ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಭಾಷಣಕ್ಕೆ ಮೋದಿ ಅನುಮತಿ ಪಡೆದಿರಲಿಲ್ಲ: ಚುನಾವಣಾ ಆಯೋಗ

|
Google Oneindia Kannada News

ನವದೆಹಲಿ, ಮಾರ್ಚ್ 29: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಖಲಾಗಿರುವ ನೀತಿ ಸಂಹಿತೆ ಉಲ್ಲಂಘನೆ ದೂರಿನ ಪ್ರಕರಣದ ಬಗ್ಗೆ ದೂರದರ್ಶನ ಮತ್ತು ಆಕಾಶವಾಣಿಯಿಂದ ಪಡೆದಿರುವ ಪ್ರತಿಕ್ರಿಯೆಯನ್ನು ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತಿದ್ದು, ಸಂಜೆ ವೇಳೆಗೆ ನಿರ್ಧಾರ ಕೈಗೊಳ್ಳಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಡಿಆರ್‌ಡಿಒ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದ ಉಪಗ್ರಹ ನಿಗ್ರಹ ಕ್ಷಿಪಣಿ ತಂತ್ರಜ್ಞಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ ನೇರ ಪ್ರಸಾರದ ಭಾಷಣದಲ್ಲಿ ಮಾಹಿತಿ ನೀಡಿದ್ದರು. ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ಅವರು ಹತ್ತು ನಿಮಿಷದ ಭಾಷಣದಲ್ಲಿ ವಿವರಣೆ ನೀಡಿದ್ದರು.

 ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಮೋದಿ? ಇಲ್ಲಿದೆ ಉತ್ತರ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಮೋದಿ? ಇಲ್ಲಿದೆ ಉತ್ತರ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪ್ರಧಾನಿ ಹೀಗೆ ಭಾಷಣ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಪ್ರತಿ ಪಕ್ಷಗಳು ಆರೋಪಿಸಿದ್ದವು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ದೂರಿನ ಅನ್ವಯ ಚುನಾವಣಾ ಆಯೋಗದ ಅಧಿಕಾರಿಗಳ ಸಮಿತಿ ಎರಡು ಬಾರಿ ಸಭೆ ನಡೆಸಿದೆ. ಶುಕ್ರವಾರ ಸಂಜೆ ಇದು ತನ್ನ ಅಂತಿಮ ವರದಿ ಸಿದ್ಧಪಡಿಸಲಿದೆ.

election commission prime minister narendra modi model code of conduct mission shakti speech

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೇನಾ, ಪ್ರಧಾನಿಯವರ ಭಾಷಣವನ್ನು ಪ್ರಸಾರ ಮಾಡಲು ಪ್ರಧಾನ ಮಂತ್ರಿ ಕಾರ್ಯಾಲಯವು ತಮಗೆ ಮಾಹಿತಿ ನೀಡಿರಲಿಲ್ಲ, ಅದಕ್ಕೆ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ತಿಳಿಸಿದ್ದರು. ಈ ಘಟನೆ ವಿವಾದ ಕೆರಳಿಸಿರುವುದರಿಂದ ಪ್ರಕರಣವನ್ನು ಪರಿಶೀಲಿಸಲು ಚುನಾವಣಾ ಆಯೋಗವು ಸಮಿತಿಯೊಂದನ್ನು ರಚಿಸಿತ್ತು.

'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್ 'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್

ಬಳಿಕ, ಚುನಾವಣಾ ಆಯೋಗದ ಸಮಿತಿಯು ದೂರದರ್ಶನ ಮತ್ತು ಆಕಾಶವಾಣಿಗಳಿಗೆ ಪತ್ರ ಬರೆದು ಭಾಷಣ ಪ್ರಸಾರ ಮೂಲದ ಬಗ್ಗೆ ಪ್ರಶ್ನಿಸಿತ್ತು. ಸರ್ಕಾರಿ ಸ್ವಾಮ್ಯದ ಪ್ರಸಾರಕರು ಖಾಸಗಿ ಅಂತರ್ಜಾಲ ವಿಡಿಯೋ ಪೋರ್ಟಲ್ ಯೂಟ್ಯೂಬ್‌ ಮೂಲಕ ನೇರಪ್ರಸಾರವನ್ನು ಪಡೆದುಕೊಂಡಿದ್ದಾಗಿ ಮಾಹಿತಿ ನೀಡಿದ್ದರು.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಪ್ರಧಾನಿ ನರೇಂದ್ರ ಮೋದಿ ಅವರು ಮಿಶನ್ ಶಕ್ತಿಯ ಕುರಿತಾಗಿ ಮಾಡಿದ ಭಾಷಣವು ದೇಶದ ರಕ್ಷಣಾ ಇಲಾಖೆ ಮತ್ತು ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆಯಲ್ಲಿ ರಾಜಕೀಯ ಲಾಭವನ್ನು ಪಡೆದುಕೊಳ್ಳುವ ಗುರಿ ಹೊಂದಿತ್ತು. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು.

English summary
A Committee of Election Commission will decide the case violation of model code of conduct by Prime Minister Narendra Modi while addressing the nation on Mission Shakti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X