ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಹದಗೆಟ್ಟ ಹವಾಗುಣ: ಖಾಸಗಿ ವಾಹನಗಳಿಗೆ ನಿರ್ಬಂಧ ಸಾಧ್ಯತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಸುಪ್ರೀಂಕೋರ್ಟ್ ನೇಮಕ ಮಾಡಿದ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ದೆಹಲಿಯಲ್ಲಿ ಖಾಸಗಿ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಟ್ಟಿದ್ದು, ವಾಯು ಮಾಲಿನ್ಯದ ಪ್ರಮಾಣ ತುರ್ತು ಪರಿಸ್ಥಿತಿ ತಲುಪಿದೆ. ಇತ್ತೀಚೆಗೆ ಹೊರಬಿದ್ದ ವಾಯುಗುಣಮಟ್ಟ ಪತ್ತೆ ಸಾಧನದ ವರದಿಗಳ ಪ್ರಕಾರ ದೆಹಲಿಯ ಆಗಸದಲ್ಲಿ ಧೂಲಿನ ಕಣದಿಂದ ದಟ್ಟ ಮೋಡ ಆವರಿಸಿದ್ದು,ನವೆಂಬರ್ 1ರಿಂದಲೇ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸುಪ್ರೀಂಕೋರ್ಟ್ ನಿರ್ದೇಶಿತ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಭುರೆಲಾಲ್ ತಿಳಿಸಿದ್ದಾರೆ.

ದೆಹಲಿ: 15 ವರ್ಷ ಹಳೆಯ ಡೀಸೆಲ್ ವಾಹನಗಳು ರಸ್ತೆಗಿಳಿಯುವಂತಿಲ್ಲ ದೆಹಲಿ: 15 ವರ್ಷ ಹಳೆಯ ಡೀಸೆಲ್ ವಾಹನಗಳು ರಸ್ತೆಗಿಳಿಯುವಂತಿಲ್ಲ

ದೆಹಲಿ ಸರ್ಕಾರ ಸಾರಿಗೆ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುವ ಅನಿವಾರ್ಯತೆ ಎದುರಾಗಿದೆ, ಏಕೆಂದರೆ ಕಳೆದ ಮೂರು ದಿನಗಳಿಂದ ಆವರಿಸಿರುವ ಧೂಳಿನ ಕಣಗಳ ದಟ್ಟ ಮೋಡ ಮುಂದಿನ ಮೂರು ದಿನಗಳಲ್ಲಿ ಕಡಿಮೆ ಆಗುವುದು ಅನುಮಾನವಾಗಿದೆ ಈ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಹೊಂದಿಕೊಂಡಂತಹ ಸುತ್ತಮುತ್ತಲಿನ ರಾಜ್ಯಗಳ ಜನರು ದೆಹಲಿ ಪ್ರದೇಶದಲ್ಲಿ ಕೇವಲ ಮೆಟ್ರೋ ಹಾಗೂ ಇತರೆ ಸಮೂಹ ಸಾರಿಗೆ ಬಳಸಿ ಸಂಚರಿಸಬೇಕಾದ ಅಗತ್ಯವಿದೆ.

EPCA to restrict private vehicles in Delhi following air quality plunges

ಅಲ್ಲದೆ ದೆಹಲಿ ಮೆಟ್ರೋ ರೈಲುಗಳ ಓಡಾಟದ ಅವಧಿಯನ್ನು ವಿಸ್ತರಿಸಿ ಹೆಚ್ಚುವರಿ ಕೋಚುಗಳನ್ನು ಅಳವಡಿಸಿ ಸಮೂಹ ಸಾರಿಗೆಯನ್ನು ಬಲಪಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆಯೇ ದೆಹಲಿ ಸರ್ಕಾರ 2016 ಜನವರಿಯಿಂದ ಸರಿ, ಬೆಸ ದಿನಗಳನ್ನು ಜಾರಿಗೊಳಿಸಿ ಕಾರುಗಳ ಓಡಾಟದ ಮೇಲೆ ನಿರ್ಬಂಧವನ್ನು ಹೇರಿತ್ತು.

