• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾರೀ ಆಘಾತ ನೀಡಿದ ಪ್ರಣಬ್ ಮುಖರ್ಜಿ ಹೇಳಿಕೆ

|
   ಕಾಂಗ್ರೆಸ್ಸಿಗೆ ಒಂದರ ಮೇಲೊಂದು ಆಘಾತ

   ನವದೆಹಲಿ, ಮೇ 22: ಕಾಂಗ್ರೆಸ್ಸಿಗೆ ಒಂದರ ಮೇಲೊಂದು ಆಘಾತ ನೀಡುತ್ತಲೇ ಇರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದೀಗ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

   ಎನ್ ಡಿಟಿವಿಯ ಸೋನಿಯಾ ಸಿಂಗ್ ಅವರು ಬರೆದ 'Defining India: Through Their Eyes' ಎಂಬ ಪುಸ್ತಕದಲ್ಲಿ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರ ಸಂದರ್ಶನ ಪ್ರಕಟವಾಗಿದ್ದು, ಈ ಸಂದರ್ಶನದಲ್ಲಿ ಅವರು, "1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಇರಬಹುದಿತ್ತು" ಎಂದಿದ್ದರು. ಅವರ ಈ ಹೇಳಿಕೆಯನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ನಾಯಕರಿಗೆ ಮುಜುಗರವನ್ನುಂಟು ಮಾಡಿದೆ.

   ಕಾಂಗ್ರೆಸ್ಸಿಗೆ ಮುಖಭಂಗ ಉಂಟುಮಾಡಿದ ಪ್ರಣಬ್ ಮುಖರ್ಜಿ ನಡೆ

   "ತುರ್ತು ಪರಿಸ್ಥಿತಿಯನ್ನು ಹೇರುವುದಕ್ಕೆ ಸಂವಿಧಾನ ಅಧಿಕಾರ ನೀಡಿದ್ದು ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾತ್ರ. ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಅವರಿಂದ ಜನರ ಹಕ್ಕನ್ನು ಕಸಿದಂತಾಗುತ್ತದೆ. 1975 ರಲ್ಲಿ ತುರ್ತು ಪರಿಸ್ಥಿತಿ ಹೇರದಂತೆ ತಡೆಯಲು ಸಾಧ್ಯವಿತ್ತು" ಎಂದು ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಹೇಳಿದ್ದರು.

   ತುರ್ತುಪರಿಸ್ಥಿತಿಯಿಂದ ದುಷ್ಪರಿಣಾಮವೇ ಹೆಚ್ಚು

   ತುರ್ತುಪರಿಸ್ಥಿತಿಯಿಂದ ದುಷ್ಪರಿಣಾಮವೇ ಹೆಚ್ಚು

   ತುರ್ತು ಪರಿಸ್ಥಿತಿಯಿಂದ ಒಳ್ಳೆಯ ಪರಿಣಾಮಕ್ಕಿಂತ ದುಷ್ಪರಿಣಾಮವಾಗಿದ್ದೇ ಹೆಚ್ಚು. ಸ್ವಾತಂತ್ರ್ಯವನ್ನುಕಸಿಯಲಾಯ್ತು. ಒಂದು ಹಂತದಲ್ಲಿ ಜನರ ಸ್ವಾತಂತ್ರ್ಯವನ್ನೇ ಕಸಿಯಲಾಯ್ತು. ತುರ್ತುಪರಿಸ್ಥಿಯ ದುಷ್ಪರಿಣಾಮಗಳನ್ನು ಮನಗಂಡು ಆಗಲೇ ಅದನ್ನು ಹೇರುವುದನ್ನು ತಡೆಯಬಹುದಿತ್ತು ಎಂದ ಪ್ರಣಬ್ ಮುಖರ್ಜಿ, ಇಂದಿರಾ ಗಾಂಧಿ ಹತ್ಯೆ ಮತ್ತು ನಂತರ ಸಿಖ್ ಹತ್ಯಾಕಾಂಡಗಳನ್ನೂ ಅವರು ವಿರೋಧಿಸಿದರು. ಭಾರತ ಹಿಂದೆಂದೂ ಅಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಅವು ಕರಾಳ ದಿನಗಳ ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು.

