ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ಜೂನ್ 10ರಂದು ಚುನಾವಣೆ: ಅವಧಿ ಪೂರ್ಣಗೊಳಿಸುವ ಪ್ರಮುಖ ನಾಯಕರು ಯಾರು?

|
Google Oneindia Kannada News

ನವದೆಹಲಿ ಮೇ 12: ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಜೂನ್ ಮತ್ತು ಆಗಸ್ಟ್ ನಡುವೆ ತೆರವಾಗಲಿರುವ 57 ಸ್ಥಾನಗಳಿಗೆ ಇದೇ ಜೂನ್ 10 ರಂದು ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ದೇಶದ 15 ರಾಜ್ಯಗಳಲ್ಲಿ ಖಾಲಿ ಇರುವ ಈ ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.

ಚುನಾವಣಾ ಆಯೋಗವು 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಿದೆ. ಜೂನ್ 10 ರಂದು ಚುನಾವಣೆ ನಡೆಯಲಿದೆ. 15 ರಾಜ್ಯಗಳ 57 ಸದಸ್ಯರು ಜೂನ್ ಮತ್ತು ಆಗಸ್ಟ್ ನಡುವೆ ನಿವೃತ್ತರಾಗುತ್ತಿರುವ ಕಾರಣ ಚುನಾವಣೆ ಅಗತ್ಯವಾಗಿದೆ. ಇವುಗಳಲ್ಲಿ ಉತ್ತರ ಪ್ರದೇಶದಿಂದ 11, ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ 6 ಸ್ಥಾನಗಳು ಬಿಹಾರದಿಂದ 5 ಮತ್ತು ರಾಜಸ್ಥಾನ ಮತ್ತು ಕರ್ನಾಟಕದಿಂದ ತಲಾ 4 ಸ್ಥಾನಗಳು ಸೇರಿವೆ. ನಿರ್ಮಲಾ ಸೀತಾರಾಮನ್ (ಬಿಜೆಪಿ) ಮತ್ತು ಪಿ ಚಿದಂಬರಂ (ಕಾಂಗ್ರೆಸ್) ಅವರಿಂದ ತೆರವಾದ ಕರ್ನಾಟಕ ಮತ್ತು ಮಹಾರಾಷ್ಟ್ರ ಸ್ಥಾನಗಳಲ್ಲಿಯೂ ಮತದಾನ ನಡೆಯಲಿದೆ. ಮೇ 24 ರಂದು 57 ಸ್ಥಾನಗಳಿಗೆ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಅಭ್ಯರ್ಥಿಗಳು ಮೇ 31 ರವರೆಗೆ ನೋಂದಾಯಿಸಿಕೊಳ್ಳಬಹುದು.

ಭಾರತದಲ್ಲಿ ರಾಷ್ಟ್ರಪತಿ ಚುನಾವಣೆಗೆ ಮುನ್ನ ನಡೆಯಲಿರುವ ರಾಜ್ಯಸಭೆಗೆ ಈ ಚುನಾವಣೆಗಳು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ, ಏಕೆಂದರೆ ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಪ್ರಸ್ತುತ ಮೇಲ್ಮನೆಯಲ್ಲಿ 95 ಸ್ಥಾನಗಳೊಂದಿಗೆ ಅಗ್ರಸ್ಥಾನದಲ್ಲಿದೆ ಮತ್ತು ಚುನಾವಣೆಯ ನಂತರ ಅದು ಮತ್ತೆ 100ರ ಗಡಿ ದಾಟಬಹುದು. ಇನ್ನು ಸದ್ಯ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸಂಸದರ ಏಳು ಸ್ಥಾನಗಳೂ ಖಾಲಿ ಇವೆ.

Elections to 57 Rajya Sabha seats on June 10

ನಾಮಪತ್ರಗಳ ಪರಿಶೀಲನೆಯ ದಿನಾಂಕವನ್ನು ಜೂನ್ 1 ಎಂದು ನಿಗದಿಪಡಿಸಲಾಗಿದೆ. ಅದೇ ವೇಳೆ ನಾಮಪತ್ರ ಹಿಂಪಡೆಯಲು ಜೂನ್ 3 ಕೊನೆಯ ದಿನವಾಗಿದೆ. ಎಲ್ಲಾ 57 ಸ್ಥಾನಗಳಿಗೆ ಜೂನ್ 10 ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ನಂತರ ಜೂನ್ 10ರಂದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

Elections to 57 Rajya Sabha seats on June 10

ಅವಧಿ ಪೂರ್ಣಗೊಳಿಸುತ್ತಿರುವ ನಿರ್ಮಲಾ ಸೀತಾರಾಮನ್ ಮತ್ತು ಪಿ ಚಿದಂಬರಂ

ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಿರುವ 57 ಸದಸ್ಯರಲ್ಲಿ ಮುಕ್ತಾರ್ ಅಬ್ಬಾಸ್ ನಖ್ವಿ, ಗೋಪಾಲ್ ನಾರಾಯಣ್ ಸಿಂಗ್, ಮಿಸಾ ಭಾರತಿ, ಶರದ್ ಯಾದವ್ (ಸಾವಿನ ನಂತರ ಖಾಲಿ), ರೇವತಿ ರಮಣ್ ಸಿಂಗ್, ಸಸುಖರಾಮ್ ಸಿಂಗ್, ಕಪಿಲ್ ಸಿಬಲ್, ಸತೀಶ್ ಚಂದ್ರ, ನಿರ್ಮಲಾ ಸೀತಾರಾಮನ್ ಮತ್ತು ಪಿ ಚಿದಂಬರಂ ಪ್ರಮುಖ ನಾಯಕರು ಸೇರಿದ್ದಾರೆ. ಮಿಶ್ರಾ, ಸಂಜಯ್ ಸೇಠ್, ಸುರೇಂದ್ರ ಸಿಂಗ್ ನಗರ, ಅಂಬಿಕಾ ಸೋನಿ, ಪ್ರಫುಲ್ ಪಟೇಲ್, ಸಂಜಯ್ ರಾವುತ್, ಪಿಯೂಷ್ ಗೋಯಲ್, ಜೈರಾಮ್ ರಮೇಶ್, ಆಸ್ಕರ್ ಫರ್ನಾಂಡಿಸ್ (ಸಾವಿನ ನಂತರ ಖಾಲಿ) ಹೆಸರುಗಳು ಪ್ರಮುಖವಾಗಿವೆ.

English summary
Elections for 52 Rajya Sabha seats spread across 15 states will take place on June 10, an Election Commission official has said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X