ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?

|
Google Oneindia Kannada News

ನವದೆಹಲಿ, ಜನವರಿ 23: ಭಾರತದಲ್ಲಿ ಉತ್ಪಾದಿಸುವ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಹ್ಯಾಕ್ ಮಾಡಬಹುದು, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ನಿಂದಾಗಿ ಬಿಜೆಪಿಗೆ ಲಾಭವಾಯಿತು ಎಂದು ಲಂಡನ್​ನಲ್ಲಿ ಭಾರತ ಮೂಲದ ಸೈಬರ್ ತಜ್ಞ ಸೈಯ್ಯದ್ ಶುಜಾ ನೀಡಿದ ಹೇಳಿಕೆ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಸುಳ್ಳು ಆರೋಪ ಮಾಡಿರುವ ಶುಜಾ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದೆ.

ಲಂಡನ್​​ನಲ್ಲಿ ನಡೆದ ಹ್ಯಾಕಥಾನ್ ನಲ್ಲಿ ಸ್ಕೈಪ್ ವಿಡಿಯೋ ಕಾಲಿಂಗ್ ಮೂಲಕ ಭಾಷಣ ಮಾಡುವ ವೇಳೆ ಸ್ವಯಂ ಘೋಷಿತ ಸೈಬರ್ ತಜ್ಞ ಶುಜಾ ಅವರು ನೀಡಿದ ವಿವರಗಳಿ ಭಾರತದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ.

EVM hacking claim: EC asks Delhi Police to lodge FIR

ಭಾರತದಲ್ಲಿ ಚುನಾವಣೆಯ ವೇಳೆಯಲ್ಲಿ ಬಳಕೆ ಮಾಡುವ ಇವಿಎಂ ಮಷಿನಗಳನ್ನು ತುಂಬಾ ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿದ್ದರು. ಆದರೆ, ಚುನಾವಣಾ ಆಯೋಗದ ತಾಂತ್ರಿಕ ತಜ್ಞ ರಜತ್ ಮೂನಾ ಅಲ್ಲೆಗಳೆದು ಸ್ಪಷ್ಟನೆ ನೀಡಿದ್ದರು.

ಕೇಂದ್ರ ಮಾಜಿ ಸಚಿವ ಗೋಪಿನಾಥ್ ಮುಂಡೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಇವಿಎಂ ಹಗರಣ ಕಾರಣ. ಬಿಜೆಪಿ ಗೆದ್ದಿರುವ ಎಲ್ಲ ರಾಜ್ಯಗಳ ಫಲಿತಾಂಶಕ್ಕೆ ಇವಿಎಂ ಹ್ಯಾಕಿಂಗ್ ಕಾರಣ ಎಂದು ಶುಜಾ ಆರೋಪಿಸಿದ್ದರು.

2009ರಿಂದ 2014ರವರೆಗೂ ಎಲೆಕ್ಟ್ರಾನಿಕ್​ ಕಾರ್ಪೊರೇಷನ್ ಆಫ್​ ಇಂಡಿಯಾ ಸಂಸ್ಥೆಯಲ್ಲಿ ​(ECIL) ನಾನು ಉದ್ಯೋಗಿಯಾಗಿದ್ದೆ ಎಂದು ಅಮೇರಿಕಾ ಮೂಲದ ಸೈಯದ್ ಸೂಜಾ ಹೇಳಿರುವುದು ಶುದ್ಧ ಸುಳ್ಳು ಎಂಬುದೂ ಸಾಬೀತಾಗಿದೆ. ಈ ಬಗ್ಗೆ ECIL ಪತ್ರಿಕಾ ಪ್ರಕಟಣೆ ನೀಡಿದ್ದು, ಆ ವ್ಯಕ್ತಿ ಹೇಳುವಂತೆ ಎಂದಿಗೂ ಅವರು ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿಲ್ಲ. ಅಥವಾ ಯಾವುದೇ ರೀತಿಯಲ್ಲಿ ನಮ್ಮ ಸಂಸ್ಥೆಗೂ ಆತನಿಗೂ ಯಾವುದೇ ಸಂಬಂಧ, ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದೆ

English summary
Election Commission has asked Delhi Police to lodge an FIR and investigate the matter related to claim by a self-proclaimed cyber expert on EVMs tampering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X