ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಜಾಹೀರಾತು ವೆಚ್ಚ: ಬಿಜೆಪಿಗೇ ಅಗ್ರಸ್ಥಾನ

|
Google Oneindia Kannada News

ನವದೆಹಲಿ, ಏಪ್ರಿಲ್ 04: ಚುನಾವಣೆಯ ಸಲುವಾಗಿ ರಾಜಕೀಯ ಪಕ್ಷಗಳು ಜಾಹೀರಾತಿಗಾಗಿ ಮಾಡಿದ ವೆಚ್ಚದ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ ಎಂದು ಸರ್ಚ್ ಇಂಜಿನ್ ಗೂಗಲ್ ನೀಡಿದ ವರದಿ ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಫೆಬ್ರವರಿ 19 ರವರೆಗೆ ರಾಜಕೀಯ ಪಕ್ಷಗಳು ಬರೋಬ್ಬರಿ 37 ಕೋಟಿ ರೂಪಾಯಿಯಷ್ಟನ್ನು ಜಾಹೀರಾತಿಗಾಗಿ ವೆಚ್ಚಮಾಡಿವೆ. ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಜಾಹೀರಾತಿಗಾಗಿ ಅತೀ ಹೆಚ್ಚು ವೆಚ್ಚ ಮಾಡಿದ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದರೆ, ವೈ ಎಸ್ ಆರ್ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಆಅರನೇ ಸ್ಥಾನದಲ್ಲಿದೆ.

ಟಿಡಿಪಿ ಪಟ್ಟಿ ಬಿಡುಗಡೆ, ನಂ.1 ಶ್ರೀಮಂತ ಸಂಸದ ಮತ್ತೊಮ್ಮೆ ಅಭ್ಯರ್ಥಿಟಿಡಿಪಿ ಪಟ್ಟಿ ಬಿಡುಗಡೆ, ನಂ.1 ಶ್ರೀಮಂತ ಸಂಸದ ಮತ್ತೊಮ್ಮೆ ಅಭ್ಯರ್ಥಿ

ಒಟ್ಟು 554 ಜಾಹೀರಾತುಗಳನ್ನು ನೀಡಿರುವ ಬಿಜೆಪಿ ಅದಕ್ಕಾಗಿ 1.21 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ವೈ ಎಸ್ ಆರ್ ಕಾಂಗ್ರೆಸ್ 1.04 ಕೋಟಿ ವೆಚ್ಚಮಾಡಿದ್ದರೆ, ಕಾಂಗ್ರೆಸ್ ಕೇವಲ 54,100 ರೂಪಾಯಿಗಳನ್ನು ವೆಚ್ಚಮಾಡಿದೆ ಎಂದು ಗೂಗಲ್ ವರದಿ ತಿಳಿಸಿದೆ. ಮೂರನೇ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಜಾಹೀರಾತಿಗಾಗಿ 85.25 ಲಕ್ಷ ರೂಪಾಯಯಿಗಳನ್ನು ವೆಚ್ಚಮಾಡಿದೆ.

Election ads in Google BJP in top of the list

ಗೂಗಲ್ ನಾಲ್ಕು ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ತಡೆಹಿಡಿದಿದ್ದು, ಗೂಗಲ್ ನ ನಿಯಮಗಳನ್ನು ಅದು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಈ ನಾಲ್ಕು ಪಕ್ಷಗಳು ಯಾವವು ಎಂಬ ಬಗ್ಗೆ ಅದು ಮಾಹಿತಿ ನೀಡಿಲ್ಲ.

English summary
Political Parties have spent more than Rs.37 crore for advertisements on Google flatform. BJP is in top place, Congress in 6th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X