   ಚುನಾವಣಾ ಆಯೋಗವನ್ನು ಹೊಗಳಿದ್ದ ಮುಖರ್ಜಿ

   ಚುನಾವಣಾ ಆಯೋಗವನ್ನು ಹೊಗಳಿದ್ದ ಮುಖರ್ಜಿ

   "ನಾವು ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಬಲಾಡ್ಯಗೊಳಿಸಬೇಕಾದರೆ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಇಂದು ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತಿವೆ ಎಂದರೆ ಅದಕ್ಕೆ ಕಾರಣ ಚುನಾವಣಾ ಆಯುಕ್ತರು. ಸುಕುಮಾರ್ ಸೇನ್ ಅವರಿಂದ ಹಿಡಿದು ಪ್ರಸ್ತುತ ಚುನಾವಣಾ ಆಯುಕ್ತರವರೆಗೂ ಎಲ್ಲರೂ ತಮ್ಮ ಕೆಲಸನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಅವರನ್ನು ಟೀಕಿಸುವುದು ಸರಿಯಲ್ಲ. ಈ ಚುನಾವಣೆಯೂ ಪರಿಪೂರ್ಣವಾಗಿದೆ" ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು. ಈ ಮೂಲಕ ಇವಿಎಂ ದೋಷದ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಆಘಾತ ನೀಡಿದ್ದರು.

   ಇವಿಎಂ ಜೊತೆ ಶೇ.100 ವಿವಿಪ್ಯಾಟ್ ತಾಳೆ, ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

   RSS ಕಾರ್ಯಕ್ರಮದಲ್ಲಿ ಪ್ರಣಬ್

   RSS ಕಾರ್ಯಕ್ರಮದಲ್ಲಿ ಪ್ರಣಬ್

   2018 ರ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿ, ಕಾಂಗ್ರೆಸ್ಸಿಗರು ಹುಬ್ಬೇರಿಸುವಂತೆ ಮಾಡಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬಂದ ಪ್ರಣಬ್ ಅವರ ನಡೆಯನ್ನು ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ ಅವರು ಸಮಕಾಲಿನ ಇತಿಹಾಸದಲ್ಲೇ ಮಹತ್ವದ ನಡೆ ಎದು ಕರೆದಿದ್ದರು.

   RSS ಕಾರ್ಯಕ್ರಮದಲ್ಲಿ ಪ್ರಣಬ್

   RSS ಕಾರ್ಯಕ್ರಮದಲ್ಲಿ ಪ್ರಣಬ್

   2018 ರ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿ, ಕಾಂಗ್ರೆಸ್ಸಿಗರು ಹುಬ್ಬೇರಿಸುವಂತೆ ಮಾಡಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬಂದ ಪ್ರಣಬ್ ಅವರ ನಡೆಯನ್ನು ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ ಅವರು ಸಮಕಾಲಿನ ಇತಿಹಾಸದಲ್ಲೇ ಮಹತ್ವದ ನಡೆ ಎಂದು ಕರೆದಿದ್ದರು.

   ಪ್ರಣವ್ ಭೇಟಿ ಬಳಿಕ ಆರ್‌ಎಸ್‌ಎಸ್ ಸೇರುವವರ ಸಂಖ್ಯೆ 5 ಪಟ್ಟು ಹೆಚ್ಚಳ

   English summary
   Former president Pranab Mukherjee said, the imposition of Emergency in 1975 could have been avoided as it curbed the rights of people. He said this in an interview published in a new book titled ‘Defining India: Through Their Eyes' authored by NDTV's Sonia Singh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more