ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಗಾಲಿ ರೆಡ್ಡಿಯಿಂದ ಹೊಸ ರಾಜಕೀಯ ತಂತ್ರ

By ನಮ್ಮ ಪ್ರತಿನಿಧಿ
|
Google Oneindia Kannada News

Recommended Video

ಗಾಲಿ ಜನಾರ್ಧನ ರೆಡ್ಡಿಯಿಂದ ನವ ದೆಹಲಿಯಲ್ಲಿ ರಾಜಕೀಯ ತಂತ್ರ | Oneindia Kannada

ನವದೆಹಲಿ, ಏಪ್ರಿಲ್ 10: ಮಾಜಿ ಸಚಿವ, ಬಳ್ಳಾರಿಯ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಹಲವು ಕುತೂಹಲಕ್ಕೆ ಎಡೆ ಮಾಡಿದೆ.

ಕಳಂಕಿತರಿಗೆ ಟಿಕೆಟ್ ಇಲ್ಲ ಎನ್ನುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗಾಲಿ ರೆಡ್ಡಿ ಗ್ಯಾಂಗ್ ದೂರವಿರಿಸಲು ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಗಾಲಿ ರೆಡ್ಡಿ ಅತ್ಯಾಪ್ತ ಬಿ ಶ್ರೀರಾಮುಲು ಅವರಿಗೆ ನಿಯಮ ಮೀರಿ ಟಿಕೆಟ್ ನೀಡಲಾಗಿದೆ. ಅದರಲ್ಲೂ ಬಳ್ಳಾರಿ ಬಿಟ್ಟು ಮೊಳಕಾಲ್ಮೂರಿನಲ್ಲಿ ಸ್ಪರ್ಧಿಸಲು ಸೂಚಿಸಲಾಗಿದೆ.

ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಓಲೈಕೆ ಬಿಜೆಪಿಗೆ ಅನಿವಾರ್ಯವೇ?!ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಓಲೈಕೆ ಬಿಜೆಪಿಗೆ ಅನಿವಾರ್ಯವೇ?!

ಇತ್ತ ಗಾಲಿ ರೆಡ್ಡಿ ಅವರ ಮುಂದಿನ ನಡೆ ಏನು? ಎಂಬುದರ ಬಗ್ಗೆ ಎಲ್ಲರೂ ಕುತೂಹಲದಿಂದ ನೋಡುವಾಗ, ಜನಾರ್ದನ ರೆಡ್ಡಿ ಅವರು ದೆಹಲಿಯಲ್ಲಿ ಕಳೆದೆರಡು ದಿನಗಳಿಂದ ಕಾಣಿಸಿಕೊಂಡಿದ್ದಾರೆ. ಗಾಲಿ ರೆಡ್ಡಿ ಅವರು ಬಿಜೆಪಿ ತೊರೆಯುತ್ತಿದ್ದಾರೆಯೆ? ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆಯೇ? ತಟಸ್ಥರಾಗಿ ಉಳಿಯುತ್ತಾರೆಯೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಮುಂದಿದೆ..

Elections 2018 : Know Why Gali Janardhan Reddy is in Delhi

ಜನಾರ್ದನ ರೆಡ್ಡಿ ಜತೆ ಸೇರಿ ಬಿಜೆಪಿ ಹೆಣೆದಿರುವ ತ್ರಿಶೂಲ ವ್ಯೂಹ ಏನದು?ಜನಾರ್ದನ ರೆಡ್ಡಿ ಜತೆ ಸೇರಿ ಬಿಜೆಪಿ ಹೆಣೆದಿರುವ ತ್ರಿಶೂಲ ವ್ಯೂಹ ಏನದು?

ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆಯೆ?

ಇಲ್ಲ. ದೆಹಲಿಯ ಸ್ಟಾರ್ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಬರುವಾಗ ಎದುರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಿಕ್ಕಿದ್ದಾರೆ. ಸಂತೋಷ್ ಲಾಡ್ ಕೂಡಾ ತಮ್ಮ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಸಲ್ಲಿಸಿ, ಶುಭ ಸುದ್ದಿ ನಿರೀಕ್ಷೆಯಲ್ಲಿದ್ದಾರೆ.

ರಾಜಕೀಯದಲ್ಲಿ ಇವೆಲ್ಲ ಮಾಮೂಲು ಎಂದ ಜನಾರ್ದನ ರೆಡ್ಡಿರಾಜಕೀಯದಲ್ಲಿ ಇವೆಲ್ಲ ಮಾಮೂಲು ಎಂದ ಜನಾರ್ದನ ರೆಡ್ಡಿ

ಸಂತೋಷ್ ಅವರ ಜತೆ ಆಕಸ್ಮಿಕ ಭೇಟಿಯಾಗಿದ್ದು, ಕೈ ಕುಲುಕಿ, ಅರೆಕ್ಷಣ ಅಲ್ಲೇ ನಿಂತು ಮಾತನಾಡಿ, ಮುಂದೆ ತೆರಳಿದ್ದಾರೆ. ಆದರೆ, ಇದನ್ನು ಮುಂದಿಟ್ಟುಕೊಂಡು ಕೆಲವರು, ರೆಡ್ಡಿ ಅವರು ಕಾಂಗ್ರೆಸ್ ಸೇರಲು ಲಾಡ್ ಜತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ರೆಡ್ಡಿ ಆಪ್ತರು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಗಾಲಿ ರೆಡ್ಡಿ ಮುಂದಿನ ನಡೆಯೇನು?

ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಹೈಕಮಾಂಡ್ ಜತೆ ಭೇಟಿಗಾಗಿ ಗಾಲಿ ರೆಡ್ಡಿ ಯತ್ನಿಸಿದ್ದಾರೆ. ಗಾಲಿ ರೆಡ್ಡಿ ಅವರನ್ನು ಸದ್ಯ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳಲು ಬಿಜೆಪಿ ಯೋಚನೆ ಹಾಕಿಕೊಂಡಿದೆ ಎನ್ನಲಾಗಿದೆ. ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ರೆಡ್ಡಿ ಅವರ ಪ್ರಭಾವ ಇನ್ನೂ ಇದೆ ಎಂಬುದು ಸುಳ್ಳಲ್ಲ. ಆದರೆ, ಕಾಂಗ್ರೆಸ್ ಜತೆ ಮಾತುಕತೆಗೆ ರೆಡ್ಡಿ ಅವರು ಮುಂದಾಗಿರುವುದು ಏಕೆ? ಉತ್ತರ ಇನ್ನೂ ಸ್ಪಷ್ಟವಿಲ್ಲ.

English summary
Former minister and mining baron from Bellary, G Janardhan Reddy is residing now in New Delhi from past two days and reportedly seeking appointment with both BJP and Congress high command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X