ಅದು 2017ರ ನವೆಂಬರ್ ವರೆಗೂ ಮುಂದುವರೆದಿತ್ತಾದರೂ ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿತ್ತು. ಇದೀಗ ದೆಹಲಿಯಲ್ಲಿ ಮತ್ತೆ ವಾಹನಗಳ ಮೇಲೆ ನಿರ್ಬಂಧ ಹೇರುವ ಅಗತ್ಯ ಎದುರಾಗಿದ್ದು, ಮಂಗಳವಾರ ಏರ್ ಕ್ವಾಲಿಟಿ ಇಂಡೆಕ್ಸ್ ಬಿಡುಗಡೆ ಮಾಡಿದ ವರದಿಯ ಅನುಸಾರ ದೆಹಲಿಯ ವಾಯುಗುಣಮಟ್ಟ 401 ಮೀರಿದ್ದು ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಸೂಚಿಸುತ್ತದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

ವಾಯುಗುಣಮಟ್ಟ ಸಾಧನ ನೀಡಿರುವ ವರದಿ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಗಾಳಿಯಲ್ಲಿ ಧೂಳಿನ ಕಣಗಳ ಪ್ರಮಾಣ ತಗ್ಗುವ ಸಾಧ್ಯತೆಗಳು ಕಡಿಮೆ ಇದೆ. ಉತ್ತರ ಭಾರತದ ವಾಯುವಿನ ವೇಗದಲ್ಲಿ ತೀವ್ರ ಕುಂಠಿತವಾಗಿರುವುದರಿಂದ ದೆಹಲಿಯಲ್ಲಿ ವಾಯುಗುಣಮಟ್ಟ ಸುಧಾರಿಸುವುದು ಅನುಮಾನ ಎನ್ನಲಾಗುತ್ತಿದೆ.

EPCA to restrict private vehicles in Delhi following air quality plunges

ಪರಿಸರ ಸಮ್ಮತಿ ಪಡೆಯಲು ಮಂತ್ರಿಟೆಕ್‌ಝೋನ್‌ಗೆ ಎನ್‌ಜಿಟಿ ಸೂಚನೆ ಪರಿಸರ ಸಮ್ಮತಿ ಪಡೆಯಲು ಮಂತ್ರಿಟೆಕ್‌ಝೋನ್‌ಗೆ ಎನ್‌ಜಿಟಿ ಸೂಚನೆ

ಬೆಂಗಳೂರಿನಲ್ಲಿಯೂ ಇಂಥದ್ದೇ ಪರಿಸ್ಥಿತಿ ಎದುರಾದರೆ ಆಶ್ಚರ್ಯವೇನಿಲ್ಲ, ದಿನದಿಂದ ದಿನಕ್ಕೆ ವಾಹನಗಳ ಖರೀದಿ ಹೆಚ್ಚಾಗಿದ್ದು, 75 ಲಕ್ಷ ವಾಹನಗಳಿವೆ, ಇದೇ ರೀತಿ ವಾಹನಗಳ ಖರೀದಿ ಮುಂದುವರೆದರೆ ಮುಂದೊಂದು ದಿನ ದೆಹಲಿಯ ಪರಿಸ್ಥಿತಿಯನ್ನೇ ಬೆಂಗಳೂರು ಕೂಡ ಅನುಭವಿಸಬೇಕಾದೀತು. ಹಾಗಾಗಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರು ಬೆಂಗಳೂರಲ್ಲಿ ಹೊಸ ವಾಹನಗಳ ಖರೀದಿಗೆ ತಾತ್ಕಾಲಿಕ ನಿರ್ಬಂಧ ಹೇರುವ ಕುರಿತು ಚಿಂತನೆ ನಡೆದಿದೆ ಎಂದಿದ್ದಾರೆ.

English summary
As air quality has been plunged into severe level, Environment Pollution Control Authority is thinking of impose restrictions on private vehicles in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X