ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'1,000 ಕೇಸ್‌ಗಳಿದ್ದರೂ ಹಿಂಜರಿಯೋ' ಕೇಜ್ರಿವಾಲ್‌ಗೆ ಬಗ್ಗಾ ಸವಾಲು

|
Google Oneindia Kannada News

ನವದೆಹಲಿ ಮೇ 11: ತಮ್ಮನ್ನು ಭಯೋತ್ಪಾದಕನಂತೆ ಬಂಧಿಸಿದ್ದಾರೆ ಎಂದು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಬುಧವಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ್ದಾರೆ. ಗುರು ಗ್ರಂಥ ಸಾಹಿಬ್ ತ್ಯಾಗ ಪ್ರಕರಣ, ಡ್ರಗ್ ಮಾಫಿಯಾದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಕ್ಕಾಗಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಪೊಲೀಸರು ತಮ್ಮನ್ನ ಭಯೋತ್ಪಾದಕನಂತೆ ಬಂಧಿಸಿದ್ದಾರೆ ಎಂದು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಬುಧವಾರ ಹೇಳಿದ್ದಾರೆ.

ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರದಲ್ಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೇಜ್ರಿವಾಲ್ ಮುಖ್ಯಮಂತ್ರಿ ಮತ್ತು ಪಂಜಾಬ್‌ ರಾಜ್ಯದಲ್ಲಿ ಭಗವಂತ್ ಸಿಂಗ್ ಮಾನ್ ಮುಖ್ಯಮಂತ್ರಿಯಾಗಿದ್ದಾರೆ.

ಬಗ್ಗಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪಂಜಾಬ್ ಹೈಕೋರ್ಟ್ ಸೂಚನೆಬಗ್ಗಾ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪಂಜಾಬ್ ಹೈಕೋರ್ಟ್ ಸೂಚನೆ

ಪಂಜಾಬ್, ಹರಿಯಾಣ ಮತ್ತು ದೆಹಲಿಯ ಪೊಲೀಸ್ ಪಡೆಗಳ ಜಗಳದಲ್ಲಿ ಸಿಲುಕಿ ಬಂಧನದ ನಂತರ ಬಿಡುಗಡೆಗೊಂಡ ಬಗ್ಗಾ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಈ ವೇಳೆ ಅವರು, 'ಗುರು ಗ್ರಂಥ ಸಾಹಿಬ್ ಅನ್ನು ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯ ಬಗ್ಗೆ ಕೇಜ್ರಿವಾಲ್ ಅವರಿಗೆ ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುವುದಾಗಿ ಪ್ರತಿಪಾದಿಸಿದರು. ಪಂಜಾಬ್, ಡ್ರಗ್ ಮಾಫಿಯಾ ಮತ್ತು ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಖಲಿಸ್ತಾನ್ ಘೋಷಣೆಗಳನ್ನು ಎತ್ತುತ್ತಿದ್ದಾರೆ ಇದರ ವಿರುದ್ಧ ನಾವು ಧ್ವನಿ ಎತ್ತುತ್ತೇನೆ' ಎಂದು ಅವರು ಹೇಳಿದ್ದಾರೆ. ಜೊತೆಗೆ "ನನ್ನ ವಿರುದ್ಧ ಒಂದು ಅಥವಾ 1,000 ಪ್ರಕರಣಗಳು ದಾಖಲಾಗಿವೆಯೇ ಎಂದು ನಾನು ಕೇಜ್ರಿವಾಲ್‌ಗೆ ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತೇನೆ. ನನ್ನನ್ನು ಬಂದಿಸಲಿ" ಎಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಬಗ್ಗಾ ಕೇಜ್ರಿವಾಲ್‌ಗೆ ಸವಾಲ್ ಹಾಕಿದ್ದಾರೆ.

 Even If 1,000 Cases Against Me: Bagga Challenges Kejriwal

ಬಗ್ಗಾ ಅವರನ್ನು ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ನಗರ ಅಧ್ಯಕ್ಷ ಆದೇಶ್ ಗುಪ್ತಾ ಮತ್ತು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಸ್ವಾಗತಿಸಿದರು. ನ್ಯಾಯಕ್ಕಾಗಿ ಹೋರಾಟವನ್ನು ಬೆಂಬಲಿಸಿದ ನ್ಯಾಯಾಲಯ, ಬಿಜೆಪಿಯ ಉನ್ನತ ನಾಯಕರು ಮತ್ತು ದೆಹಲಿ ಮತ್ತು ಹರಿಯಾಣದ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಬಳಿಕ ಅವರು ಎಎಪಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ. "ನನ್ನನ್ನು ಭಯೋತ್ಪಾದಕನಂತೆ ಬಂಧಿಸಲಾಯಿತು. ಗುರು ಗ್ರಂಥ ಸಾಹಿಬ್‌ನ ತ್ಯಾಗದ ಆರೋಪಿಗಳನ್ನು ಬಂಧಿಸುವ ಭರವಸೆಯ ಬಗ್ಗೆ ಕೇಜ್ರಿವಾಲ್ ಅವರನ್ನು ಕೇಳುವುದು ನನ್ನ ತಪ್ಪೇ, ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಗಳನ್ನು ಎತ್ತುತ್ತಿರುವ ಡ್ರಗ್ ಮಾಫಿಯಾ ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮದ ಬಗ್ಗೆ ಕೇಳುವುದು ನನ್ನ ತಪ್ಪೇ," ಎಂದು ಬಿಜೆಪಿ ಮುಖಂಡ ಬಗ್ಗಾ ಪ್ರಶ್ನೆ ಮಾಡಿದ್ದಾರೆ.

 Even If 1,000 Cases Against Me: Bagga Challenges Kejriwal

ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಕಳೆದ ವಾರ ದೆಹಲಿಯ ಜನಕ್‌ಪುರಿ ನಿವಾಸದಿಂದ ಬಂಧಿಸಿದ್ದರು. ಬಳಿಕ ದೆಹಲಿ ಪೊಲೀಸರು ಬಗ್ಗಾ ಅಪಹರಣದ ಪ್ರಕರಣವನ್ನು ದಾಖಲಿಸಿದ್ದರು. ಹಲವು ನಾಟಕೀಯ ಬದಲಾವಣೆಯ ನಂತರ ಪಂಜಾಬ್ ಕೌಂಟರ್ಪಾರ್ಟ್‌ನಲ್ಲಿ ಅವರನ್ನು ತಡೆದು ಪಂಜಾಬ್ ಪೊಲೀಸರಿಂದ ಹರಿಯಾಣ ಪೊಲೀಸರು ಬಗ್ಗಾ ಅವರನ್ನು ದೆಹಲಿಗೆ ವಾಪಸ್ಸು ಕರೆತಂದರು. ಜುಲೈ 5 ರವರೆಗೆ ಬಗ್ಗಾ ಅವರನ್ನು ಬಂಧಿಸದಂತೆ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಮಂಗಳವಾರ ಪಂಜಾಬ್ ಪೊಲೀಸರಿಗೆ ನಿರ್ದೇಶನ ನೀಡಿದೆ.

English summary
"I was arrested like a terrorist'' BJP's Tajinder Bagga Challenges Arvind Kejriwal on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X