• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

33 ರಾಜಕಾರಣಿಗಳ ವಿದೇಶಕ್ಕೆ ಪ್ರಯಾಣಕ್ಕೆ ನಿರ್ಬಂಧ

|
Google Oneindia Kannada News

ನವದೆಹಲಿ, ನವೆಂಬರ್ 14: ಜಮ್ಮು ಮತ್ತು ಕಾಶ್ಮೀರದ 33 ರಾಜಕೀಯ ಮುಖಂಡರನ್ನು ವಿದೇಶ ಪ್ರಯಾಣದಿಂದ ನಿರ್ಬಂಧಿಸಲಾಗಿದೆ. ಅದರ ಪರಿಣಾಮವಾಗಿ ನ್ಯಾಷನಲ್ ಕಾನ್ಫರೆನ್ಸ್‌ನ ಮಾಜಿ ಶಾಸಕ ಅತ್ಲಾಫ್ ಅಹ್ಮದ್ ವಾನಿ ಅವರನ್ನು ದುಬೈ ವಿಮಾನಕ್ಕೆ ಏರುವುದನ್ನು ತಡೆಯಲಾಯಿತು ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಹೆಸರು ಈ ಪಟ್ಟಿಯಲ್ಲಿಲ್ಲ. ಆದರೆ ವಿವಿಧ ರಾಜಕೀಯ ಪಕ್ಷಗಳ ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಹೆಚ್ಚಾಗಿ ಈ ಪಟ್ಟಿಯಲ್ಲಿದ್ದಾರೆ.

ಅತ್ಲಾಫ್ ಅಹ್ಮದ್ ವಾನಿ ಅವರು ಗುರುವಾರ ಸಂಜೆ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದುಬೈಗೆ ಹೊರಡಲು ವಿಮಾನ ಏರಲು ಮುಂದಾಗಿದ್ದರು. 'ಅಧಿಕಾರಿಗಳಿಗೆ ಧನ್ಯವಾದಗಳು. ನನ್ನನ್ನು ಇಲ್ಲಿಯೇ ಬಿಟ್ಟು ಲಗೇಜ್ ಅನ್ನು ಕುಟುಂಬದೊಂದಿಗೆ ಕಳುಹಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

'ನಾನು ಗುರುವಾರ ಮಧ್ಯಾಹ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದೆ. ವಲಸೆ ಕೇಂದ್ರಕ್ಕೆ ತಲುಪಿದಾಗ ನನ್ನ ಪಾಸ್‌ಪೋರ್ಟ್‌ನಲ್ಲಿ ದೋಷವಿದೆ ಎಂಬಂತೆ ನಟಿಸಿ ನನ್ನನ್ನು ಕೊಠಡಿಯೊಂದಕ್ಕೆ ಕರೆದೊಯ್ಯಲಾಯಿತು' ಎಂದು ಪಹಲ್ಗಾಮ್ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಾನಿ ಹೇಳಿದ್ದಾರೆ.

ತಮ್ಮನ್ನು ಏಕೆ ತಡೆಯಲಾಗಿತ್ತು ಎಂಬುದು ಸುಮಾರು ಮೂರು ಗಂಟೆಯವರೆಗೂ ತಮಗೆ ಗೊತ್ತಾಗಿರಲಿಲ್ಲ. ತಮಗೆ ಕೆಲವು ಸ್ಪಷ್ಟೀಕರಣ ನೀಡುವಂತೆ ವಲಸೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಹೀಗಾಗಿ ತಮ್ಮನ್ನು ಬಿಟ್ಟು ದುಬೈಗೆ ಪ್ರಯಾಣಿಸುವಂತೆ ಕುಟುಂಬಕ್ಕೆ ಮನವೊಲಿಸಿದ್ದಾಗಿ ಅವರು ತಿಳಿಸಿದ್ದಾರೆ.

'ಸುಮಾರು ಮೂರು ಗಂಟೆಗಳ ಬಳಿಕ ನನ್ನ ಪಾಸ್‌ಪೋರ್ಟ್ ಅನ್ನು ವಾಪಸ್ ನೀಡಲಾಯಿತು. ಬಳಿಕ ನಾನು ದೆಹಲಿಯಲ್ಲಿನ ನನ್ನ ವಸತಿಗೆ ಮರಳಿದೆ. ಅದಕ್ಕೂ ಮುನ್ನ ನಾನು ಗೊಂದಲದ ನಡುವೆ ನನ್ನ ಲಗೇಜ್ ಚೆಕ್ ಇನ್ ಮಾಡಿದ್ದರಿಂದ ಕೆಲವು ಖರೀದಿಗಳನ್ನು ಮಾಡಬೇಕಾಯಿತು' ಎಂದು ಅವರು ಹೇಳಿದ್ದಾರೆ. ಮಾರ್ಚ್ 2021ರವರೆಗೆ ಅವರು ವಿದೇಶಕ್ಕೆ ಪ್ರಯಾಣಿಸುವಂತಿಲ್ಲ ಎಂದು ತಿಳಿಸಲಾಗಿದೆ.

English summary
Ex National Conference MLA Atlaf Ahmed Wani was prevented from boarding flight to Dubai on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X