ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡಿಟರ್ಸ್ ಗಿಲ್ಡ್‌ನಿಂದ ಎಂಜೆ ಅಕ್ಬರ್, ತರುಣ್ ತೇಜ್ ಪಾಲ್ ಅಮಾನತು

|
Google Oneindia Kannada News

ನವದೆಹಲಿ, ಡಿಸೆಂಬರ್ 12: ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಹಿರಿಯ ಪತ್ರಕರ್ತ, ಮಾಜಿ ಸಚಿವ ಎಂಜೆ ಅಕ್ಬರ್ ಮತ್ತು ತೆಹೆಲ್ಕಾ ಸಂಪಾದಕ ತರುಣ್ ತೇಜ್ ಪಾಲ್ ಅವರನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಅಮಾನತು ಮಾಡಿದೆ.

ಎಂಜೆ ಅಕ್ಬರ್ ಅವರು ತಮ್ಮ ಮೇಲೆ 'ಮೀಟೂ' ಆರೋಪ ಮಾಡಿರುವ ಪತ್ರಕರ್ತೆ ವಿರುದ್ಧ ಸಲ್ಲಿಸಿರುವ ಮಾನಹಾನಿ ದೂರು ಇತ್ಯರ್ಥವಾಗುವವರೆಗೂ ಅವರ ಅಮಾನತು ಜಾರಿಯಲ್ಲಿ ಇರಲಿದೆ.

ಎಂಜೆ ಅಕ್ಬರ್ ಪರಿಪೂರ್ಣ ಸಂಭಾವಿತ: ಮಾಜಿ ಮಹಿಳಾ ಸಹೋದ್ಯೋಗಿಯ ಬೆಂಬಲಎಂಜೆ ಅಕ್ಬರ್ ಪರಿಪೂರ್ಣ ಸಂಭಾವಿತ: ಮಾಜಿ ಮಹಿಳಾ ಸಹೋದ್ಯೋಗಿಯ ಬೆಂಬಲ

ಅಕ್ಬರ್ ಅವರು ಸಂಪಾದಕರಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಅವರ ಮಾಜಿ ಸಹೋದ್ಯೋಗಿ ಪ್ರಿಯಾ ರಮಣಿ ಆರೋಪ ಮಾಡಿದ್ದರು. ಇದು ಬಾರಿ ವಿವಾದ ಸೃಷ್ಟಿಸಿತ್ತು. ಇದರಿಂದ ಕೇಂದ್ರದಲ್ಲಿ ಸಚಿವರಾಗಿದ್ದ ಅಕ್ಬರ್, ರಾಜೀನಾಮೆ ನೀಡಬೇಕಾಗಿತ್ತು.

Editors guild of india decided to suspend mj akbar and tarun tejpal

ಬಳಿಕ ಅವರು ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.

ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ತೆಹೆಲ್ಕಾ ಸಂಪಾದಕ ತರುಣ್ ತೇಜ್ ಪಾಲ್ ಅವರ ವಿರುದ್ಧವೂ ಇಜಿಐ ಇದೇ ರೀತಿ ನಿರ್ಧಾರ ತೆಗೆದುಕೊಂಡಿದೆ.

ಸಮ್ಮತದ ಸಂಬಂಧವಲ್ಲ, ನಡೆದದ್ದು ಅತ್ಯಾಚಾರ : ಅಕ್ಬರ್ಗೆ ಪಲ್ಲವಿ ತಿರುಗೇಟುಸಮ್ಮತದ ಸಂಬಂಧವಲ್ಲ, ನಡೆದದ್ದು ಅತ್ಯಾಚಾರ : ಅಕ್ಬರ್ಗೆ ಪಲ್ಲವಿ ತಿರುಗೇಟು

Editors guild of india decided to suspend mj akbar and tarun tejpal

2013ರ ನವೆಂಬರ್‌ನಲ್ಲಿ ತಮ್ಮ ಕಿರಿಯ ಸಹೋದ್ಯೋಗಿಯೊಬ್ಬರ ಮೇಲೆ ತೇಜ್ ಪಾಲ್ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.

ಇಜಿಐ ಆರೋಪ ಎದುರಿಸುತ್ತಿರುವ ಪತ್ರಕರ್ತರ ಪಟ್ಟಿಯನ್ನು ಕಳೆದ ತಿಂಗಳು ಪ್ರಕಟಿಸಿತ್ತು. ಅದರಲ್ಲಿ ಅಕ್ಬರ್ ಮತ್ತು ತರುಣ್ ಅವರ ಹೆಸರೂ ಇತ್ತು.

English summary
Editors Guild of India on Wednesday decided to suspend MJ Akbar and Tarun Tejpal who are facing sexual harassment and rape allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X