿಯಾ

|
Google Oneindia Kannada News

Recommended Video

Delhi Election Results 2020 : Aravind Kejriwal might have won but these stats say otherwise | AAP

ನವದೆಹಲಿ, ಫೆಬ್ರವರಿ 12: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಭರ್ಜರಿ ಗೆಲುವು ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಒಂದು ಕುತೂಹಲಕಾರಿ ಲೆಕ್ಕಾಚಾರ ಕೂಡ ಹೊರಬಿದ್ದಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರದ ಎಲ್ಲಾ ಸಚಿವರು ಹಾಗೂ ಸ್ಪೀಕರ್ ಮರು ಆಯ್ಕೆಯಾಗಿದ್ದಾರೆ. ಆದರೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಮತ ಪ್ರಮಾಣದಲ್ಲಿ ಮಾತ್ರ ಇಳಿಕೆಯಾಗಿದೆ. ಉಳಿದೆಲ್ಲಾ ಸಚಿವರುಗಳು ಹಾಗೂ ಸ್ಪೀಕರ್ ಮರು ಆಯ್ಕೆಯ ಜೊತೆಗೆ ಮತಪ್ರಮಾಣವನ್ನೂ ಕೂಡ ಹೆಚ್ಚಿಸಿಕೊಂಡಿದ್ದಾರೆ.

ಪತ್ನಿ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಅರವಿಂದ್ ಕೇಜ್ರಿವಾಲ್ಪತ್ನಿ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಅರವಿಂದ್ ಕೇಜ್ರಿವಾಲ್

ಆದರೆ ಇವರಿಬ್ಬರೂ ಅಗ್ರಗಣ್ಯ ನಾಯಕರು ಮಾತ್ರ ತಮ್ಮ ಮತ ಪ್ರಮಾಣವನ್ನು ಕಳೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ. ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಶೇ.4.31 ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೇ.3.04 ರಷ್ಟು ಮತಗಳನ್ನು ಕಳೆದ 2015ರ ವಿಧಾನಸಭಾ ಚುನಾವಣೆಗಿಂತ ಕಡಿಮೆ ಪಡೆದಿದ್ದಾರೆ.

Except Arvind Kejriwal Manish Sisodia All AAP Ministers See Rise In Vote Share

ಇದಕ್ಕೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಆದರೆ ಇದರ ಜೊತೆಗೆ ಇವರ ಗೆಲುವಿನ ಅಂತರ ಕೂಡ ಕಡಿಮೆಯಾಗಿದೆ. ಅರವಿಂದ್ ಕೇಜ್ರಿವಾಲ್ ಮೊದಲ ಹಂತದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರೂ ಗೆಲುವಿನ ಅಂತರ ಕಡಿಮೆಯಾಗಿದೆ.

ಇನ್ನೊಂದೆಡೆ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು 11 ನೇ ಹಂತದ ಮತ ಎಣಿಕೆ ವರೆಗೂ ಕೂಡ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರದ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿಕೊಂಡು 3207 ಮತಗಳಿಂದ ಗೆಲುವ ಸಾಧಿಸಿದ್ದಾರೆ. ಅದೇ 2014ರಲ್ಲಿ 28,791 ಮತಗಳ ಅಂತರದಿಂದ ಸಿಸೋಡಿಯಾ ಗೆಲುವು ಸಾಧಿಸಿದ್ದರು.

English summary
Deputy Chief Minister Sisodia, who encountered the largest drop in vote share of 4.31 percentage points from 2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X