ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್: ಸುಪ್ರೀಂ ಮೆಟ್ಟಿಲೇರಿದ ಭಾರತದ ಸಂಪಾದಕರ ಕೂಟ

|
Google Oneindia Kannada News

ನವದೆಹಲಿ, ಆಗಸ್ಟ್ 03: ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಕುರಿತಾಗಿ ಭಾರತೀಯ ಸಂಪಾದಕರ ಕೂಟ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಪೆಗಾಸಸ್ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾದ ಭಾರತೀಯ ಸಂಪಾದಕರ ಕೂಟ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಪೆಗಾಸಸ್ ಮಾಹಿತಿ ಬಹಿರಂಗಕ್ಕೆ ಸುಪ್ರೀಂ ಮೊರೆ ಹೋದ ಐವರು ಪತ್ರಕರ್ತರುಪೆಗಾಸಸ್ ಮಾಹಿತಿ ಬಹಿರಂಗಕ್ಕೆ ಸುಪ್ರೀಂ ಮೊರೆ ಹೋದ ಐವರು ಪತ್ರಕರ್ತರು

ಬೇಹು- ತಂತ್ರಾಂಶ ಅಳವಡಿಸಲು ವಿದೇಶಿ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದ ವಿವರ ಮತ್ತು ಅಂತಹ ತಂತ್ರಾಂಶ ಬಳಸಿದ ವ್ಯಕ್ತಿಗಳ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಮನವಿಯಲ್ಲಿ ಕೋರಲಾಗಿದೆ.

Editors Guild Goes To Supreme Court, Seeks Probe Into Pegasus Scandal

ಎಲೆಕ್ಟ್ರಾನಿಕ್ ಕಣ್ಗಾವಲು, ಹ್ಯಾಕಿಂಗ್ ಮತ್ತು ಬೇಹು- ತಂತ್ರಾಂಶ ಬಳಕೆ ಹಾಗೂ ಕಣ್ಗಾವಲು ಕುರಿತಂತೆ ಈಗಿರುವ ಕಾನೂನು ವ್ಯವಸ್ಥೆಯ ಸಾಂವಿಧಾನಿಕ ಅಧಿಕಾರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಪ್ರಶ್ನಿಸಿದೆ.

ವಕೀಲರಾದ ರೂಪಾಲಿ ಸ್ಯಾಮ್ಯುಯೆಲ್, ರಾಘವ್ ಟಾಂಖಾ ಮತ್ತು ಎಲ್ಜಫೀರ್ ಅಹ್ಮದ್ ಬಿಎಫ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಮನವಿಯ ಇತರ ಪ್ರಮುಖಾಂಶಗಳು: ಸಂವಿಧಾನದತ್ತವಾಗಿ ನೀಡಲಾದ ತನ್ನ ಅಧಿಕಾರದ ಎಲ್ಲೆಯನ್ನು ಆಡಳಿತಾರೂಢ ಸರ್ಕಾರ ಮೀರಿದೆಯೇ ಮತ್ತು ತಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಯವುದು ದೇಶದ ನಾಗರಿಕರ ಹಕ್ಕಾಗಿದೆ.

*ಸಂಸತ್ತಿನ ಪ್ರಕ್ರಿಯೆಗಳ ಮೂಲಕ ಉತ್ತರದಾಯಿತ್ವ ಬಯಸುವ ಮತ್ತು ಸಾಂವಿಧಾನಿಕ ಮಿತಿಗಳನ್ನು ಜಾರಿಗೊಳಿಸುವ ಎಲ್ಲಾ ಪ್ರಯತ್ನಗಳಿಗೆ ಕಲ್ಲು ತೂರಲಾಗಿದೆ.

*ಬೇಹು- ತಂತ್ರಾಂಶ ಬಳಸಿ ಪತ್ರಕರ್ತರನ್ನು ವಿಶೇಷವಾಗಿ ಗುರಿ ಮಾಡಲಾಗಿದ್ದು ಪತ್ರಿಕಾ ಸ್ವಾತಂತ್ರ್ಯ ಎಂಬುದು ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳು ಪತ್ರಕರ್ತರ ವರದಿಗಾರಿಕೆಯಲ್ಲಿ ಹಸ್ತಕ್ಷೇಪ ಮಾಡದೇ ಇರುವುದನ್ನು ಆಧರಿಸಿದೆ.

