ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನಕ್ಕೆ 3,000 ಕೋಟಿ ದಂಡ ವಿಧಿಸಿದ ಹಸಿರು ನ್ಯಾಯಾಲಯ: ಕಾರಣವೇನು?

|
Google Oneindia Kannada News

ನವದೆಹಲಿ, ಸೆ.16: ಘನ ಹಾಗೂ ದ್ರವ ತ್ಯಾಜ್ಯವನ್ನು ನಿರ್ವಹಣೆ ಮಾಡದೆ ಪರಿಸರಕ್ಕೆ ಹಾನಿ ಉಂಟು ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜಸ್ಥಾನಕ್ಕೆ 3,000 ಕೋಟಿ ರೂಪಾಯಿ ದಂಡ ವಿಧಿಸಿದೆ.

ತ್ಯಾಜ್ಯ ನಿರ್ವಹಣೆಯಲ್ಲಿನ ನ್ಯೂನತೆಗಳಿಂದಾಗಿ ಪರಿಸರಕ್ಕೆ ಆಗುತ್ತಿರುವ ನಿರಂತರ ಹಾನಿಯನ್ನು ನಿವಾರಿಸಲು ಎನ್‌ಜಿಟಿ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಪರಿಹಾರ ಅಗತ್ಯ ಎಂದು ಅಧ್ಯಕ್ಷರಾದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್, ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ತಜ್ಞ ಪ್ರೊ.ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

'ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ': ಅಧಿಸೂಚನೆ ಪ್ರಶ್ನಿಸಿದ್ದ PIL ವಜಾಗೊಳಿಸಿದ ಸುಪ್ರೀಂ'ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ': ಅಧಿಸೂಚನೆ ಪ್ರಶ್ನಿಸಿದ್ದ PIL ವಜಾಗೊಳಿಸಿದ ಸುಪ್ರೀಂ

ಮೇಲಾಗಿ, ಪರಿಸರಕ್ಕೆ ಮಾಡಿರುವ ನಿರಂತರ ಹಾನಿಯನ್ನು ಸರಿ ಮಾಡಲು ಅಗತ್ಯವಾದ ಪ್ರಮಾಣೀಕೃತ ಹೊಣೆಗಾರಿಕೆಯನ್ನು ಪೀಠ ನಿಗದಿಪಡಿಸದೆ. ಕೇವಲ ಆದೇಶಗಳನ್ನು ರವಾನಿಸುವುದರಿಂದ ಕಳೆದ ಎಂಟು ವರ್ಷಗಳಲ್ಲಿ ಯಾವುದೇ ಸ್ಪಷ್ಟವಾದ ಫಲಿತಾಂಶಗಳು ಬಂದಿಲ್ಲ. ಭವಿಷ್ಯದಲ್ಲಿ ಈ ಹಾನಿ ನಡೆಯದಂತೆ ತಡೆಗಟ್ಟುವ ಅಗತ್ಯವಿದೆ. ಹಿಂದೆ ಉಂಟಾಗಿರುವ ಹಾನಿಯನ್ನು ಸರಿಪಡಿಸಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎನ್‌ಜಿಟಿ ಕಾಯಿದೆಯ ಸೆಕ್ಷನ್ 15 ರ ಅಡಿಯಲ್ಲಿ ದಂಡ

ಎನ್‌ಜಿಟಿ ಕಾಯಿದೆಯ ಸೆಕ್ಷನ್ 15 ರ ಅಡಿಯಲ್ಲಿ ದಂಡ

ಪರಿಸರದ ಮೇಲಿನ ನಿರಂತರ ಹಾನಿಯನ್ನು ನಿವಾರಿಸಲು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ನಿಯಮಗಳ ಜಾರಿಯನ್ನು ನ್ಯಾಯಮಂಡಳಿಯು ಮೇಲ್ವಿಚಾರಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನ ನಿರ್ದೇಶನ ನೀಡಿದೆ. ಈ ನಿರ್ದೇಶನಗಳನ್ನು ಅನುಸರಿಸಲು ಎನ್‌ಜಿಟಿ ಕಾಯಿದೆಯ ಸೆಕ್ಷನ್ 15 ರ ಅಡಿಯಲ್ಲಿ ದಂಡವನ್ನು ವಿಧಿಸುವುದು ಅಗತ್ಯವಾಗಿದೆ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಮಿತ್ರಾ ಹೆಚ್ ಪಟೇಲ್ vs ಯೂನಿಯನ್ ಆಫ್ ಇಂಡಿಯಾ ಮತ್ತು ಪರ್ಯಾವರನ್ ಸುರಕ್ಷಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಅನುಸಾರವಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ನಿಯಮಗಳ ಜಾರಿಯನ್ನು ನ್ಯಾಯಮಂಡಳಿ ಮೇಲ್ವಿಚಾರಣೆ ಮಾಡಬೇಕೆಂದು ಈ ನಿರ್ದೇಶನಗಳು ಒತ್ತಾಯಿಸುತ್ತದೆ.

