ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಸೇನೆ' ಹೇಳಿಕೆ ಯೋಗಿ ಆದಿತ್ಯನಾಥಗೆ ಆಯೋಗ ನೊಟೀಸ್

|
Google Oneindia Kannada News

ನವದೆಹಲಿ, ಏಪ್ರಿಲ್ 04: ಭಾರತೀಯ ಸೇನೆಯನ್ನು 'ಮೋದಿ ಸೇನೆ' ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 05ರ ಸಂಜೆ ಐದು ಗಂಟೆ ಒಳಗೆ ನೊಟೀಸ್‌ಗೆ ಉತ್ತರಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಯೋಗಿ ಅವರ ಉತ್ತರವು ಸಮಂಜಸವಾಗಿಲ್ಲದಿದ್ದರೆ ಆಯೋಗವು ಮುಂದಿನ ಕ್ರಮ ಜರುಗಿಸಲಿದೆ.

ಯೋಗಿ ಮೇಲೆ ಚುನಾವಣೆ ಆಯೋಗಕ್ಕೆ ನೌಕಾ ಸೇನೆ ಮಾಜಿ ಮುಖ್ಯಸ್ಥ ದೂರು ಯೋಗಿ ಮೇಲೆ ಚುನಾವಣೆ ಆಯೋಗಕ್ಕೆ ನೌಕಾ ಸೇನೆ ಮಾಜಿ ಮುಖ್ಯಸ್ಥ ದೂರು

ಚುನಾವಣಾ ಲಾಭಕ್ಕಾಗಿ ಸೈನ್ಯ ಸೇರಿದಂತೆ ಇನ್ನಾವುದೇ ಸರ್ಕಾರಿ ಸಂಸ್ಥೆಗಳನ್ನು ಅದರ ಹೆಸರುಗಳನ್ನು ಬಳಸಬಾರದೆಂದು ಕೇಂದ್ರ ಚುನಾವಣಾ ಆಯೋಗವು ಚುನಾವಣೆ ಘೋಷಿಸಿದಂತೆ ಸ್ಪಷ್ಟಪಡಿಸಿತ್ತು, ಆದರೆ ಯೋಗಿ ಆದಿತ್ಯನಾಥ ಅವರು ಈ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.

Election commission issue notice to CM Yogi Adityanath

ಏಪ್ರಿಲ್ 1 ರಂದು ಗಾಜಿಯಾಬಾದ್‌ನ ಸಮಾವೇಶವೊಂದರಲ್ಲಿ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ ಅವರು, ಕಾಂಗ್ರೆಸ್, ಎಸ್‌ಪಿ-ಬಿಎಸ್‌ಪಿಗೆ ಸಾಧ್ಯವಾಗದ್ದು ಬಿಜೆಪಿಗೆ ಸಾಧ್ಯವಾಗುತ್ತದೆ. ಕಾಂಗ್ರೆಸ್‌ನವರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು, ಆದರೆ ಮೋದಿ ಸೇನೆ ಉಗ್ರರಿಗೆ ಗುಂಡು ಮತ್ತು ಬಾಂಬ್‌ಗಳನ್ನು ತಿನ್ನಿಸುತ್ತಿದೆ ಎಂದು ಹೇಳಿದ್ದರು.

ಮೋದಿ ಅವರ ಸೇನೆ: ವಿವಾದ ಸೃಷ್ಟಿಸಿದ ಯೋಗಿ ಆದಿತ್ಯನಾಥ್ ಹೇಳಿಕೆ ಮೋದಿ ಅವರ ಸೇನೆ: ವಿವಾದ ಸೃಷ್ಟಿಸಿದ ಯೋಗಿ ಆದಿತ್ಯನಾಥ್ ಹೇಳಿಕೆ

ಯೋಗಿ ಆದಿತ್ಯನಾಥ ಅವರ ಈ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭಾರತೀಯ ಸೇನೆಯನ್ನು ಮೋದಿಯ ಸೇನೆ ಎಂದ ಯೋಗಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ದೂರು ಸಹ ದಾಖಲಿಸಿತ್ತು.

English summary
Election commission issue notice to Uttar Pradesh CM Yogi Adityanath. Yogi said, Indian Army is Modi's Army so EC issued notice and ask clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X