ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ಧ್ವನಿ ಎತ್ತಿದ್ದ ಚುನಾವಣಾ ಆಯುಕ್ತ ಅಶೋಕ್ ಪತ್ನಿಗೆ ಐಟಿ ನೋಟಿಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಆದಾಯ ತೆರಿಗೆ ಫೈಲಿಂಗ್ ನಲ್ಲಿ ಸಮಸ್ಯೆಗಳಿವೆ ಎಂಬ ಕಾರಣಕ್ಕೆ ಚುನಾವಣಾ ಆಯುಕ್ತ ಅಶೋಕ್ ಲವಾಸ ಹೆಂಡತಿ ನಾವೆಲ್ ಲವಾಸ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾನು ಕಟ್ಟಬೇಕಿರುವ ಎಲ್ಲ ತೆರಿಗೆ ಬಾಕಿ ಪಾವತಿಸಿದ್ದೇನೆ. ಪಿಂಚಣಿ ಮೂಲಕ ಗಳಿಸಿರುವ ಎಲ್ಲ ಆದಾಯದ ಮಾಹಿತಿ ನೀಡಿದ್ದೇನೆ. ಜತೆಗೆ ಆದಾಯ ತೆರಿಗೆ ಕಾನೂನಿನ ಪ್ರಕಾರ ಇತರ ಆದಾಯ ಮೂಲಗಳನ್ನೂ ತಿಳಿಸಿದ್ದೇನೆ. ಇನ್ನು ಐ. ಟಿ. ಇಲಾಖೆಗೆ ಅಗತ್ಯ ಸಹಕಾರ ನೀಡುತ್ತಿರುವುದಾಗಿ ನಾವೆಲ್ ಲವಾಸ ತಿಳಿಸಿದ್ದಾರೆ.

ಮೋದಿ ಮತ್ತೆ ನಿರಾಳ: ಎರಡು ಪ್ರಕರಣಗಳಲ್ಲಿ ಕ್ಲೀನ್ ಚಿಟ್ಮೋದಿ ಮತ್ತೆ ನಿರಾಳ: ಎರಡು ಪ್ರಕರಣಗಳಲ್ಲಿ ಕ್ಲೀನ್ ಚಿಟ್

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಾಲ್ಲಿ ಕ್ಲಾಸ್ ಒನ್ ಅಧಿಕಾರಿಯಾಗಿ ಇಪ್ಪತ್ತೆಂಟು ವರ್ಷ ಕಾಲ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ವಿವಿಧ ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇನೆ. ಕೆಲವು ಕಂಪೆನಿಗಳಿಗೆ ಸ್ವತಂತ್ರ ನಿರ್ದೇಶಕಳಾಗಿದ್ದೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Election Commissioner Ashok Lavasas Wife Received Income Tax Notice

ಆಗಸ್ಟ್ ಐದನೇ ತಾರೀಕಿನಿಂದ ಬಂದ ಎಲ್ಲ ಐ. ಟಿ. ನೋಟಿಸ್ ಗಳಿಗೂ ಉತ್ತರಿಸಿದ್ದೇನೆ. ಇನ್ನು ಇಲಾಖೆಯಿಂದ ಸದ್ಯಕ್ಕೆ ನಡೆಯುತ್ತಿರುವ ಪ್ರಕ್ರಿಯೆಗಳಿಗೂ ಸಹಕಾರ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ನೋಟಿಸ್ ಗೆ ಇನ್ನೂ ಪ್ರತಿಕ್ರಿಯೆ ಬರಬೇಕಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ವೇಳೆ ಪ್ರಧಾನಮಂತ್ರಿಯಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂಬ ಆರೋಪ ಬಂದಾಗ ಆಯೋಗದ ಸದಸ್ಯರ ಪೈಕಿ ಭಿನ್ನ ಧ್ವನಿ ಎತ್ತಿದವರು ಲವಾಸ ಮಾತ್ರ. ಆರು ಸನ್ನಿವೇಶದಲ್ಲಿ ಮೋದಿ ವಿರುದ್ಧ ಆಕ್ಷೇಪ ಬಂದಿತ್ತು. ಅದಕ್ಕೆ ಚುನಾವಣೆ ಆಯೋಗ ಕ್ಲೀನ್ ಚಿಟ್ ನೀಡಿತ್ತು.

ಆ ನಂತರ ಲವಾಸ ಅವರು ಸಭೆಗಳಿಗೆ ಭಾಗವಹಿಸುವುದನ್ನು ನಿಲ್ಲಿಸಿದ್ದರು. "ಸದ್ಯದ ಸನ್ನಿವೇಶದಲ್ಲಿ ಇಂಥ ಕಲಾಪಗಳಿಂದ ದೂರ ಉಳಿಯುವುದೇ ಉತ್ತಮ" ಎಂದು ಮುಖ್ಯ ಚುನಾವಣೆ ಆಯುಕ್ತ ಸುನೀಲ್ ಅರೋರಾಗೆ ಪತ್ರ ಬರೆದಿದ್ದರು.

English summary
Novel Lavasa, wife of election commissioner Ashok Lavasa received Income tax notice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X