• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣಾ ಸಿಬ್ಬಂದಿ ಕೂಡ ಮುಂಚೂಣಿ ಕಾರ್ಯಕರ್ತರು, ಶೀಘ್ರ ಕೊರೊನಾ ಲಸಿಕೆ ವಿತರಣೆ

|

ನವದೆಹಲಿ,ಫೆಬ್ರವರಿ 26: ಚುನಾವಣಾ ಅಧಿಕಾರಿಗಳು ಕೂಡ ಮುಂಚೂಣಿ ಕಾರ್ಯಕರ್ತರು, ಹೀಗಾಗಿ ಅವರಿಗೂ ಶೀಘ್ರ ಕೊರೊನಾ ಲಸಿಕೆ ನೀಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

ಭಾರತೀಯ ಚುನಾವಣಾ ಆಯೋಗವು ಇಂದು ತಮಿಳುನಾಡು,ಪುದುಚೇರಿ,ಅಸ್ಸಾಂ,ಪಶ್ಚಿಮ ಬಂಗಾಳ ಹಾಗೂ ಕೇರಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದೆ.

ಕರ್ನಾಟಕದ 4 ಕ್ಷೇತ್ರಗಳ ಉಪ ಚುನಾವಣೆ ಘೋಷಿಸಿದ ಆಯೋಗ

ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮಾತನಾಡಿ, ಚುನಾವಣೆ ಆರಂಭಕ್ಕೂ ಮುನ್ನ ಚುನಾವಣಾ ಅಧಿಕಾರಿಗಳಿಗೆ ಲಸಿಕೆ ವಿತರಣೆಯಾಗಬೇಕು ಅವರೂ ಕೂಡ ಮುಂಚೂಣಿ ಕಾರ್ಯಕರ್ತರು ಎಂದು ಹೇಳಿದ್ದಾರೆ.

ಕೊರೊನಾದಿಂದಾಗಿ ಮತದಾನವನ್ನು ಒಂದು ಗಂಟೆಗಳ ಕಾಲ ವಿಸ್ತರಿಸಲಾಗಿದೆ.

*ಅಭ್ಯರ್ಥಿ ಜತೆ ಇಬ್ಬರಿಗೆ ಮಾತ್ರ ತೆರಳಲು ಅವಕಾಶ

*ಮನೆ,ಮನೆ ಪ್ರಚಾರಕ್ಕೆ ಕೇವಲ ಐವರಿಗೆ ಮಾತ್ರ ಅವಕಾಶ

*ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ

*ನಾಮಪತ್ರ ಸಲ್ಲಿಸಲು ಎರಡು ವಾಹನಗಳಲ್ಲಿ ಮಾತ್ರ ಬರಬೇಕು

*ಮತದಾರರ ಭದ್ರತೆಗೆ ಆದ್ಯತೆ

*ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಎಸ್‌ಒಪಿ

*ಮತದಾನ ಅವಧಿ ಒಂದು ಗಂಟೆ ವಿಸ್ತರಣೆ

*ಶೇ.50ರಷ್ಟು ಮತಗಟ್ಟೆಗಳಲ್ಲಿ ವೋಟಿಂಗ್ ದೃಶ್ಯ ನೇರಪ್ರಸಾರ

* ಚುನಾವಣಾಧಿಕಾರಿ ಸಮ್ಮುಖದಲ್ಲೇ ನಾಮಪತ್ರ ಸಲ್ಲಿಸಬೇಕು

ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ, ತಮಿಳುನಾಡಿನಲ್ಲಿ 234 ಸ್ಥಾನಗಳಿಗೆ, ಕೇರಳದಲ್ಲಿ 140 ಸ್ಥಾನಗಳಿಗೆ, ಅಸ್ಸಾಂನಲ್ಲಿ 126 ಸ್ಥಾನಗಳಿಗೆ, ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ. ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ.

English summary
Election officials will be eligible for COVID-19 vaccination, the Election Commission said on Friday as it announced dates for assembly polls in Tamil Nadu, Kerala, West Bengal, Assam and Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X