ಚರಂಡಿ ಸೌಲಭ್ಯಗಳನ್ನು ಮತ್ತೆ ನವೀಕರಿಸಬೇಕು

ಚರಂಡಿ ಸೌಲಭ್ಯಗಳನ್ನು ಮತ್ತೆ ನವೀಕರಿಸಬೇಕು

ಒಳಚರಂಡಿ ನಿರ್ವಹಣೆಗೆ ಸಂಬಂಧಿಸಿದಂತೆ ಮತ್ತೆ ಸರಿ ಮಡಬೇಕಾದ ಕ್ರಮಗಳನ್ನು ಕ್ರಮಗಳು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರ ಪೀಠ ತಿಳಿಸಿದೆ. ಒಳಚರಂಡಿ ಸಂಸ್ಕರಣೆ ಮತ್ತು ಬಳಕೆಯ ವ್ಯವಸ್ಥೆಗಳನ್ನು ಮಾಡುವುದು, ಅಸ್ತಿತ್ವದಲ್ಲಿರುವ ಒಳಚರಂಡಿ ಸಂಸ್ಕರಣಾ ಸೌಲಭ್ಯಗಳ ವ್ಯವಸ್ಥೆಗಳು / ಕಾರ್ಯಾಚರಣೆಗಳನ್ನು ನವೀಕರಿಸುವುದು, ಅವುಗಳ ಸಂಪೂರ್ಣ ಸಾಮರ್ಥ್ಯ ಬಳಕೆಯಾಗುತ್ತಿದ್ದೇಯೇ ಎಂದು ಖಚಿತಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಮಲ, ಕೊಳಚೆನೀರು ಮತ್ತು ಕೆಸರು ನಿರ್ವಹಣೆ ಸರಿಯಾಗಿ ಮಾಡಬೇಕು ಎಂದು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರ ಪೀಠ ಗುರುವಾರ ಹೇಳಿದೆ.

CPCB ಮಾರ್ಗಸೂಚಿಗಳ ಪ್ರಕಾರ ತ್ಯಾಜ್ಯ ನಿರ್ವಹಣೆ

CPCB ಮಾರ್ಗಸೂಚಿಗಳ ಪ್ರಕಾರ ತ್ಯಾಜ್ಯ ನಿರ್ವಹಣೆ

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ, ಅಗತ್ಯವಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು. ಜೈವಿಕ-ಪರಿಹಾರ/ಜೈವಿಕ-ಗಣಿಗಾರಿಕೆ ಪ್ರಕ್ರಿಯೆಯನ್ನು CPCB ಮಾರ್ಗಸೂಚಿಗಳ ಪ್ರಕಾರ ಕಾರ್ಯಗತಗೊಳಿಸಬೇಕಾಗಿದೆ. ಬಯೋಮೈನಿಂಗ್ ಮತ್ತು ಕಾಂಪೋಸ್ಟ್ ಪ್ಲಾಂಟ್‌ಗಳಿಂದ ಬಂದ ಸಾವಯವ ತ್ಯಾಜ್ಯವನ್ನು ನಿಗದಿಪಡಿಸಿದ ನಿಯಮಗಳ ಅಡಿಯಲ್ಲಿ ಸಂಸ್ಕರಣೆ ಮಾಡುವ ಅಗತ್ಯವಿದೆ. ಅಂತಹ ಪ್ರಕ್ರಿಯೆಗಳ ಸಮಯದಲ್ಲಿ ಅದರಿಂದ ಬಂದಂತಹ ತ್ಯಾಜ್ಯ, ಇತರ ವಸ್ತುಗಳನ್ನು ಅಧಿಕೃತ ಡೀಲರ್‌ಗಳು ಅಥವಾ ಬಳಕೆದಾರರ ಮೂಲಕ ಬಳಸಬೇಕು ಎಂದು ಎನ್‌ಜಿಟಿ ತಿಳಿಸಿದೆ.

