• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇವಿಎಂ ಸಂಬಂಧಿ ದೂರುಗಳಿಗೆ 24 ಗಂಟೆ ಸಹಾಯವಾಣಿ

|

ನವದೆಹಲಿ, ಮೇ 22: ಇವಿಎಂ ಬಗ್ಗೆ ವಿರೋಧ ಪಕ್ಷಗಳ ದೂರು ಹೆಚ್ಚಾದ ಬೆನ್ನಲ್ಲೆ ಚುನಾವಣಾ ಆಯೋಗವು ಇವಿಎಂಗೆ ಸಂಬಂಧಿಸಿದ ದೂರುಗಳಿಗೆ ಪರಿಹಾರ ನೀಡಲೆಂದೇ ಸಹಾಯವಾಣಿಯನ್ನು ತೆರೆದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸಹಾಯವಾಣಿಯು ಇಂದು ಮಧ್ಯಾಹ್ನ 22 ರಿಂದಲೇ ಕಾರ್ಯವನ್ನು ಆರಂಭಿಸಿದ್ದು, ಉಚಿತ ಸಂಖ್ಯೆಗೆ ಕರೆ ಮಾಡುವ ಮೂಲಕ ಇವಿಎಂ ಬಗ್ಗೆ ದೂರುಗಳನ್ನು ನೀಡಬಹುದಾಗಿದೆ.

ಇವಿಎಂ-ವಿವಿಪ್ಯಾಟ್ ತಾಳೆ: ವಿಪಕ್ಷಗಳ ಮನವಿ ತಿರಸ್ಕರಿಸಿದ EC

ಇವಿಎಂ ಬಗ್ಗೆ ಪದೇ-ಪದೇ ದೂರುಗಳು ಕೇಳಿಬರುತ್ತಿದ್ದ ಕಾರಣ, ಚುನಾವಣಾ ಆಯೋಗವು ಈ ನಿರ್ಧಾರಕ್ಕೆ ಬಂದಿವೆ. ಅದರಲ್ಲಿಯೂ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಇವಿಎಂ ಸಾಗಾಣೆ ಬಗ್ಗೆ ವಿಡಿಯೋಗಳು ಹರಿದಾಡಿದ ನಂತರ ಚುನಾವಣೆ ಆಯೋಗದ ಮೇಲೆ ಒತ್ತಡ ಹೆಚ್ಚಾಗಿತ್ತು.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಗಾಜಿಯಾಪುರದಲ್ಲಿ ಎಸ್‌ಪಿ ಅಭ್ಯರ್ಥಿಯೊಬ್ಬ ಇವಿಎಂ ಸ್ಟ್ರಾಂಗ್ ರೂಮ್‌ಮುಂದೆ ನಿನ್ನೆಯಷ್ಟೆ ಧರಣಿ ಕೂತು ಸುದ್ದಿಯಾಗಿದ್ದರು. ಕೊನೆಗೆ ಚುನಾವಣಾಧಿಕಾರಿಯು ಅಭ್ಯರ್ಥಿಯ ಕಡೆಯವರು ಸ್ಟ್ರಾಂಗ್ ರೂಮ್‌ ಮುಂದೆ ಕಾವಲು ಕೂರಲು ಅನುಮತಿ ಕೊಟ್ಟಿದೆ.

English summary
Election commission set up 24 hours control room for EVM related complaints.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X