• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನವು ಭಾರತಕ್ಕಿಂತ ಕೊವಿಡ್ ಅನ್ನು ಉತ್ತಮವಾಗಿ ನಿಭಾಯಿಸಿದೆ: ರಾಹುಲ್

|

ನವದೆಹಲಿ, ಅಕ್ಟೋಬರ್ 16: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಭಾರತಕ್ಕಿಂತ ಕೊವಿಡ್ 19 ಅನ್ನು ಉತ್ತಮವಾಗಿ ನಿಭಾಯಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಯನ್ಮಾರ್, ಬಾಂಗ್ಲಾದೇಶ, ನೇಪಾಳ, ಚೀನಾ, ಭೂತಾನ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಭಾರತದ 2020-21ರ ಐಎಂಎಫ್ ಬೆಳವಣಿಗೆಯ ಅಂದಾಜನ್ನು ತೋರಿಸುವ ಚಾರ್ಟ್ ಅನ್ನು ಟ್ಯಾಗ್ ಮಾಡುವ ಮೂಲಕ ಗಾಂಧಿ ಟ್ವಿಟ್ಟರ್ ನಲ್ಲಿ ಮೋದಿ ಸರ್ಕಾರವನ್ನು ಮತ್ತೊಮ್ಮೆ ಟೀಕಿಸಿದ್ದಾರೆ.

ಪಾಕಿಸ್ತಾನ, ನೇಪಾಳ ಬಿಟ್ಟರೆ ಭಾರತವೇ ಬಡರಾಷ್ಟ್ರ: ಐಎಂಎಫ್

ಕೇಂದ್ರ ಸರ್ಕಾರದ ಕೊವಿಡ್ ನಿಭಾಯಿಸುವಲ್ಲಿ ಮತ್ತು ಆರ್ಥಿಕ ಪುನಶ್ಚೇತನ ನೀತಿಗಳ ವಿರುದ್ಧ ವಾಗ್ದಾಳಿ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಭಾರತ 2021ರಲ್ಲಿ ಶೇ.8.8ರಷ್ಟು ಬೆಳವಣಿಗೆ ದರ

ಭಾರತ 2021ರಲ್ಲಿ ಶೇ.8.8ರಷ್ಟು ಬೆಳವಣಿಗೆ ದರ

ಚೀನಾದ ನಿರೀಕ್ಷಿತ ಬೆಳವಣಿಗೆಯ ದರವನ್ನು ಶೇಕಡಾ 8.2 ರಷ್ಟಿದೆ ಎಂದು ಐಎಂಎಫ್ ತನ್ನ ಇತ್ತೀಚಿನ 'ವಿಶ್ವ ಆರ್ಥಿಕ ಔಟ್ ಲುಕ್ ನಲ್ಲಿ ತಿಳಿಸಿದೆ.

ಭಾರತವು 2021 ರಲ್ಲಿ ಶೇಕಡಾ 8.8 ರಷ್ಟು ಬೆಳವಣಿಗೆಯ ದರವನ್ನು ಮುಟ್ಟುವ ಸಾಧ್ಯತೆಯಿದೆ, ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯ ಸ್ಥಾನವನ್ನು ರಾಷ್ಟ್ರವು ಮರಳಿ ಪಡೆಯುತ್ತದೆ ಎಂದಿದೆ.

ಆರ್ಥಿಕತೆಯ ಸಂಕುಚಿತ

ಆರ್ಥಿಕತೆಯ ಸಂಕುಚಿತ

ಈ ಬಾರಿ ಭಾರತದ ಆರ್ಥಿಕತೆಯು ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಚಾರ್ಟ್ ತೋರಿಸಿದೆ, ಇದು ಪಟ್ಟಿಯಲ್ಲಿರುವ ಎಲ್ಲಾ ಇತರೆ ದೇಶಗಳಿಗಿಂತ ಅತಿ ಹೆಚ್ಚಿನ ಪ್ರಮಾಣದ ಕುಸಿತವಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ಕೊವಿಡ್ ಅನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ" ಎಂದು ಗಾಂಧಿ ಚಾರ್ಟ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ

ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಲಿದೆ ಬಾಂಗ್ಲಾದೇಶ

ಕೊವಿಡ್ 19 ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಭಾರತೀಯ ಆರ್ಥಿಕತೆಯು ಈ ವರ್ಷ ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಂಗಳವಾರ ತಿಳಿಸಿದೆ.

ಈ ವರ್ಷದ ತಲಾವಾರು ಜಿಡಿಪಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕುತ್ತದೆ ಎಂದು ತೋರಿಸುತ್ತಿರುವ ಐಎಂಎಫ್ ಬೆಳವಣಿಗೆಯ ಅಂದಾಜಿನ ಬಗ್ಗೆ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಇದು ಬಿಜೆಪಿಯ ಆರು ವರ್ಷಗಳ ದ್ವೇಷ ತುಂಬಿದ,ಸಾಂಸ್ಕೃತಿಕ ರಾಷ್ಟ್ರೀಯತೆ ಹೇರುವ ಒಂದು ಘನ ಸಾಧನೆ ಎಂದು ಬಣ್ಣಿಸಿದ್ದಾರೆ.

  Joe Baiden ಗೆ ವೋಟ್ ಹಾಕಿದ್ರೆ , ನಿಮ್ಮ ಸರ್ವನಾಶ ಖಂಡಿತ!! | Oneindia Kannada

  ಚಾರ್ಟ್‌ನಲ್ಲಿ ಇರುವುದೇನು?

  ಈ ವರ್ಷ ಭಾರತದ ಆರ್ಥಿಕತೆಯು ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಚಾರ್ಟ್ ತೋರಿಸಿದೆ, ಇದು ಪಟ್ಟಿಯಲ್ಲಿರುವ ಎಲ್ಲಾ ಇತರೆ ದೇಶಗಳಿಗಿಂತ ಅತಿ ಹೆಚ್ಚಿನ ಪ್ರಮಾಣದ ಕುಸಿತವಾಗಿದೆ. "ಬಿಜೆಪಿ ಸರ್ಕಾರದ ಮತ್ತೊಂದು ಘನ ಸಾಧನೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ಕೋವಿಡ್ ಅನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ" ಎಂದು ಗಾಂಧಿ ಚಾರ್ಟ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

  English summary
  Congress leader Rahul Gandhi took a dig at the centre on Friday over IMF's projection that the Indian economy is set to contract by a massive 10.3 per cent this year, saying it was another "solid achievement" by the government.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X