*ಸಂಬಂಧಿತ ಕಾನೂನಿನಡಿ ಭಾರತೀಯ ನಾಗರಿಕರ ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರತಿಬಂಧಿಸುವ ಮತ್ತು ಮೇಲ್ವಿಚಾರಣೆಗೆ ಅಧಿಕಾರ ನೀಡಿದ ಆದೇಶಗಳನ್ನು ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು.

ಮನವಿ ಈ ಕೆಳಗಿನವುಗಳ ಬಗ್ಗೆ ಮಾಹಿತಿ ಕೋರಿದೆ: - ಕೇಂದ್ರ ಸರ್ಕಾರ ಅದರ ಯಾವುದೇ ಏಜೆನ್ಸಿಗಳು ಭಾರತೀಯ ನಾಗರಿಕರ ಮೇಲೆ ಪ್ರಯೋಗಿಸಲೆಂದು ಎನ್‌ಎಸ್‌ಒ ಗ್ರೂಪ್‌ ಅಥವಾ ಅದರ ಸಮೂಹ ಕಂಪೆನಿಗಳು ಇಲ್ಲವೆ ಅಧೀನ ಸಂಸ್ಥೆಗಳಿಂದ ಪೆಗಸಸ್‌ ಬೇಹು ತಂತ್ರಾಂಶ ಖರೀದಿಸಿ, ಪರವಾನಗಿ ನೀಡಿ ಮತ್ತು ಅಥವಾ ಅದನ್ನು ಬಳಕೆ ಮಾಡಿವೆಯೇ?

* ಕೇಂದ್ರ ಸರ್ಕಾರ ಅದರ ಯಾವುದೇ ಏಜೆನ್ಸಿಗಳು ಭಾರತೀಯ ನಾಗರಿಕರ ಮೇಲೆ ಪ್ರಯೋಗಿಸಲೆಂದು ಎನ್‌ಎಸ್‌ಒ ಗ್ರೂಪ್‌ ಅಥವಾ ಅದರ ಸಮೂಹ ಕಂಪೆನಿಗಳು ಇಲ್ಲವೆ ಅಧೀನ ಸಂಸ್ಥೆಗಳಿಂದ ಬೇರೆ ಹೆಸರಿನ ಬೇಹು- ತಂತ್ರಾಂಶ ಸಾಧನಗಳನ್ನು ಖರೀದಿಸಿ, ಪರವಾನಗಿ ನೀಡಿ ಮತ್ತು ಅಥವಾ ಅದನ್ನು ಬಳಕೆ ಮಾಡಿವೆಯೇ?

*ಭಾರತೀಯ ನಾಗರಿಕರ ಮೇಲೆ ಬಳಸಲು ಬೇಹು ತಂತ್ರಾಂಶ, ಹ್ಯಾಕಿಂಗ್ ಅಥವಾ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆ ಪೂರೈಕೆಗಾಗಿ ವಿದೇಶಿ ಕಂಪನಿಗಳೊಂದಿಗೆ ಯಾವುದೇ ಒಪ್ಪಂದ, ಒಡಂಬಡಿಕೆ, ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದರೆ ಅದನ್ನು ಹಾಜರುಪಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು.

* ಎಲೆಕ್ಟ್ರಾನಿಕ್ ಕಣ್ಗಾವಲು, ಹ್ಯಾಕಿಂಗ್ ಅಥವಾ ಬೇಹುಗಾರಿಕೆಗೆ ಒಳಪಟ್ಟಿದ್ದ ಜನರ ಪಟ್ಟಿಯಲ್ಲಿನ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರಕ್ಕೆ ನಿರ್ದೇಶಿಸಬೇಕು. ಪಟ್ಟಿ ತಯಾರಿಸಿದವರ ವಿವರಗಳು, ಅವರ ಹೆಸರು ನೀಡಿದವರ ಮಾಹಿತಿ ಹಾಗೂ ಪಟ್ಟಿಯಲ್ಲಿರುವ ಪ್ರತಿಯೊಬ್ಬ ನಾಗರಿಕರ ವಿವರಗಳು ದೊರೆಯಬೇಕು.

*ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ನಾಲ್ಕನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ಇದಕ್ಕೂ ಮುನ್ನ, ವಕೀಲರಾದ ಎಂಎಲ್ ಶರ್ಮಾ, ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್ ಮತ್ತು ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿಕುಮಾರ್ ಕೂಡ ಹಗರಣದ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು.

ಈ ಅರ್ಜಿಗಳ ವಿಚಾರಣೆ ಇದೇ ಗುರುವಾರ ನಡೆಯಲಿದೆ. ಇದಲ್ಲದೆ ಪೆಗಸಸ್‌ ಗೂಢಚರ್ಯೆಗೆ ನೇರವಾಗಿ ತುತ್ತಾದ ಐವರು ಪತ್ರಕರ್ತರು ಕೂಡ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗಕ್ಕೆ ಕೋರಿ ಐವರು ಪತ್ರಕರ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಪೆಗಾಸ್‌ ತಂತ್ರಾಂಶದಿಂದ ಗೂಢಾಚಾರಿಕೆಗೆ ಒಳಗಾಗಿದ್ದಾರೆ ಎನ್ನಲಾದ ಪರಂಜಾಯ್ ಗುಹಾ, ಎಸ್‌ಎನ್‌ಎಂ ಆಬ್ಡಿ, ಪ್ರೇಂ ಶಂಕರ್ ಜಾ, ರೂಪೇಶ್ ಕುಮಾರ್ ಸಿಂಗ್, ಇಪ್ಸಾ ಶತಾಕ್ಷಿ ಇವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಐವರು ಪತ್ರಕರ್ತರಾಗಿದ್ದಾರೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ಐವರು ಪತ್ರಕರ್ತರ ಮೊಬೈಲ್‌ಗಳನ್ನು ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ಮಾಡಲಾಗಿತ್ತು. ಈ ಅರ್ಜಿದಾರರ ಪ್ರಕಾರ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಅವರ ಮೊಬೈಲ್‌ನ್ನು ಫಾರೆನ್ಸಿಕ್ ಪರೀಕ್ಷೆಯನ್ನು ನಡೆಸಿದೆ. ಪೆಗಾಸಸ್ ತಂತ್ರಾಂಶ ಬಳಸಿರುವುದು ಬಹಿರಂಗವಾಗಿದೆ.

ನಮ್ಮ ಮೊಬೈಲ್‌ನ್ನು ಸರ್ಕಾರ ಅಥವಾ ಮೂರನೇ ವ್ಯಕ್ತಿಯು ಪೆಗಾಸಸ್ ಮೂಲಕ ಬೇಹುಗಾರಿಕೆ ಮಾಡಿರುವ ಸಾಧ್ಯತೆ, ಇದನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ಇಂತಹ ಪ್ರಯತ್ನದಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅದಲ್ಲದೆ ಮೂಲಭೂತ ಹಕ್ಕಾದ ಖಾಸಗಿತನಕ್ಕೂ ಧಕ್ಕೆಯಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪೆಗಾಸಸ್ ಸ್ಪೈವೇರ್ ಬಳಕೆಯನ್ನು ಬಹಿರಂಗಪಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಐದು ಪತ್ರಕರ್ತರು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಸರ್ಕಾರಿ ಏಜೆನ್ಸಿಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ( ಮಾಹಿತಿ ಕೃಪೆ: ಬಾರ್ & ಬೆಂಚ್).

English summary
The Editors' Guild of India has gone to the Supreme Court, seeking an investigation into the Pegasus spyware scandal. The Guild has asked the court to form a Special Investigation Team to probe the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X