ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿ ವಿಮಾನಯಾನ ಖರ್ಚು ವೆಚ್ಚ ಬಹಿರಂಗ

|
Google Oneindia Kannada News

ನವದೆಹಲಿ, ಏಪ್ರಿಲ್ 07: ಲೋಕಸಭೆ ಚುನಾವಣೆ 2019ರ ಹೊಸ್ತಿಲಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಯಾನದ ಖರ್ಚು ವೆಚ್ಚ ಅಂಕಿ ಅಂಶವನ್ನು ಭಾನುವಾರ (ಏಪ್ರಿಲ್ 07) ದಂದು ಏರ್ ಇಂಡಿಯಾ ಸಂಸ್ಥೆ ಪ್ರಕಟಿಸಿದೆ. ಪ್ರಧಾನಿ ಮೋದಿ ಅವರ ಅಧಿಕೃತ ವಿದೇಶಿ ಪ್ರವಾಸಗಳ ವೆಚ್ಚ 443.4 ಕೋಟಿ ರು ಆಗಿದೆ ಎಂದು ಮಾಹಿತಿ ಸಿಕ್ಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ನೀಡಿರುವ ಮಾಹಿತಿಯಂತೆ ಐದು ಸಾಗರೋತ್ತರ ದೇಶಗಳ ಪ್ರವಾಸಗಳ ವೆಚ್ಚದ ವಿವರ ನೀಡಿಲ್ಲ. ಪ್ರಧಾನಿ ಅವರು ಕಳೆದ ಐದು ವರ್ಷಗಳಲ್ಲಿ 44 ಸಾಗರೋತ್ತರ ದೇಶಗಳಿಗೆ ಭೇಟಿ ನೀಡಿದ್ದಾರೆ. ಎಲ್ಲಾ ವೆಚ್ಚವನ್ನು ಏರ್ ಇಂಡಿಯಾಕ್ಕೆ ಭರಿಸಲಾಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

 44 ದೇಶ ಸುತ್ತಿ ಬಂದಿರುವ ಪ್ರಧಾನಿ ಮೋದಿ, ಟ್ರಾವೆಲ್ ಚಾರ್ಟ್! 44 ದೇಶ ಸುತ್ತಿ ಬಂದಿರುವ ಪ್ರಧಾನಿ ಮೋದಿ, ಟ್ರಾವೆಲ್ ಚಾರ್ಟ್!

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2009 ರಿಂದ 2014ರ ಅವಧಿಯಲ್ಲಿ ಸುಮಾರು 493.2 ಕೋಟಿ ರು ವೆಚ್ಚದಲ್ಲಿ 38 ವಿದೇಶಿ ಪ್ರವಾಸ ಮಾಡಿದ್ದರು. ಡಾ. ಮನಮೋಹನ್ ಸಿಂಗ್ ಅವರು ಏರ್ ಇಂಡಿಯಾ ವಿಮಾನಗಳನ್ನು ಮಾತ್ರ ಬಳಸಿದ್ದಾರೆ.

Elections 2019 : Increased numbers of trips, cheaper flights mark PM Modi’s travel bills

ಮೋದಿ ಅವರು ಏರ್ ಇಂಡಿಯಾವಲ್ಲದೆ ಭಾರತೀಯ ವಾಯುಪಡೆಯ ವ್ಯಾಪಾರಿ ಜೆಟ್ ಬಳಕೆ ಮಾಡಿದ್ದಾರೆ. ನೇಪಾಳ, ಬಾಂಗ್ಲಾದೇಶ, ಇರಾನ್ ಹಾಗೂ ಸಿಂಗಪುರಕ್ಕೆ ಬೋಯಿಂಗ್ 737ರಲ್ಲಿ ಮೋದಿ ಪ್ರಯಾಣಿಸಿದ್ದರು. ಇಲ್ಲಿ ನೀಡಿರುವ ಅಂಕಿ ಅಂಶಗಳು ವಿಮಾನಯಾನದ ವೆಚ್ಚ ಮಾತ್ರ, ವಿದೇಶಿ ಪ್ರಯಾಣದ ಒಟ್ಟಾರೆ ವೆಚ್ಚವಲ್ಲ ಎಂದು ಪ್ರಧಾನಿ ಸಚಿವಾಲಯ ಸ್ಪಷ್ಟಪಡಿಸಿದೆ.

English summary
Air India has so far billed Rs 443.4 crore for Prime Minister Narendra Modi’s official foreign visits, the frequency of which are seen as a reflection of India’s growing engagement with the rest of the world. The airline is yet to charge for the expenses incurred on five more overseas trips made by the PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X