ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದ ಏನೇ ಇರಲಿ, ಇವಿಎಂ ತಯಾರಕ ಕಂಪನಿಗಂತೂ ಭರ್ಜರಿ ಲಾಭ

|
Google Oneindia Kannada News

ಹೈದರಾಬಾದ್, ಜನವರಿ 29: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಲಾಗಿದೆ ಎಂಬ ಆರೋಪ ಪ್ರತಿ ಚುನಾವಣೆಯಲ್ಲಿಯೂ ಕೇಳಿಬರುತ್ತಿದೆ. ಅದು ಸಾಧ್ಯವಿಲ್ಲ ಎಂಬ ವಾದವನ್ನು ಚುನಾವಣಾ ಆಯೋಗ ವಾದಿಸುತ್ತಿದೆ.

ವಿರೋಧ ಪಕ್ಷಗಳು ಮತಯಂತ್ರಗಳನ್ನು ಬಿಟ್ಟು ಈ ಹಿಂದಿನಂತೆಯೇ ಬ್ಯಾಲೆಟ್ ಪೇಪರ್ ಬಳಸುವ ಸಾಂಪ್ರದಾಯಿಕ ಪದ್ಧತಿಗೆ ಮರಳುವ ಬಗ್ಗೆ ಒತ್ತಾಯಿಸುತ್ತಿವೆ.

ಇವಿಎಂ ಹ್ಯಾಕ್ ಸಾಧ್ಯವಿಲ್ಲ , ಮತಪತ್ರ ಬಳಕೆ ಮಾಡಲ್ಲ: ಸಿಇಸಿ ಇವಿಎಂ ಹ್ಯಾಕ್ ಸಾಧ್ಯವಿಲ್ಲ , ಮತಪತ್ರ ಬಳಕೆ ಮಾಡಲ್ಲ: ಸಿಇಸಿ

ಆದರೆ, ಅತ್ತ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳನ್ನು ತಯಾರಿಸುವ ಇಸಿಐಎಲ್ ಕಂಪೆನಿಯ ಅದಾಯವಂತೂ ಹೆಚ್ಚಾಗುತ್ತಿದೆ.

evm vvpat maker ecil got order worth of Rs 1800 crore from election commission

ಹಳೆಯ ಇವಿಎಂಗಳ ಬದಲು ಎಂ3 ಆವೃತ್ತಿಯ ಯಂತ್ರಗಳನ್ನು ಒದಗಿಸಲು ಬೇಡಿಕೆ ಬಂದಿದ್ದು, ಇದರಿಂದ ಕಂಪೆನಿಗೆ ಒಳ್ಳೆಯ ಲಾಭ ದೊರಕುತ್ತಿದೆ.

2017-18ರ ಅವಧಿಯಲ್ಲಿ ಇಸಿಐಎಲ್ ವಾರ್ಷಿಕ ವ್ಯವಹಾರ 1,275 ಕೋಟಿ ರೂ. ಇತ್ತು. 2018-19ರ ಹಣಕಾಸು ವರ್ಷದಲ್ಲಿ ಚುನಾವಣಾ ಆಯೋಗ 1,800 ಕೋಟಿ ವೆಚ್ಚದ ಇವಿಎಂ ಮತ್ತು ವಿವಿಪ್ಯಾಟ್‌ಗಳ ಪೂರೈಕೆಗೆ ಬೇಡಿಕೆ ಇಟ್ಟಿದೆ. ಇದರಿಂದ ಇಸಿಐಎಲ್‌ನ ಒಟ್ಟಾರೆ ವಹಿವಾಟು 2,400 ಕೋಟಿ ರೂ.ಗೆ ಹೆಚ್ಚಲಿದೆ.

ಇವಿಎಂ ಹ್ಯಾಕ್ ಹೇಳಿಕೆ : ಸೈಯದ್ ವಿರುದ್ಧ ದೂರು ದಾಖಲು ಇವಿಎಂ ಹ್ಯಾಕ್ ಹೇಳಿಕೆ : ಸೈಯದ್ ವಿರುದ್ಧ ದೂರು ದಾಖಲು

ಸೇನೆಗೆ ಎಲೆಕ್ಟ್ರಾನಿಕ್ ಫ್ಯೂಸ್‌ಗಳು, ಮಿಲಿಟರಿ ರೇಡಿಯೊಗಳು, ಜಾಮ್ಮರ್, ಅಣು ಸ್ಥಾವರಗಳಿಗೆ ಸಾಧನವನ್ನು ಕೂಡ ಇಸಿಐಎಲ್ ತಯಾರಿಸಿ ಕೊಡುತ್ತದೆ.

'ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ' 'ಲೋಕಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ಸ್ ಇರಲಿ, ಇವಿಎಂ ಬೇಡ'

2019ರಲ್ಲಿ ಲೋಕಸಭೆ ಹಾಗೂ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುವುದರಿಂದ ನಮ್ಮ ವಹಿವಾಟು 2,600 ಕೋಟಿ ರೂ. ತಲುಪಲಿದೆ. ಹಳೆಯ ಯಂತ್ರಗಳ ಬದಲು ಹೊಸ ಯಂತ್ರಗಳನ್ನು ಬದಲಿಸುವುದರಿಂದ ಆದಾಯ ಹೆಚ್ಚಳವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
EVM and VVPAT machines maker ECIL got orders worth Rs 1,800 crore from the election commission, it likely to boost company's turnover to Rs 2,400 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X