ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈದ್ 2022: ದೇಶದಾದ್ಯಂತ ರಂಜಾನ್ ಸಂಭ್ರಮ, ಶಾಂತಿಗಾಗಿ ಪ್ರಾರ್ಥನೆ

|
Google Oneindia Kannada News

ನವದೆಹಲಿ ಮೇ 03: ಇಂದು ದೇಶಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರೀತಿ ಮತ್ತು ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಜೊತೆಗೆ ಶಾಂತಿಗಾಗಿ ಪ್ರಾರ್ಥಿಸಲಾಗುತ್ತಿದೆ. ಪರಸ್ಪರ ಪ್ರೀತಿಯ ಅಪ್ಪುಗೆಯ ಮೂಲಕ ಶುಭ ಹಾರೈಸುವ ಹಾಗೂ ಮನೆ ಮನೆಗಳಲ್ಲಿ ಸಿಹಿ ತಿನಿಸುಗಳ ತಯಾರಿಕೆಯೊಂದಿಗೆ ಅತಿಥಿಗಳನ್ನು ಆಹ್ವಾನಿಸುವ ದೃಶ್ಯಗಳು ಕಂಡುಬರುತ್ತಿವೆ. ಒಂದು ತಿಂಗಳ ಕಠಿಣ ಉಪವಾಸದ ನಂತರ ರಂಜಾನ್ ಆಚರಿಸಲಾಗುತ್ತಿದೆ.

ರಂಜಾನ್ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿದ ಮೋದಿರಂಜಾನ್ ಪ್ರಯುಕ್ತ ದೇಶದ ಜನತೆಗೆ ಶುಭ ಹಾರೈಸಿದ ಮೋದಿ

ಈ ದಿನದಂದು ಜನರ ಮನೆಗಳಲ್ಲಿ ವರ್ಮಿಸೆಲ್ಲಿಯನ್ನು(ಶಾವಿಗೆ ಪಾಯಿಸಾ) ತಯಾರಿಸಲಾಗುತ್ತದೆ. ಆದ್ದರಿಂದ ಈ ಹಬ್ಬವನ್ನು 'ಸ್ವೀಟ್ ಈದ್' ಎಂದೂ ಕರೆಯುತ್ತಾರೆ. ಪ್ರಸ್ತುತ, ದೇಶದ ವಿವಿಧ ರಾಜ್ಯಗಳಿಂದ ಜನರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಚಿತ್ರಗಳು ಹೊರಬರುತ್ತಿದ್ದು, ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Eid 2022: Ramzan celebration across the country, praying for peace

ರಂಜಾನ್ ವಿಶೇಷ ಖಾದ್ಯ

ದಮ್‌ ಬಿರಿಯಾನಿ, ಹಲೀಮ್‌, ಒಂಟೆ ಮಾಂಸದ ಬಿರಿಯಾನಿ, ವೆಜ್‌ ಸಮೋಸಾ, ಒಣ ಹಣ್ಣು... ಹೀಗೆ ನಾನ್‌ವೆಜ್‌ ಮತ್ತು ವೆಜ್‌ ಖಾದ್ಯಗಳನ್ನು ರಂಜಾನ್ ದಿನದಂದು ತಯಾರಿಸಲಾಗುತ್ತದೆ. ನಾನಾ ಬಗೆಯ ಚಿಕನ್‌, ಮಟನ್‌ ಖಾದ್ಯದ ಜತೆಗೆ ರಂಜಾನ್‌ ಹಬ್ಬಕ್ಕಾಗಿಯೇ ಹಲವು ರೀತಿಯ ಸ್ಪೆಷಲ್‌ ಫುಡ್‌ ರೆಡಿ ಆಗುತ್ತವೆ. ಅವುಗಳಲ್ಲಿ ವಿಶೇಷವಾದದ್ದು ಮಟನ್‌ ಮತ್ತು ಚಿಕನ್‌ನಲ್ಲಿ ತಯಾರಾಗುವ ಹಲೀಮ್‌. ಹೈದರಾಬಾದಿ ಹಲೀಮ್‌ ಅಂತಾನೇ ಫೇಮಸ್‌ ಆಗಿರುವ ಲೋಕಪ್ರಿಯ ಸ್ವಾದಿಷ್ಟ ಡಿಶ್‌ ಇದು.

Eid 2022: Ramzan celebration across the country, praying for peace

Recommended Video

CSK ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್ ಹೇಗೆ ರೆಡಿಯಾಗಿದ್ದಾರೆ ಗೊತ್ತಾ? | Oneindia Kannad

ಪತ್ಥರ್‌ ಘೋಷ್‌ ಕೂಡ ರಂಜಾನ್‌ನ ಮತ್ತೊಂದು ಸ್ಪೆಷಲ್‌ ಡಿಶ್‌. ಚಪ್ಪಡಿ ಕಲ್ಲುಗಳನ್ನು ಬೆಂಕಿಯಲ್ಲಿ ಕಾಯಿಸಿ, ಬಿಸಿಯಾಗಿರುವ ಆ ಕಲ್ಲಿನ ಮೇಲೆ ಮಾಂಸಕ್ಕೆ ಮಸಾಲೆ ಹಾಕಿ ಬೇಯಿಸುತ್ತಾರೆ. ವೆಜ್‌ ಪ್ರಿಯರಿಗಾಗಿ ಶೀರ್‌ ಕೂರ್ಮಾ ತಯಾರಿಸಲಾಗುತ್ತದೆ. ತೆಳು, ಗೋಡಂಬಿ, ಖರ್ಜೂರ, ಪಿಸ್ತಾ, ಬಾದಾಮಿ ಹೀಗೆ ಒಣ ಹಣ್ಣುಗಳನ್ನು ಮಿಕ್ಸ್‌ ಮಾಡಿ ತಯಾರಿಸಿದ ಸಿಹಿ ತಿಂಡಿ ಇದಾಗಿದ್ದು, ತಿನ್ನುವುದರ ಜತೆ ಕುಡಿಯುವ ಅನುಭವ ಕೂಡ ಕೊಡಲಿದೆ.

English summary
Ramzan 2022: Today has made Ramzan a celebratory home across the country. Praying for peace by Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X