ದ್ರವ ತ್ಯಾಜ್ಯಕ್ಕೆ 2,500 ಕೋಟಿ, ಘನ ತ್ಯಾಜ್ಯಕ್ಕೆ 555 ಕೋಟಿ ದಂಡ!

ದ್ರವ ತ್ಯಾಜ್ಯಕ್ಕೆ 2,500 ಕೋಟಿ, ಘನ ತ್ಯಾಜ್ಯಕ್ಕೆ 555 ಕೋಟಿ ದಂಡ!

ದ್ರವ ತ್ಯಾಜ್ಯದ ಸಂಸ್ಕರಣೆಯಲ್ಲಿನ ಪರಿಸರ ಹಾನಿಗೆ ಸಂಬಂಧಿಸಿದಂತೆ ಸುಮಾರು 2,500 ಕೋಟಿ ರೂಪಾಯಿ ಪರಿಹಾರ ಮತ್ತು ಘನ ತ್ಯಾಜ್ಯಕ್ಕೆ ಸಂಬಂಧಿಸಿದಂತೆ 555 ಕೋಟಿ ರೂಪಾಯಿ ಪರಿಹಾರ ಎಂದು NGT ನಿರ್ಧರಿಸಿದೆ.


ಒಟ್ಟು 3,000 ಕೋಟಿ ರೂಪಾಯುಗಳನ್ನು ರಾಜಸ್ಥಾನ ಪರಿಸರ ಪರಿಹಾರವಾಗಿ ಪಾವತಿಸಬೇಕಿದೆ. ಜೊತೆಗೆ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನದಂತೆ ಕಾರ್ಯನಿರ್ವಹಿಸಲು ಮತ್ತು ಹಾನಿಯನ್ನು ಸರಿಪಡಿಸುವ ಕ್ರಮಗಳಿಗೆ ಬಳಸಿಕೊಳ್ಳಲು ಪ್ರತ್ಯೇಕ ಖಾತೆಯಲ್ಲಿ ಹಣವನ್ನು ಇಡಲು ಮಾಡಲು ರಾಜ್ಯಕ್ಕೆ ನಿರ್ದೇಶನ ನೀಡಿದೆ.


ಹಾನಿಯನ್ನು ಸರಿಪಡಿಸುವ ಯೋಜನೆಗಳನ್ನು ನಿರ್ಧಿಷ್ಟ ಕಾಲಮಿತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಹೇಳಿದ ನ್ಯಾಯಮಂಡಳಿ, ಮತ್ತೆ ಪರಿಸರ ನಿಯಮಗಳ ಉಲ್ಲಂಘನೆ ಮುಂದುವರಿದರೆ, ರಾಜ್ಯಕ್ಕೆ ಹೆಚ್ಚುವರಿ ದಂದ ವಿಧಿಸಬಹುದು ಎಂದು ಎಚ್ಚರಿಸಿದೆ.


"ಮೇಲಿನ ಎರಡೂ ಹಾನಿಗಳನ್ನು ಸರಿಪಡಿಸುವ ಯೋಜನೆಗಳನ್ನು ಎಲ್ಲಾ ಜಿಲ್ಲೆಗಳು, ನಗರಗಳು, ಪಟ್ಟಣಗಳು, ಗ್ರಾಮಗಳಲ್ಲಿ ಹೆಚ್ಚಿನ ವಿಳಂಬವಿಲ್ಲದೆ ಸಮಯ ಬದ್ಧವಾಗಿ ಏಕಕಾಲದಲ್ಲಿ ಕಾರ್ಯಗತಗೊಳಿಸಬೇಕಾಗಿದೆ. ಉಲ್ಲಂಘನೆಗಳು ಮುಂದುವರಿದರೆ, ಹೆಚ್ಚುವರಿ ಪರಿಹಾರವನ್ನು ಪಾವತಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಾಗಬಹುದು" ನ್ಯಾಯಮಂಡಳಿ ತಿಳಿಸಿದೆ.


ಕಳೆದ ವಾರ ಇದೇ ಪ್ರಕರಣದ ವಿಚಾರಣೆಯಲ್ಲಿ, ರಾಜ್ಯದಲ್ಲಿ ಘನ ಮತ್ತು ದ್ರವ ತ್ಯಾಜ್ಯದ ಅಸಮರ್ಪಕ ನಿರ್ವಹಣೆಗಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಮಂಡಳಿ ದಂಡ ವಿಧಿಸಿದೆ.

English summary
Environmental Norms Violation: The National Green Tribunal imposed environmental compensation of ₹ 3,000 crore on Rajasthan. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X