ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಳಸುವ ಮಾಧ್ಯಮಗಳಿಗೆ ಸುಪ್ರೀಂ ತಪರಾಕಿ

|
Google Oneindia Kannada News

ನವದೆಹಲಿ, ಆಗಸ್ಟ್ 02: "ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಸಂತ್ರಸ್ತೆಯರ ಎಡಿಟೆಡ್ ಚಿತ್ರವನ್ನೂ, ವಿಡಿಯೋವನ್ನೂ ಮಾಧ್ಯಮಗಳು ಬಳಸುವಂತಿಲ್ಲ" ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು(ಆಗಸ್ಟ್ 02) ನೀಡಿದೆ.

ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದ ಕತುವಾ ಅತ್ಯಾಚಾರ ಪ್ರಕರಣದನಂತರ ಅಪ್ರಾಪ್ತ ಬಾಲಕಿಯ ಚಿತ್ರವನ್ನು ಮಾಧ್ಯಮಗಳು ಬಳಸಿದ್ದನ್ನು ಸುಪ್ರೀಂ ಕೋರ್ಟ್ ವಿರೋಧಿಸಿತ್ತು, ಸಂತ್ರಸ್ಥೆಯ ಚಿತ್ರ ಬಳಸಿದ ಮಾಧ್ಯಮಗಳಿಗೆ ದಂಡ ವಿಧಿಸಿತ್ತು.

ಬಾಲಕಿಯ ಕೊಲೆ, ಅತ್ಯಾಚಾರ ಶಂಕೆ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆಬಾಲಕಿಯ ಕೊಲೆ, ಅತ್ಯಾಚಾರ ಶಂಕೆ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆ

ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಈ ಮೊಕದ್ದಮೆಯ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಮಾಧ್ಯಮಗಳು ಈ ವಿಷಯದಲ್ಲಿ ಅಂಕುಷ ಹಾಕಿಕೊಳ್ಳಬೇಕು ಎಂದಿದೆ.

Even morphed photo of child rape victims should not be used: SC

ಬಾಲಕಿಯರ ನೈಜ ಚಿತ್ರವನ್ನು ಮಾತ್ರವಲ್ಲ, ಎಡಿಟೆಡ್(ಕಣ್ಣಿಗೆ ಕಪ್ಪು ಪಟ್ಟಿ ಹಾಕುವ, ಬ್ಲರ್ ಮಾಡುವ) ಚಿತ್ರವನ್ನೂ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಸಂತ್ರಸ್ಥೆಯರಿಗೆ ಗೌರವ ನೀಡುವಂತೆ ಕೋರಿದೆ.

ಬಿಹಾರದ ಶಲ್ಟರ್ ಹೋಂ ನಲ್ಲಿ ನಡೆದ 34 ಬಾಲಕಿಯರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಸ್ವಯಂಪ್ರೇರಿತ ಮೊಕದ್ದಮೆ ಹೂಡಿರುವ ನ್ಯಾಯಾಲಯ, ಈ ಕುರಿತು ಮಾಹಿತಿ ನೀಡುವಂತೆ ಬಿಹಾರ ಸರ್ಕಾರವನ್ನು ಆದೇಶಿಸಿದೆ.

English summary
The Supreme Court on Thursday observed that even morphed picture of child rape victims should not be published. The court made the observation while expressing concern over the identity of child rape victims being revealed by print and electronic media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X